Aam Admi Party ಚಿಕ್ಕಮಗಳೂರು ಜಿಲ್ಲೆಯ ಹಲವು ತಾಲ್ಲೂಕುಗಳಲ್ಲಿ ಎಲ್.ಇ.ಡಿ. ಬಲ್ಪ್ ಗಳ ಟೆಂಡರ್‌ನಲ್ಲಿ ಕೋಟಿಗಟ್ಟಲೇ ಅವ್ಯವಹಾರವಾಗಿರುವ ಹಿನ್ನೆಲೆಯಲ್ಲಿ ಬಾಕಿಯಿರುವ ಅನುದಾನವನ್ನು ತಡೆಹಿಡಿದು ಸೂಕ್ತ ತನಖೆ ನಡೆಸಬೇಕು ಎಂದು ಜಿಲ್ಲಾ ಆಮ್‌ಆದ್ಮಿ ಪಕ್ಷದ ಮುಖಂಡರುಗಳು ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಈ ಸಂಬಂಧ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅವರಿಗೆ ಎಎಪಿ ಮುಖಂಡರುಗಳು ಮನವಿ ಸಲ್ಲಿಸಿ ಬಲ್ಪ್ ಗಳಲ್ಲಾಗಿರುವ ಅವ್ಯವಹಾರವನ್ನು ತನಿಖೆ ನಡೆಸಿ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಎಎಪಿ ಮುಖಂಡ ಹಾಗೂ ನಗರಸಭಾ ಮಾಜಿ ಅಧ್ಯಕ್ಷ ಸೈಯದ್ ಜಮೀಲ್ ಅಹಮ್ಮದ್ ಜಿಲ್ಲೆಯ ಹಲವು ತಾಲ್ಲೂಕುಗಳ ರಸ್ತೆ ಬದಿಯಲ್ಲಿ ಎಲ್.ಇ.ಡಿ. ಬಲ್ಪ್ಗಳನ್ನು ಹಾಕಲು ಅನುಮತಿಸಿದ್ದು ಆದರೆ ಟೆಂಡರ್ ಒಟ್ಟು 23 ಕೋಟಿ ರೂ. ಹಣದಲ್ಲಿ ಸಂಬಂಧಿಸಿದ ಕಂಪನಿಯವರು ಎಷ್ಟು ಬಲ್ಪ್ಗಳನ್ನು ಅಳವಡಿ ಸಿದೆ, ಒಂದು ಬಲ್ಪ್ ಮೊತ್ತವನ್ನು ಆರ್.ಟಿ.ಐ ಮೂಲಕ ಮಾಹಿತಿ ಕೋರಿದರೂ ಇದುವರೆಗೂ ನೀಡಿರುವುದಿಲ್ಲ ಎಂದರು.
Aam Admi Party ಬಲ್ಪ್ಗಳ ಅಳವಡಿಸುವ ಸಂಬಂಧ ಅತೀದೊಡ್ಡ ಹಗರಣ ನಡೆದಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿರು ವುದರಿಂದ ಟೆಂಡರ್ ವಹಿಸಿಕೊಂಡಿರುವ ಕಂಪನಿಯ ಗುತ್ತಿಗೆ ಹಣವನ್ನು ಬಿಡುಗಡೆ ಮಾಡದಂತೆ ಕ್ರಮ ವಹಿಸ ಬೇಕು. ಈ ಹಗರಣದ ಹಿಂದೆ ದೊಡ್ಡ ವ್ಯಕ್ತಿಗಳ ಕೈವಾಡವಿರುವ ಹಿನ್ನೆಲೆಯಲ್ಲಿ ಸೂಕ್ತ ತನಿಖೆ ನಡೆಸಿ ಸರ್ಕಾರದ ಬೊಕ್ಕಸದ ಹಣಕ್ಕೆ ಕಡಿವಾಣ ಹಾಕಬೇಕು ಎಂದರು.
ಈ ಸಂದರ್ಭದಲ್ಲಿ ಎಎಪಿ ರಾಜ್ಯ ಜಂಟಿ ಕಾರ್ಯದರ್ಶಿ ಡಾ|| ಕೆ.ಸುಂದರಗೌಡ, ಜಿಲ್ಲಾಧ್ಯಕ್ಷ ಹೇಮಂತ್ ಕುಮಾರ್, ಮುಖಂಡರುಗಳಾದ ಅಂತೋಣ , ಪ್ರಭು, ಜಲೀಲ್, ಪರೇರಾ, ಶಿವೇಗೌಡ ಹಾಜರಿದ್ದರು.