Indian Space Research Organisation ಸೂರ್ಯನ ಅಧ್ಯಯನಕ್ಕೆ ತೆರಳಲಿರುವ ಆದಿತ್ಯ ಎಲ್-1 ಮಿಷನ್ ಕುರಿತಾಗಿ ಇಸ್ರೋ ಬುಧವಾರ ಒಂದು ಮಹತ್ವದ ಅಪ್ಡೇಟ್ ನೀಡಿದೆ.
ಆದಿತ್ಯ ಎಲ್-1 ಮಿಷನ್‌ನ ಉಡಾವಣಾ ಪೂರ್ವಾಭ್ಯಾಸವನ್ನು ಪೂರ್ಣಗೊಳಿಸಿರುವುದಾಗಿ ಇಸ್ರೋ ತಿಳಿಸಿದೆ.
ಉಡಾವಣಾ ಪೂರ್ವಾಭ್ಯಾಸ ಎಂದರೆ ಉಡಾವಣೆಗೆ ಮುಂಚಿತವಾಗಿ ಮಾಡಬೇಕಾದ ಕೆಲಸಗಳು ಎಂದು ಅರ್ಥ. ಇಸ್ರೋದ ಮಹತ್ವಾಕಾಂಕ್ಷೆಯ ಆದಿತ್ಯ ಎಲ್-1 ಮಿಷನ್ ಉಡಾವಣೆ ಸೆಪ್ಟೆಂಬರ್ 2ರಂದು ಪೂರ್ವಾಹ್ನ 11.50ಕ್ಕೆ ಶ್ರೀಹರಿಕೋಟಾದಿಂದ ನಡೆಯಲಿದೆ.
ಆದಿತ್ಯ-L1 ಬಾಹ್ಯಾಕಾಶ ನೌಕೆಯು ಸೌರ ಕರೋನದ ದೂರಸ್ಥ ವೀಕ್ಷಣೆಗಳನ್ನು ಒದಗಿಸಲು ಮತ್ತು ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ L1 (ಸೂರ್ಯ-ಭೂಮಿಯ ಲಗ್ರಾಂಜಿಯನ್ ಪಾಯಿಂಟ್) ನಲ್ಲಿ ಸೌರ ಮಾರುತದ ಸ್ಥಳ ವೀಕ್ಷಣೆಗಳನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ.
Indian Space Research Organisation ಸೂರ್ಯನನ್ನು ಅಧ್ಯಯನ ಮಾಡುವ ಗುರಿಯನ್ನು ಹೊಂದಿರುವ ಆದಿತ್ಯ-L1 ಮಿಷನ್, ಸೂರ್ಯನ ಸುತ್ತ ಎಲ್-1ಗೆ ನಿಗದಿ ಮಾಡಿದ ಕಕ್ಷೆಯಲ್ಲಿ ಸುತ್ತುತ್ತ ಮಾಹಿತಿ ಸಂಗ್ರಹಿಸಲಿದೆ. ದ್ಯುತಿಗೋಳ, ಕ್ರೋಮೋಸ್ಪಿಯರ್ ಮತ್ತು ಸೂರ್ಯನ ಹೊರಗಿನ ಪದರಗಳಾದ ಕರೋನಾವನ್ನು ವಿವಿಧ ತರಂಗಪಟ್ಟಿಗಳಲ್ಲಿ ವೀಕ್ಷಿಸಲು ಏಳು ಪೇಲೋಡ್‌ಗಳನ್ನು ಹೊತ್ತೊಯ್ಯುತ್ತದೆ. ಆದಿತ್ಯ-ಎಲ್1 ರಾಷ್ಟ್ರೀಯ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಸಂಪೂರ್ಣ ಸ್ವದೇಶಿ ಪ್ರಯತ್ನವಾಗಿದೆ ಎಂದು ಇಸ್ರೋ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.