ಲೇ: ಎನ್.ಜಯಭೀಮ ಜೊಯಿಸ್.
ಶಿವಮೊಗ್ಗ
“ಕೃಷ್ಣ ಕೃಷ್ಣ ಕೃಷ್ಣಯೆಂದು ಮೂರು ಬಾರಿ ನೆನೆಯಿರೋ/
ಸಂತುಷ್ಟವಾಗಿ ಮುಕುತಿ ಕೊಟ್ಟು ಮಿಕ್ಕ ಭಾರ
ಹೊರುವನೋ//
ಶ್ರಾವಣ ಮಾಸ ಬಂತೆಂದರೆ ಸಾಕು ಸಾಲು
ಸಾಲು ಹಬ್ಬಗಳು ಬರುತ್ತವೆ.
ಶ್ರಾವಣ ಬಹುಳ ಅಷ್ಟಮಿ ದಿವಸವನ್ನು
ಶ್ರೀಕೃಷ್ಣ ಜನ್ಮಾಷ್ಟಮಿಯನ್ನಾಗಿ ಆಚರಿಸುತ್ತಾರೆ.ಕೃಷ್ಣ ಜನ್ಮಾಷ್ಟಮಿಭಾರತದಲ್ಲಿ ಆಚರಿಸಲ್ಪಡುವ ಒಂದು ಪ್ರಮುಖವಾದ ಹಬ್ಬ.ಕೃಷ್ಣ ಹುಟ್ಟಿದ ದಿನವನ್ನು”ಶ್ರೀಕೃಷ್ಣ ಜನ್ಮಾಷ್ಟಮಿ ಅಥವಾ “ಶ್ರೀಗೋಕುಲಾಷ್ಟಮಿ” ಎಂದು ಬಹಳ
ವೈಭವಯುತವಾಗಿ ಆಚರಿಸಲಾಗುತ್ತದೆ.
ಜನ್ಮಾಷ್ಟಮಿಯ ಮಹೋದ್ದೇಶ ಸೌಹಾರ್ದತೆಯಿಂದ ಧರ್ಮವನ್ನು ಕಾಪಾಡು
ವುದು ಮತ್ತು ದ್ವೇಷ,ಅಸೂಯೆ ಎಂಬ ದುಷ್ಟ
ಶಕ್ತಿಗಳನ್ನುದೂರವಿರಿಸುವುದು.
ಭಗವಂತ ಶ್ರೀವಿಷ್ಣು ದುಷ್ಟರ ಸಂಹಾರ ಮತ್ತು
ಶಿಷ್ಟರ ಸಂರಕ್ಷಣೆಗಾಗಿ ದಶಾವತಾವರೆನ್ನೆತ್ತಿ
ದ್ದಾನೆ,ಅದರಲ್ಲಿ ಕೃಷ್ಣಾವತಾರವೂ ಒಂದು.
ಯಾವಾಗ ಮತ್ತು ಎಲ್ಲೆಲ್ಲಿ ಧರ್ಮದಲ್ಲಿ ಏರುಪೇರುಗಳು ವ್ಯಕ್ತಗೊಂಡು,ಅಧರ್ಮವು
ತಾಂಡವವಾಡುತ್ತದೆಯೋ ಆಗ ಶಿಷ್ಟರ ರಕ್ಷಣೆ
ಮತ್ತು ದುಷ್ಟರ ನಿಗ್ರಹಕ್ಕಾಗಿ ಹಾಗೂ ಧರ್ಮ
ವನ್ನು ಪುನರ್ಸ್ಥಾಪಿಸಲು ಭಗವಂತನೇ ಅವತರಿಸಿ ಬರುತ್ತಾನೆ.
ಕೃಷ್ಣ ತನ್ನ ಬಾಲ್ಯದಿಂದಲೂ ದುಷ್ಟ ಶಕ್ತಿಗಳನ್ನು
ಸೆದೆ ಬಡಿಯುತ್ತಾ ಜಗತ್ತಿನ ಕಲ್ಯಾಣವನ್ನು
ಮಾಡಿದನು.ಕೃಷ್ಣನ ಹುಟ್ಟು ವಿಶೇಷತೆಯಿಂದ ಕೂಡಿತ್ತು ಹಾಗೆಯೇ ಜೀವನದ ದಾರಿಯೂ
ಸಾಕಷ್ಟು ಸ್ವಾರಸ್ಯ ಹಾಗೂ ಜೀವನದ ಮೌಲ್ಯಗಳಿಂದಕೂಡಿದೆ.ವಿಶೇಷವಾಗಿವ್ಯಕ್ತಿ
ಜೀವನದಲ್ಲಿ ಯಾವ ಬಗೆಯ ದಾನ ಧರ್ಮ
ಸತ್ಯ ಸಂಗತಿಗಳೊಂದಿಗೆ ಬದುಕಬೇಕು
ಎನ್ನುವುದನ್ನು ತಿಳಿಸಿಕೊಡುತ್ತದೆ.
ರಾಮ,ಕೃಷ್ಣರು ಅವತಾರ ಮಾಡಿದ್ದೇ ಧರ್ಮ ರಕ್ಷಣೆಗಾಗಿ.ರಾಮ ಮರ್ಯಾದಾ ಪುರುಷೋತ್ತಮನಾದರೆ,ಕೃಷ್ಣ ಲೀಲಾ ಪುರುಷೋತ್ತಮನು.ರಾಮ ಯುದ್ಧವನ್ನು
ಮಾಡಿ ಯುದ್ಧವನ್ನು ಗೆಲ್ಲುವ ಚತುರತೆ ಹೊಂದಿದ್ದರೆ,ಕೃಷ್ಣ ಯುದ್ಧವನ್ನು ಮಾಡದೆಯೇ ಯುದ್ಧದಲ್ಲಿ ಜಯವನ್ನುಗಳಿಸುವ ಚತುರತೆಯನ್ನು ಹೊಂದಿದವನು.
ರಾಮಾವತಾರ ಏಳನೆಯ ಅವತಾರವಾದರೆ
ಕೃಷ್ಣಾವತಾರ ಎಂಟನೆಯದಾಗಿದೆ.ರಾಮಕೃಷ್ಣರ ಅವತಾರ ಅಕ್ಕಪಕ್ಕದಲ್ಲಿದೆ.
ತನ್ನ ಅವತಾರದ ಮಹತ್ವ ಮತ್ತು ಧರ್ಮ ಸಂಸ್ಥಾಪನೆಯ ಉದ್ದೇಶವನ್ನು ಕೃಷ್ಣನು
ಅರ್ಜುನನಿಗೆ ಮಹಾಭಾರತ ಯುದ್ಧದ ಆರಂಭದಲ್ಲಿ ಬೋಧಿಸಿದ್ದಾನೆ.ಶ್ರೀಕೃಷ್ಣನು
ಅರ್ಜುನನಿಗೆ ಬೋಧಿಸಿದ ಉಪದೇಶವೇ
“ಭಗವದ್ಗೀತೆ” ಎಂಬ ಉತ್ಕೃಷ್ಟ ಗ್ರಂಥ
ವಾಗಿದೆ.
ಭಗವದ್ಗೀತೆಯನ್ನು ಅರಿತುಕೊಂಡವರು
ಜೀವನದ ಮೌಲ್ಯಗಳನ್ನು ತಿಳಿದುಕೊಳ್ಳುತ್ತಾರೆ ಮತ್ತು ಬದುಕಿನ ಪ್ರಮುಖ ಅಂಶಗಳನ್ನು ತಿಳಿದುಕೊಳ್ಳುತ್ತಾರೆ.
ಬರಿಯ ಭಗವದ್ಗೀತೆಯ ಸಾರವನ್ನು ಮಾತ್ರವೇ ಶ್ರೀಕೃಷ್ಣನು ಬೋಧಿಸದೆ ತಮ್ಮಜೀವನದಿಂದಲೂ ಮಾನವ ಅರಿತುಕೊಳ್ಳಬೇಕಾದ ಅಂಶಗಳನ್ನು ತಿಳಿಸಿಕೊಟ್ಟಿದ್ದಾರೆ.
ಇಂದಿನದ್ದು ನಾಳೆ ಇರುವುದಿಲ್ಲ.ಹಿಂದೆ ಏನು
ನಡೆದಿದೆಯೋ ಅದು ಮುಗಿಯಿತು.ಅದು ಎಂದಿಗೂ ಮರಳಿ ಬರುವುದಿಲ್ಲ.ಈ ಕ್ಷಣದಲ್ಲಿ
ಬದುಕುವುದು ಹೆಚ್ಚು ಮುಖ್ಯವಾದುದು ಮತ್ತು ಪ್ರತಿಯೊಂದು ಕ್ಷಣವನ್ನು ಅರ್ಥಪೂರ್ಣಗೊಳಿಸಿ ಎಂಬುದುಶ್ರೀಕೃಷ್ಣನುತಿಳಿಸಿದಸಾರವಾಗಿದೆ.ಜೀವನದ ಬಂಧಗಳನ್ನುಕಳಚಿಕೊಂಡುಸಮಯದೊಂದಿಗೆ ಸಾಗಬೇಕು.ಕೃಷ್ಣನಿಂದ ಪ್ರಮುಖವಾಗಿ ಕಲಿಯಬೇಕಾದ ಪಾಠ ಇದಾಗಿದೆ.ಕರ್ಮವು ಒಂದು ಕರ್ತವ್ಯವಾಗಿದ್ದುಇದನ್ನು ಪ್ರತಿಯೊಬ್ಬ ಮಾನವರೂ ನಿರ್ವಹಿಸಬೇಕಾಗಿದೆ.ಧರ್ಮದ ಹಾದಿಯು ಹೆಚ್ಚು ಸರಿಯಾದ ಮಾರ್ಗವಾಗಿದೆ.ಕುರುಕ್ಷೇತ್ರ ಯುದ್ಧ ಸಮಯದಲ್ಲಿ ತನ್ನ ಕುಟುಂಬದವರೊಂದಿಗೆ ಯುದ್ಧ ಮಾಡಲುಹಿಂದೇಟು ಹಾಕಿದಾಗ ಧರ್ಮದ ಹಾದಿಯನ್ನು ಹಿಡಿಯಲು ಶ್ರೀಕೃಷ್ಣನು ಅರ್ಜುನನಿಗೆ ಬೋಧಿಸುತ್ತಾನೆ.ಮಾನವತ್ವದೆಡೆಗೆ ಅರ್ಜುನನ ಕೆಲಸಗಳನ್ನು ಕೃಷ್ಣನುನೆನಪಿಸುತ್ತಾನೆ.ಬರಿಯ ಮಾನವನಂತೆ ಸಂಬಂಧಗಳೆಂಬ ಬಂಧನವನ್ನು ಕಳಚಿಟ್ಟುಧರ್ಮಕ್ಕಾಗಿ ಯುದ್ಧಮಾಡಲುಕೃಷ್ಣನು ಅರ್ಜುನನಿಗೆ ಹೇಳುತ್ತಾನೆ.ಧರ್ಮದ ರಕ್ಷಣೆಗಾಗಿ ಸಂಬಂಧಗಳನ್ನು ಬದಿಗಿಟ್ಟುಹೋರಾಡಬೇಕು ಎಂಬುದಾಗಿ ನುಡಿಯುತ್ತಾನೆ.ಯಾವುದೇ ಕೆಲಸಗಳನ್ನುಮಾಡುವಾಗ ಮಾನವನು ಉದ್ರೇಕಕ್ಕೆ
ಒಳಗಾಗಿ ತಪ್ಪುಗಳು ನಡೆಯುತ್ತವೆ. ಕೃಷ್ಣನು
ಬೋಧಿಸುವ ಜೀವನ ಪಾಠವೆಂದರೆ ಯಾವಾಗಲೂ ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡು ಶಾಂತಿಯನ್ನು ಕಾಪಾಡಿಕೊಂಡುಬರಬೇಕು ಎಂಬುದು.
Krishna Janmashtami ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ
ಕೂಡ ಅದರಲ್ಲಿ ತಾಳ್ಮೆ ಮತ್ತು ಸಮಾಧಾನವಿರಲಿ ಎಂಬುದಾಗಿ ಶ್ರೀಕೃಷ್ಣ ತಿಳಿಸುತ್ತಾನೆ.
ಶ್ರೀಕೃಷ್ಣನಅವತಾರದಲ್ಲಿಒಂದು ವೈಶಿಷ್ಟ್ಯವಿದೆ.
ಬಾಲಕರ ಜೊತೆ ಬಾಲಕನಾಗಿ,ಯುವಕರ ಜೊತೆ ಯುವಕನಾಗಿ,ವೃದ್ಧರ ಜೊತೆ ವ್ರದ್ಧನಾಗಿ
ಋಷಿಗಳ ಜೊತೆ ಋಷಿಯಾಗಿ,ರಾಜರಜೊತೆಯಲ್ಲಿ ರಾಜನಾಗಿ,ಗೋಪಿಯರ ಜೊತೆ ಗೊಲ್ಲನಾಗಿ
ಎಲ್ಲಾ ಕ್ಷೇತ್ರಗಳಲ್ಲಿಯೂ ಓಡಾಡಿದ ಮಹಾ
ಮಹಿಮ ಶ್ರೀಕ್ರಷ್ಣ.
ಬಡತನವನ್ನನುಭವಿಸುತ್ತಿದ್ದ ಗುರುಕುಲದಲ್ಲಿ
ಸಹಪಾಠಿಯಾಗಿದ್ದ ಸುಧಾಮನನ್ನು ಅಂತರಂಗದ ಶುದ್ಧ ಪ್ರೀತಿಯಿಂದ ಆದರಿಸಿದ ಜೀವದ ಗೆಳೆಯ ಶ್ರೀಕೃಷ್ಣ.ಸ್ನೇಹದ ಬೆಲೆ ಏನೆಂಬುದನ್ನು ಕೃಷ್ಣ ಸುಧಾಮರ ಸ್ನೇಹತ್ವದಿಂದ ತಿಳಿಯುತ್ತದೆ.
ಕಲಿಕೆಯಲ್ಲಿ ಅನತಿಕಾಲದಲ್ಲಿಯೇ ಸಕಲ ವಿದ್ಯೆಗಳನ್ನು ವಿದ್ಯಾಗುರುಗಳಾದ ಸಾಂದೀಪನೀ ಮಹರ್ಷಿಗಳೇ ಬೆರಗಾಗುವ ರೀತಿಯಲ್ಲಿ ಸಕಲವಿದ್ಯೆಗಳನ್ನು ಸಿದ್ಧಿಸಿಕೊಂಡ ಅಸಾಧಾರಣ ಮೇಧಾವಿ!.ಗುರುದಕ್ಷಿಣೆ ನೀಡಬೇಕಾದಾಗ ಸಮುದ್ರದ ತಳಕ್ಕೂ,ಯಮಲೋಕಕ್ಕೂ ನುಗ್ಗಿ ಗುರುಪುತ್ರನನ್ನು ಪಡೆದು ಗುರುಗಳಿಗೆ ಒಪ್ಪಿಸಿದ ಮಹಾನುಭಾವ.
ರಕ್ಕಸ ನರಕಾಸುರನಸೆರೆಯಲ್ಲಿದ್ದಹದಿನಾರುಸಾವಿರ ಕನ್ಯಾಮಣಿಗಳ ಆರ್ತನಾದಕ್ಕೆ ಸ್ಪಂದಿಸಿದ ಕರುಣಾಳು ಶ್ರೀಕೃಷ್ಣ.
ಪಾಂಡವ ಕೌರವರ ದ್ಯೂತದಾಟದಲ್ಲಿ ಪಾಂಡವರು ಕೌರವರ ಕಪಟದಿಂದ ಸೋತಾಗ ದ್ರೌಪದಿಯ ವಸ್ತ್ರಾಪಹರಣಕ್ಕೆಮುಂದಾದಾಗ ಆ ಮಾನಿನಿಯ ಮಾನ ಸಂರಕ್ಷಣೆಯನ್ನು ಕಾಪಾಡಿದ ದಯಾಳು ಶ್ರೀಕೃಷ್ಣ.
ಶ್ರೀರಾಮನ ಆದರ್ಶವನ್ನೂ ಶ್ರೀಕೃಷ್ಣ ಬೋಧಿಸಿದ ಪಾಠವನ್ನೂ ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಸುಂದರವಾಗುವುದರಲ್ಲಿ ಸಂದೇಹವಿಲ್ಲ.