Monday, November 25, 2024
Monday, November 25, 2024

Sahachetana Natyalaya ನೃತ್ಯ ರಸಿಕರನ್ನ ರಾಷ್ಟ್ರೀಯ ನೃತ್ಯಮಹೋತ್ಸವ ನಾಟ್ಯಾರಾಧನಾ-12 ರಂಜಿಸಲಿದೆ- ಶಾಸಕ ಚನ್ನಬಸಪ್ಪ

Date:

Sahachetana Natyalaya ಲಲಿತ ಕಲೆಯನ್ನು ತಮ್ಮ ಸಂಸ್ಕಾರ ಹಾಗೂ ಪರಿಶ್ರಮಗಳಿಂದ ಅಂತರ್ಗತಗೊಳಿಸಿಕೊಂಡಿರುವ ಭಾರತೀಯ ಸಂಸ್ಕೃತಿಯಲ್ಲಿ ನೃತ್ಯಕಲೆಗೆ ಪರಮೋಚ್ಛ ಸ್ಥಾನವಿದೆ. ಕಳೆದ ಹಲವಾರು ವರ್ಷಗಳಿಂದ ಶಿವಮೊಗ್ಗೆಯ ಕಲಾರಸಿಕರಿಗೆ ದೇಶವಿದೇಶದ ಕಲಾಪ್ರಾಕಾರಗಳನ್ನು ಪರಿಚಯಿಸಿರುವ ನೃತ್ಯ ಸಂಸ್ಥೆ ತಮ್ಮ ಮತ್ತೊಂದು ರಾಷ್ಟ್ರೀಯ ನೃತ್ಯ ಮಹೋತ್ಸವ ನಾಟ್ಯಾರಾಧನಾ – 12ನ್ನು ಮತ್ತೊಮ್ಮೆ ಜನತೆಗೆ ಪರಿಚಯಿಸುತ್ತಿದೆ ಎಂದು ಸಂಸ್ಥೆಯ ಸಂಸ್ಥೆಯ ಗೌರವಾಧ್ಯಕ್ಷರು ಹಾಗೂ ನಗರದ ಶಾಸಕರಾದ ಎಸ್. ಎನ್. ಚನ್ನಬಸಪ್ಪ (ಚನ್ನಿ) ನುಡಿದರು.

ಸುದ್ಧಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಇದೇ ಬರುವ ಸೆಪ್ಟೆಂಬರ್ 1, 2 ಹಾಗೂ 3 ರಂದು ಮೂರು ದಿನಗಳ ಕಾಲ ಪ್ರತೀ ದಿನ ಸಂಜೆ ೬:೩೦ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ ಈ ನೃತ್ಯ ಮಹೋತ್ಸವ ಜರುಗಲಿದೆ. 1 ರ ಶುಕ್ರವಾರ ನಾಟ್ಯಾಲಯದ ಸಮಸ್ತ ವಿದ್ಯಾರ್ಥಿಗಳಿಂದ ಚಿಂತಯಾಮಿ ಜಗದಂಬಾ ಎಂಬ ನರ್ತನ ಮಾರ್ಗ ಪ್ರಸ್ತುತಿ ನಾಟ್ಯಾಲಯದ ನೃತ್ಯಗುರು ಸಹನಾ ಚೇತನ್‌ರವರ ಪರಿಕಲ್ಪನೆ ಹಾಗೂ ನಿರ್ದೇಶನದಲ್ಲಿ ನಡೆಯಲಿದೆ. ಇದರ ಉದ್ಘಾಟನೆಯನ್ನು ಮಾಜಿ ಉಪಮುಖ್ಯಮಂತ್ರಿಗಳಾದ ಸನ್ಮಾನ್ಯ ಕೆ. ಎಸ್. ಈಶ್ವರಪ್ಪನವರು ನಡೆಸಿಕೊಡಲಿದ್ದಾರೆ.

ಇದೇ ಸಂದರ್ಭದಲ್ಲಿ ನಾಟ್ಯಾಲಯದ 162 ಶಿಷ್ಯಂದಿರು ಈ ವೇದಿಕೆಯಲ್ಲಿ ಹೆಜ್ಜೆಹಾಕಲಿದ್ದಾರೆ ಎಂದರು.
20ರ ಶನಿವಾರ ಸಂಜೆ 6 :30 ಕ್ಕೆ ನಾಟ್ಯಾಲಯದ ನೃತ್ಯಗುರು ಸಹನಾ ಚೇತನ್‌ರವರ ಏಕವ್ಯಕ್ತಿ ನೃತ್ಯ ರೂಪಕ ಹನುಮಂತ ದೇವ ನಮೋ ಪ್ರಸ್ತುತಪಡಿಸಲಿದ್ದಾರೆ. ತದನಂತರ ನಾಟ್ಯಾಲಯದ ಹಿರಿಯ ವಿದ್ಯಾರ್ಥಿಗಳು ಜಯಜಯ ವಿಶ್ವವಿಜಯಿ ಬಸವ ಎಂಬ ಬಸವಣ್ಣನವರ ವಚನಾಧಾರಿತ ನೃತ್ಯರೂಪಕವನ್ನು ಸಾದರಪಡಿಸಲಿದ್ದಾರೆ.

Sahachetana Natyalaya 03 ರ ಭಾನುವಾರ ಸಂಜೆ 6:30ಕ್ಕೆ ಅಂತರಾಷ್ಟ್ರೀಯ ನೃತ್ಯ ಕಲಾವಿದರಾದ ನವದೆಹಲಿಯ ಸಮಾನತಾ ತಂಡದ ಶುಭಿ ಜೋಹರಿ ಹಾಗೂ ಅಮಿತ್ ಖಿಂಚಿಯವರ ಯುಗಳ ಕಥಕ್ ನೃತ್ಯ ಪ್ರಸ್ತುತಗೊಳ್ಳಲಿದೆ. ತದನಂತರ ಪಂಜಾಬ್ ಪ್ರಾಂತ್ಯದ ರೋಚಕ ಸಾಹಸಮಯ ನೃತ್ಯ ‘ಗಟ್ಕಾ – ಸಮರ ಕಲೆ’ ನೋಡುಗರ ಕಣ್ಮನವನ್ನು ತಣ ಸಲಿದೆ. ಈ ಕಾರ್ಯಕ್ರಮದ ಸಮಾರೋಪಕ್ಕೆ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಶಾಸಕರಾದ ಡಿ.ಎಸ್.ಅರುಣ್ ಹಾಗೂ ಮಹಾನಗರಪಾಲಿಕೆಯ ಸದಸ್ಯರಾದ ಪ್ರಭಾಕರ ಪಿ. (ಪ್ರಭು)ರವರು ಆಗಮಿಸಿ ಕಲಾವಿದರನ್ನು ಸನ್ಮಾನಿಸಲಿದ್ದಾರೆ ಎಂದರು.

ಈ ಎಲ್ಲಾ ಕಾರ್ಯಕ್ರಮಕ್ಕೆ ಸಂಸ್ಥೆಯ ಅಧ್ಯಕ್ಷರಾದ ಎನ್. ಆರ್. ಪ್ರಕಾಶ್(ಆಚಿ) ಉಪಸ್ಥಿತರಿರಲಿದ್ದಾರೆ ಎಂದರು. ಭಾರತೀಯ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪಸರಿಸುವ ನಿಟ್ಟಿನಲ್ಲಿ ಸಹಚೇತನ ಹಮ್ಮಿಕೊಂಡಿರುವ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಲಾರಸಿಕರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಎಸ್. ಎನ್. ಚನ್ನಬಸಪ್ಪ (ಚನ್ನಿ)ಕೋರಿದ್ದಾರೆ.

ಪತ್ರಿಕಾ ಗೋಷ್ಠಿಯಲ್ಲಿ ನೃತ್ಯಗುರು ಸಹನಾ ಚೇತನ್, ಚೇತನ್, ಮಾಲತೇಶ್, ಡಾ. ನಾಗಮಣ , ಆನಂದ್ ರಾಮ್, ಸಿಂಧು, ಉಪಸ್ಥಿತರಿದ್ದರು.

ಕಾರ್ಯಕ್ರಮದ ವಿವರಗಳು :

ಚಿಂತಯಾಮಿ ಜಗದಂಬಾ (ದೇವಿ ಕೃತಿಗಳ ನರ್ತನ ಸಂಭ್ರಮ)
ನಾಟ್ಯಾಲಯದ ಎಲ್ಲಾ ವಿದ್ಯಾರ್ಥಿಗಳಿಂದ
೦೧.೦೯.೨೦೨೩ ಶುಕ್ರವಾರ
ಸಂಜೆ ೬:೦೦ಕ್ಕೆ
ದುಷ್ಟ ದಾನವರ ಹರಣಕ್ಕಾಗಿ ಶಿಷ್ಟ ಜನರ ಪರಿಪಾಲನೆಗಾಗಿ ಲೋಕಹಿತ ಕಾರ್ಯಗಳನ್ನು ಮಾಡಿದುದರ ನಿರಂತರ ನೆನಹಿಗಾಗಿ ಭಗವತಿ ಆದಿಶಕ್ತಿಯ ರೂಪವನ್ನು ತಾಳಿ ಆಕೆ ಸರ್ವರನ್ನು ಪೊರೆಯುತ್ತಲೇ ಇರುತ್ತಾಳೆ. ನಮ್ಮ ಕರ್ನಾಟಕ ಶಾಸ್ತ್ರೀಯ ಸಂಗೀತದ ಪ್ರಸಿದ್ದ ವಾಗ್ಗೇಯಕಾರ ಹಲವಾರು ಶ್ರೇಷ್ಟ ಕೃತಿಗಳನ್ನು ಆರಿಸಿ ನಾಟ್ಯಾಲಯದ ಹಿರಿಯ ಕಿರಿಯ ಎಲ್ಲಾ ವಿದ್ಯಾರ್ಥಿಗಳು ತಮ್ಮ ನರ್ತನದ ಸಂಭ್ರಮವನ್ನು ಆವಿರ್ಭಾವಿಸಲಿದ್ದಾರೆ.

೦೨.೦೯.೨೦೨೩ ಶನಿವಾರ
ಸಂಜೆ ೬:೩೦ ರಿಂದ
ಹನುಮಂತ ದೇವ ನಮೋ (ಹನುಮಂತನ ದೇವರನಾಮಗಳ ನರ್ತನೋಲ್ಲಾಸ)
ನೃತ್ಯಗುರು ಸಹನಾ ಚೇತನ್ ಏಕವ್ಯಕ್ತಿ ನೃತ್ಯ ಪ್ರದರ್ಶನ
ಆಂಜನೇಯ ಶ್ರೀ ರಾಮನ ಅಪ್ರತಿಮ ಭಕ್ತ. ಆತನ ಬಹು ಸಂಖ್ಯಾತ ಕೈಂಕರ್ಯಗಳನ್ನು ನಮ್ಮ ದಾಸರುಗಳು ಅತ್ಯಂತ ಮಾರ್ಮಿಕವಾಗಿ ತಮ್ಮ ದೇವರ ನಾಮಗಳಲ್ಲಿ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಕನಕದಾಸ ಹಾಗೂ ಪುರಂದರ ದಾಸರ ವರ್ಣನೆಯಲ್ಲಿ ಪವನಪುತ್ರ ಹನುಮಂತನ ಸಂಪೂರ್ಣ ಜೀವನಗಾಥೆಯೇ ಮೂಡಿಬಂದಿದೆ. ವಾನರ ಸೈನ್ಯ ಪೋಷಣೆ, ಭಕ್ತಿ ಮಾರ್ಗದಲ್ಲಿ ಕಪಿ ಸೈನ್ಯ, ಸೀತಾಪಹರಣ, ಲಂಕಾದಹನ, ರಾವಣ ಸಂಹಾರ ಇತ್ಯಾದಿಗಳ ವರ್ಣನೆಯನ್ನು ನೃತ್ಯದ ಮೂಲಕ ಪ್ರಸ್ತುತ ಪಡಿಸಲಿದ್ದಾರೆ ನೃತ್ಯಗುರು ಸಹನಾ ಚೇತನ್.

ವಿಶ್ವವಿಜಯಿ ಬಸವ
(ಜಗಜ್ಯೋತಿ ಬಸವಣ್ಣನವರ ವಚನಗಳ ನೃತ್ಯೋನ್ಮಾದ)
ನಾಟ್ಯಾಲಯದ ಹಿರಿಯ ವಿದ್ಯಾರ್ಥಿಗಳಿಂದ
ಭಕ್ತಿ ಭಂಡಾರಿ ಬಸವಣ್ಣನವರು ಭಾರತದ ೧೨ನೇ ಶತಮಾನದ ಕನ್ನಡದ ಒಬ್ಬ ಶ್ರೇಷ್ಟ ತತ್ವಜ್ಞಾನಿ. ಕಾಯಕವೇ ಕೈಲಾಸ ಎಂಬ ತತ್ವವನ್ನು ತಮ್ಮ ಕೂಡಲಸಂಗಮ ದೇವ ಎಂಬ ಅಂಕಿತದೊಡನೆ ವಚನಗಳನ್ನು ರಚಿಸಿ ಲೋಕದೆಲ್ಲೆಡೆ ಪಸರಿಸಿ ಕನ್ನಡ ಸಾಹಿತ್ಯಕ್ಕೆ ಹಾಗೂ ಆಧ್ಯಾತ್ಮ ಚಿಂತನೆಗಳಿಗೆ ಹೊಸ ಹೊಳಹನ್ನು ಕೊಟ್ಟವರು ಬಸವಣ್ಣನವರು. ಅವರ ಶಿವಕೇಂದ್ರಿತ ಭಕ್ತಿ ಮಾರ್ಗದ ಒಟ್ಟು ೪೪ ವಚನಗಳನ್ನು ಆಧರಿಸಿದ ಜಯ ಜಯ ವಿಶ್ವ ವಿಜಯಿ ಬಸವ ಎಂಬ ಶೀರ್ಷಿಕೆಯಡಿ ನೃತ್ಯ ರೂಪಕವನ್ನು ಪ್ರಸ್ತುತಪಡಿಸಲಾಗುತ್ತಿದೆ. ಈ ನೃತ್ಯ ರೂಪಕವನ್ನು ನಾಟ್ಯಾಲಯದ ಹಿರಿಯ ವಿದ್ಯಾರ್ಥಿಗಳ ಸಮೂಹ ನಿಮ್ಮ ಮುಂದೆ ಸಾದರ ಪಡಿಸಲಿದೆ.

೦೩.೦೮.೨೦೨೩ ಭಾನುವಾರ
ಸಂಜೆ ೬:೩೦ ರಿಂದ
ಅಂತರಾಷ್ಟ್ರೀಯ ನೃತ್ಯ ಕಲಾವಿದರಾದ
ಶುಭಿ ಜೋಹರಿ ಹಾಗೂ ಅಮಿತ್ ಖಿಂಚಿ ಯುಗಳ
ಕಥಕ್ ನೃತ್ಯ

ಭಾರತೀಯ ಶಾಸ್ತ್ರೀಯ ನೃತ್ಯಪದ್ಧತಿಯ ಎಂಟು ಮುಖ್ಯ ನೃತ್ಯಗಳಲ್ಲಿ ಉತ್ತರ ಪ್ರದೇಶದ ಕಥಕ್ ಕೂಡ ಒಂದಾಗಿದೆ. ಭಾರತದಲ್ಲಿ ನಡೆದ ಭಕ್ತಿ ಚಳುವಳಿಯ ಸಮಯದಲ್ಲಿ ವಿಕಸನಗೊಂಡ ಈ ನೃತ್ಯ ಮೊಘಲ್ ಆಳ್ವಿಕೆಯ ಸಮಯದಲ್ಲಿ ಇದನ್ನು ಚಕ್ರವರ್ತಿಗಳು ಇದರ ಪೋಷಕರಾಗಿದ್ದರು. ಉತ್ತರಾದಿ ಸಂಗೀತದಲ್ಲಿ ಹಾಸುಹೊಕ್ಕಾಗಿ ದಕ್ಷಿಣಾದಿ ನರ್ತನಕ್ಕೆ ಹೋಲಿಸಿದರೇ ಅತ್ಯಂತ ವಿಭಿನ್ನವೇ ಎಂದು ತೋರುವ ಈ ನೃತ್ಯಕ್ಕೆ ಮನಸೋಲದವರಿಲ್ಲ. ಅಂತರಾಷ್ಟ್ರೀಯ ವೇದಿಕೆಯಲ್ಲಿ ಪಂಡಿತ್ ಬಿರ್ಜು ಮಹಾರಾಜ್, ಪಂಡಿತ್ ರಾಜೇಂದ್ರ ಗಂಗಣ ಯವರ ನೇರ ಶಿಷ್ಯರಾಗಿ ರೂಪುಗೊಂಡಿರುವ ಶುಭಿ ಜೋಹರಿ ಹಾಗೂ ಅಮಿತ್ ಖಿಂಚಿಯವರು ತಮ್ಮ ಯುಗಳ ನೃತ್ಯದ ಮೂಲಕ ನಮ್ಮನ್ನು ರಂಜಿಸಲು ದೂರದ ದೆಹಲಿಯಿಂದ ಆಗಮಿಸುತ್ತಿದ್ದಾರೆ.

ಘಟ್ಕಾ (ಪಂಜಾಬಿನ ಸಮರ ಕಲೆ)
ಕುಲ್ವಿಂದರ್ ಸಿಂಗ್ ಹಾಗೂ ತಂಡ, ನಾಗ್ಪುರ – ಮಹಾರಾಷ್ಟç
ಇದು ಪಂಜಾಬ್ ರಾಜ್ಯದ ಶಾಸ್ತ್ರೀಯ ಸಮರ ಕಲೆ. ೧೫ನೇ ಶತಮಾನದಲ್ಲಿ ಜನ್ಮತಾಳೀ ೨೦ನೇ ಶತಮಾನದ ಹೊಸ್ತಿಲಲ್ಲಿ ಪುನರುಜ್ಜೀವನ ಕಂಡುಕೊAಡ ಈ ಕಲೆ ಇಂದು ವಿಶ್ವವಿಖ್ಯಾತಿಯನ್ನು ಪಡೆದಿದೆ. ೧೯೮೨ರಲ್ಲಿ ಅಂತರಾಷ್ಟ್ರಿಯ ಗಟ್ಕಾ ಫೆಡೆರೇಷನ್‌ನ್ನು ಸ್ಥಾಪಿಸಿಕೊಂಡು ಇಂದು ಭಾರತ ಸರ್ಕಾರ ರೂಪಿಸಿರುವ ಖೇಲೋ ಇಂಡಿಯಾದ ಕ್ರೀಡೆ ಹಾಗೂ ಪ್ರದರ್ಶನ ಕಲೆಯ ಭಾಗವಾಗಿಯೂ ಇದು ಹೊರಹೊಮ್ಮಿದೆ. ಸಿಖ್ ಹಬ್ಬಗಳಲ್ಲಿ ಹೆಚ್ಚು ಪ್ರದರ್ಶನಗೊಳ್ಳು ಈ ಕಲೆಗೆ ಅವಿರತ ಅಭ್ಯಾಸ ಹಾಗೂ ದೈಹಿಕ ಕ್ಷಮತೆಯೇ ಮೂಲ ಮಾಧ್ಯಮ. ಕುಲ್ವಿಂದರ್ ಸಿಂಗ್ ಹಾಗೂ ಅವರ ತಂಡ ಜರ್ಮನಿ, ದುಬೈ, ಅಮೇರಿಕಾ, ಇಂಗ್ಲೆಂಡ್, ಸಿಂಗಾಪೂರ್‌ಗಳಲ್ಲಿ ನಡೆಯುವ ಅಂತರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳಲ್ಲಿ ಚಿನ್ನದ ಪದಕ ಗಳಿಸಿರುವುದಲ್ಲದೆ ಹಲವಾರೂ ಅಂತರಾಷ್ಟ್ರೀಯ ವೇದಿಕೆಗಳಲ್ಲಿಯೂ ತಮ್ಮ ಸಮರ ಕಲೆಗಳ ಪ್ರದರ್ಶನವನ್ನು ನೀಡಿ ಜನಮೆಚ್ಚುಗೆ ಗಳಿಸಿರುತ್ತಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

MESCOM ನವೆಂಬರ್ 27. ಎಂ.ಆರ್.ಎಸ್. ನಲ್ಲಿ ತ್ರೈಮಾಸಿಕ ನಿರ್ವಹಣೆ. ಶಿವಮೊಗ್ಗದ ಬಹುಪಾಲು ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ

MESCOM ಶಿವಮೊಗ್ಗ ಎಂ.ಆರ್.ಎಸ್. ವಿದ್ಯುತ್ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ...

Constitution Day ನವೆಂಬರ್ 26.”ಸಂವಿಧಾನ ದಿನ” .ಫ್ರೀಡಂ ಪಾರ್ಕಿನಲ್ಲಿ ವಿಶೇಷ ಕಾರ್ಯಕ್ರಮ

Constitution Day ನ. 26 ರಂದು 'ಸಂವಿಧಾನ ದಿನಾಚರಣೆ' ಪ್ರಯುಕ್ತ ಭಾರತ...

Shivamogga police ವಿಷ ಸೇವಿಸಿ ಮೃತಪಟ್ಟ ಅಪರಿಚಿತ ವ್ಯಕ್ತಿ.ಪೊಲೀಸ್ ಪ್ರಕಟಣೆ

Shivamogga police ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರ್ಕಾರಿ ಬಸ್ ನಿಲ್ದಾಣದ...