Indian Medical Association ಭಾರತೀಯ ವೈದ್ಯಕೀಯ ಸಂಘ, ಕರ್ನಾಟಕ ಶಾಖೆ, ಕನ್ನಡ ವೈದ್ಯ ಬರಹಗಾರರ ಸಮಿತಿ ಮತ್ತು ಭಾರತೀಯ ವೈದ್ಯಕೀಯ ಸಂಘ, ಶಿವಮೊಗ್ಗ ಸಂಯುಕ್ತಾಶ್ರಯದಲ್ಲಿ ಕನ್ನಡ ವೈದ್ಯ ಬರಹಗಾರರ ನಾಲ್ಕನೆಯ ರಾಜ್ಯ ಸಮ್ಮೇಳನವನ್ನು ಬರುವ ಸೆಪ್ಟೆಂಬರ್ ೨ ಮತ್ತು ೩ರಂದು ಶಿವಮೊಗ್ಗದ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದೆ.
ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಹಿರಿಯ ಮನೋವೈದ್ಯರೂ ಮತ್ತು ವೈದ್ಯ ಸಾಹಿತಿಯೂ ಆದ ಡಾ. ಕೆ.ಆರ್. ಶ್ರೀಧರ್ ಅವರು ವಹಿಸಿಕೊಳ್ಳಲಿದ್ದಾರೆ.
ಸುಬ್ಬಯ್ಯ ಕ್ಯಾಂಪಸ್‌ನಲ್ಲಿ ಸೆಪ್ಟೆಂಬರ್ 2, ಶನಿವಾರ ಬೆಳಿಗ್ಗೆ 8 ಗಂಟೆಗೆ ಭಾ.ವೈ.ಸಂ.ದ ಧ್ವಜ ಮತ್ತು ಭುವನೇಶ್ವರಿ ದೇವಿಯ ಮೆರವಣಿಗೆಯೊಂದಿಗೆ ಸಮ್ಮೇಳನ ಪ್ರಾರಂಭವಾಗಲಿದೆ. 9 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಪ್ರಖ್ಯಾತ ಚಿಂತಕರು ಹಾಗೂ ಕುವೆಂಪು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕರಾದ ಡಾ. ರಾಜೇಂದ್ರ ಚೆನ್ನಿ ಕಾರ್ಯಕ್ರಮ ಉದ್ಘಾಟಿಸುವರು.
ಪ್ರಸಿದ್ಧ ಮನೋವೈದ್ಯ ಮತ್ತು ಸಾಹಿತಿ ಡಾ. ಸಿ. ಆರ್. ಚಂದ್ರಶೇಖರ್, ಸಮ್ಮೇಳನದ ಪೂರ್ವಾಧ್ಯಕ್ಷರಾದ ಡಾ ಪಿ ಎಸ್ ಶಂಕರ್, ಐ.ಎಂ.ಎ. ರಾಜ್ಯಾಧ್ಯಕ್ಷರಾದ ಡಾ. ಶಿವಕುಮಾರ ಲಕ್ಕೋಳ, ಸುಬ್ಬಯ್ಯ ಸಂಸ್ಥೆಗಳ ನಿರ್ದೇಶಕರಾದ ಡಾ. ನಾಗೇಂದ್ರ ಎಸ್, ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ ಕೃಷ್ಣಪ್ರಸಾದ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಕನ್ನಡ ವೈದ್ಯ ಬರಹಗಾರರ ಸಮಿತಿಯ ಅಧ್ಯಕ್ಷರಾದ ಡಾ.ಶಿವಾನಂದ ಕುಬಸದ, ಶಿವಮೊಗ್ಗ ಶಾಖೆಯ ಅಧ್ಯಕ್ಷರಾದ ಅರುಣ್ ಎಂ.ಎಸ್., ಕಾರ್ಯದರ್ಶಿ ಡಾ. ರಕ್ಷಾರಾವ್, ಸಂಘಟನಾ ಸಮಿತಿಯ ಚರ‍್ಮನ್ ಡಾ ಗುರುದತ್ತ ಕೆ ಎನ್, ಕಾರ್ಯದರ್ಶಿಗಳಾದ ಡಾ. ವಿನಯ ಶ್ರೀನಿವಾಸ್ ಮತ್ತು ಡಾ. ಕೆ.ಎಸ್. ಶುಭ್ರತ ಮುಂತಾದವರು ಉಪಸ್ಥಿತರಿರುವರು.
Indian Medical Association ಈ ಎರಡು ದಿನಗಳಲ್ಲಿ ನಡೆಯುವ ಸುಮಾರು ಎಂಟು ಗೋಷ್ಠಿಗಳಲ್ಲಿ ಶ್ರೀ ದುಂಡಿರಾಜ್, ಡಾ. ಆರ್. ಪೂರ್ಣಿಮಾ, ಡಾ. ಶ್ರೀಕಾಂತ್ ಹೆಗಡೆ, ಪ್ರೊ ಬಿ.ಎಂ. ಕುಮಾರಸ್ವಾಮಿ, ಡಾ. ಯೋಗಣ್ಣ ಎಸ್.ಪಿ., ಡಾ. ಕೆ. ರಮೇಶ್‌ಬಾಬು ಸೇರಿದಂತೆ ಹಲವಾರು ಗಣ್ಯರು ಉಪನ್ಯಾಸ ನೀಡಲಿದ್ದಾರೆ. ವೈದ್ಯ ಕವಿಗಳಿಗಾಗಿ ಕವಿಗೋಷ್ಠಿ ನಡೆಯಲಿದ್ದು, ಪ್ರಖ್ಯಾತ ಕವಯಿತ್ರಿ ಶ್ರೀಮತಿ ಸ. ಉಷಾ ಅಧ್ಯಕ್ಷತೆ ವಹಿಸುವರು. `ಥಟ್ ಅಂತ ಹೇಳಿ’ ಖ್ಯಾತಿಯ ಡಾ.ನಾ. ಸೋಮೇಶ್ವರ್ ಅವರು ವೈದ್ಯಕೀಯ ವಿದ್ಯಾರ್ಥಿಗಳಿಗಾಗಿ ಕನ್ನಡ ನಾಡು, ನುಡಿಯ ಬಗ್ಗೆ ರಸಪ್ರಶ್ನೆ ಕಾರ್ಯಕ್ರಮ ನಡೆಸುವರು.
ವೈದ್ಯ ಕಲಾವಿದರ ಕಲಾಪ್ರದರ್ಶನ ಮತ್ತು ವೈದ್ಯ ಸಾಹಿತಿಗಳ ಪುಸ್ತಕ ಪ್ರದರ್ಶನ ಕೂಡ ಇರುತ್ತದೆ.
ಭಾನುವಾರ ಸಂಜೆ 05 ಗಂಟೆಗೆ ನಡೆಯುವ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕನ್ನಡ ಕ. ಸಾ. ಪ. ಅಧ್ಯಕ್ಷರಾದ ಶ್ರೀಯುತ ಮಂಜುನಾಥರವರು ಪಾಲ್ಗೊಳ್ಳಲಿದ್ದಾರೆ.