Environmental pollution ನವದೆಹಲಿಯ ಪರಿಸರ ಮಾಲಿನ್ಯದಲ್ಲಿ ಈಗ ಸುದ್ದಿಯಲ್ಲಿದೆ.
ವಿಶ್ವದ ಅತಿ ಹೆಚ್ಚು ಮಾಲಿನ್ಯ ನಗರ ಎಂಬ ಪಟ್ಟ ಸಿಕ್ಕಿದೆ.
ಷಿಕಾಗೋ ವಿವಿಯ ಎನರ್ಜಿ ಪಾಲಿಸಿ ಸಂಸ್ಥೆಯ ಅಧ್ಯಯನ ಈ ಗಂಭೀರ ಸಂಗತಿಯನ್ನ ತಿಳಿಸಿದೆ.
ವಾಯು ಮಾಲಿನ್ಯ ಪ್ತಮಾಣವು
ಸರಾಸರಿ ಒಂದು ಘನಮೀಟರ್ ಗೆ 5 ಮೈಕ್ರೋಗ್ರಾಂನಷ್ಟಿರಬೇಕು.
ಇದು ವಿಶ್ವ ಆರೋಗ್ಯ ಸಂಸ್ಥೆಯ
ಲೆಕ್ಕಾಚಾರ
ಆದರೆ ರಾಜಧಾನಿಯಲ್ಲಿನ ವಾಯುಗುಣಮಟ್ಟ 40 ಮೈಕ್ರೋಗ್ರಾಮ್ ಆಗಿದೆ.ಈ ಪ್ರದೇಶಗಳಲ್ಲಿ ಸು.ಶೇ 68 ರಷ್ಟು ಜನ ವಾಸ ಮಾಡುತ್ತಿದ್ದಾರೆ.
ದೆಹಲಿಯ ಜನಸಂಖ್ಯೆ 1.8 ಕೋಟಿ.
Environmental pollution ಇದೇ ರೀತಿಯ ಮಾಲಿನ್ಯ ಮುಂದುವರೆದರೆ ಅಲ್ಲೊ ವಾಸಿಸುವ ಜನರು ತಮ್ಮ ಆಯಸ್ಸಿನಲ್ಲಿ 8.5 ವರ್ಷ ಕಡಿಮೆಮಾಡಿಕೊಳ್ಳುತ್ತಾರೆ ಎಂದು ಅಧ್ಯಯನ ಹೇಳಿದೆ.
ಒಟ್ಟಿನಲ್ಲಿ ಇದೊಂದು ನಮಗೆ ಎಚ್ಚರಿಕೆಯ ಗಂಟೆ. ಏಕೆಂದರೆ
ನವದೆಹಲಿ ಇನ್ಯಾವುದೋ ದೇಶದಲ್ಲಿಲ್ಲ. ಈ ಅಪಾಯ ನಮಗೂ ಬರಬಹುದು.
ಈಗಾಗಲೇ ಪಶ್ಚಿಮ ಘಟ್ಟಗಳಲ್ಲಿನ ಅರಣ್ಯ ಪರಿಸರ ನಾಶ ನಮ್ಮೆದುರು
ನಡೆಯುತ್ತಿದೆ. ನಮ್ಮ ನಮ್ಮ ಪ್ರದೇಶಗಳ ಸನಿಹ ಇರುವ ಅರಣ್ಯ ಪ್ರದೇಶವೂ ಅಷ್ಟು ಸುರಕ್ಷಿತವಾಗಿಲ್ಲ.ಎಲ್ಲವನ್ನೂ ಸರ್ಕಾರದ ಅರಣ್ಯ ಇಲಾಖೆ ನೋಡಿಕೊಳ್ಳುತ್ತದೆ ಎಂದರೆ ನಮ್ಮ ವಿನಾಶ ತಪ್ಪಿದ್ದಲ್ಲ. ಇದೊಂದು ನೆತ್ತಿಯ ಮೇಲಿನ ತೂಗು ಕತ್ತಿ.