Aditya L1 Launch ಚಂದ್ರಯಾನ – 3 ಯಶಸ್ಸಿನ ಜೊತೆಯಲ್ಲೇ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಪ್ರಥಮ ಬಾರಿಗೆ ಕೈಗೊಂಡಿದ್ದ ಸೂರ್ಯಯಾನ ಯಶಸ್ಸಿನ ಹಾದಿಯಲ್ಲಿದೆ.
ಇಂದು ಆದಿತ್ಯ ಎಲ್-1 ಯಶಸ್ವಿಯಾಗಿ ಉಡಾವಣೆಯಾಗಿದೆ.
ಸೆಪ್ಟಂಬರ್ 2ರಂದು ಭೂಮಿಯಿಂದ ಹೊರಟ ಆದಿತ್ಯ-ಎಲ್1 ಗಗನ ನೌಕೆಯು ಬರೋಬ್ಬರಿ 120 ರಿಂದ 125 ದಿನಗಳ ಬಳಿಕ ನಿಗದಿತ ಕಕ್ಷೆ ತಲುಪಲಿದೆ. ಅಂದರೆ ನಾಲ್ಕು ತಿಂಗಳು ಆದಿತ್ಯ-ಎಲ್1 ಯೋಜನೆಯ ಅವಧಿಯಾಗಿದೆ.
ಜನವರಿ ಮೊದಲ ವಾರದಲ್ಲಿ ಸೂರ್ಯಯಾನದ ನೌಕೆಯು ಎಲ್-1 ಗೆ ಸೇರುವ ನಿರೀಕ್ಷೆ ಇದೆ.
ಆಂಧ್ರ ಪ್ರದೇಶದ ಶ್ರೀಹರಿಕೋಟಾ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಆದಿತ್ಯ L1 ಉಪಗ್ರಹವನ್ನು PSLV-C57 ರಾಕೆಟ್‌ನಲ್ಲಿ ಉಡಾವಣೆಯಾಗಿದೆ.
Aditya L1 Launch ಸೂರ್ಯನ ಅಧ್ಯಯನ ಮಾಡಲು ಆದಿತ್ಯ L1 ಬಾಹ್ಯಾಕಾಶದಲ್ಲಿ ನಾಲ್ಕೂವರೆ ವರ್ಷವಿರುತ್ತದೆ.
ಈ ಮೂಲಕ ಭಾರತ ಕೈಗೊಂಡಿರುವ ಸೂರ್ಯಯಾನದ ಪ್ರಥಮ ಹೆಜ್ಜೆಗೆ ಜಯ ಸಿಕ್ಕಂತಾಗಿದೆ.