Tuesday, March 24, 2026
Tuesday, March 24, 2026

Prajwal Revanna ಪ್ರಜ್ವಲ್ ರೇವಣ್ಣ ಸಂಸದ ಸ್ಥಾನ ರದ್ದು-ರಾಜ್ಯ ಹೈಕೋರ್ಟ್ ತೀರ್ಪು

Date:

Prajwal Revanna ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರ ಸಂಸದ ಸ್ಥಾನವನ್ನ ರಾಜ್ಯ ಹೈಕೋರ್ಟ್ ಅಸಿಂಧುಗೊಳಿಸಿದೆ.
ಚುನಾವಣೆಯ ಪೂರ್ವದಲ್ಲಿ ಚುನಾವಣಾ ಆಯೋಗಕ್ಕೆ ತಮ್ಮ ಆಸ್ತಿ ವಿವರ ಸಲ್ಲಿಕೆಯಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು 2019ರ ಚುನಾವಣಾ ಪ್ರತಿಸ್ಪರ್ಧಿ ಎ.ಮಂಜು ಹಾಗೂ ದೇವರಾಜೇ ಗೌಡರು ತಕರಾರು ಅರ್ಜಿ ಸಲ್ಲಿಸಿದ್ದರು.

ದೀರ್ಘ ಮೂರೂವರೆ ವರ್ಷಗಳ ವಿಚಾರಣೆ ನಡೆಸಿದ ಕೋರ್ಟ್ ಪ್ರಜ್ವಲ್ ರೇವಣ್ಣ ಅವರು ಸಂಸತ್ತಿಗೆ ಆಯ್ಕೆ ಆಗಿರುವುದನ್ನ ಅನೂರ್ಜಿತಗೊಳಿಸಿದೆ.

ಸಂಪೂರ್ಣ ವಿಚಾರಣೆ ನಡೆಸಿದ ಘನತೆವೆತ್ತ ನ್ಯಾಯಾಲಯವು
ಪ್ರಜ್ವಲ್ ರೇವಣ್ಣ ಅವರನ್ನ ಗೆಲ್ಲಿಸಲು
ತಂದೆಯವರಾದ ಎಚ್.ಡಿ.ರೇವಣ್ಣ ಮತ್ತು ಸೋದರ ಸೂರಜ್ ರೇವಣ್ಣ ಅವರ ನೆರವನ್ನು ಸ್ಥಾನ ದುರುಪಯೋಗ ಮಾಡುವುದರ ಮೂಲಕ ಕಾನೂನು ಬಾಹಿರ ಚಟುವಟಿಕೆ ಮಾಡಿದ್ದಾರೆಂದು ಘಟನೆಗಳನ್ನ ಪಟ್ಟಿಮಾಡಲಾಗಿದೆ.

ಎ.ಮಂಜು ಅವರು ಪರಾಜಿತರಾಗಿರುವ ತಮ್ಮನ್ನು ವಿಜಯಿ ಎಂದು ಘೋಷಿಸಬೇಕೆಂದೂ ಮನವಿ ಮಾಡಿದ್ದರು. ಆದರೆ ಕೋರ್ಟ್ ಅವರೂ ಕೂಡ ಕಾನೂನು ಬಾಹಿರ ಚಟುವಟಿಕೆ ಮಾಡಿದ್ದಾರೆಂದೂ ತಿಳಿಸಿ ಅವರನ್ನ ವಿಜಯಿ ಎಂದು ಘೋಷಿಸಲು ಅಸಾಧ್ಯ ಎಂದು ಹೇಳಿದೆ.

Prajwal Revanna ಮರು ಮನವಿ ಸಲ್ಲಿಸಲು ಪ್ರಜ್ವಲ್ ರೇವಣ್ಣ ಅವರಿಗೆ ಮೂವತ್ತು ದಿನಗಳ ಗಡುವು ನೀಡಲಾಗಿದೆ
” ಮುಂದೆ ಮನವಿ ಸಲ್ಲಿಸಲು ಕಾನೂನು ಪ್ರಕಾರವೇ ಮುಂದುವರೆಯುವೆ ” ಎಂದು ಪ್ರಜ್ವಲ್ ರೇವಣ್ಣ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

N. Chaluvaraya Swamy ಎಲ್ಲಾ ಹುದ್ದೆಗಳ ನೇಮಕಾತಿ ಕೆಇಎ ಮೂಲಕ ನಡೆಸಲು ಸರ್ಕಾರದ ನಿರ್ಧಾರ- ಸಚಿವ ಎನ್.ಚಲುವರಾಯ ಸ್ವಾಮಿ

N. Chaluvaraya Swamy ನಮ್ಮ ರಾಜ್ಯದ ಸಾವಿರಾರು ನಿರುದ್ಯೋಗಿ ಯುವಜನತೆಯ ಹಾಗೂ...

University of Agricultural 2047 ರ ಹೊತ್ತಿಗೆ ನಮ್ಮ ದೇಶ ಆಹಾರ ವ್ಯವಸ್ಥೆಯಲ್ಲಿ ಜಾಗತಿಕ ಶಕ್ತಿಯಾಗಿ ಹೊಮ್ಮಲಿದೆ- ಡಾ.ಎಸ್.ಕೆ.ಮಲ್ಹೋತ್ರಾ

University of Agricultural ಅತ್ಯುತ್ತಮ ಪರಿಸರ ಸೇವೆ ನೀಡುತ್ತಿರುವ ಅಲಂಕಾರಿಕ ತೋಟಗಾರಿಕೆ...

CM Siddaramaiah ಮೌಢ್ಯತೆ ವಿರುದ್ಧ ಸಿಡಿದೆದ್ದುಸಮಸಮಾಜದ ಕನಸು ಬಿತ್ತಿದ ಶರಣ ದೇವರ ದಾಸಿಂಯ್ಯ- ಸಿದ್ಧರಾಮಯ್ಯ

CM Siddaramaiah ಮೌಢ್ಯ, ಕಂದಾಚಾರಗಳ‌ ಹೆಸರಿನಲ್ಲಿ ತಳ ಸಮುದಾಯಗಳ ಜನರನ್ನು...