Friday, December 5, 2025
Friday, December 5, 2025

Keelambi Media Lab Private Limited ಕೀಳಂಬಿ ಮೀಡಿಯಾ ಲ್ಯಾಬ್ ನ ಹೆಮ್ಮೆಯ ಸಿನಿಮಾದ ಟೈಟಲ್ ಬಿಡುಗಡೆ

Date:

Keelambi Media Lab Private Limited ಕೀಳಂಬಿ ಮೀಡಿಯಾ ಲ್ಯಾಬ್ ಪ್ರೈವೇಟ್ ಲಿಮಿಟೆಡ್ ನಿರ್ಮಾಣ ಮಾಡುತ್ತಿರುವ ಮತ್ತು ಲಾಸ್ಟ್ ಪೇಜ್ ಕ್ರಿಯೇಶನ್ ಸಹಯೋಗ ನೀಡುತ್ತಿರುವ ಮಲೆನಾಡಿನ ಹೊಚ್ಚ ಹೊಸ ಕನ್ನಡ ಚಲನಚಿತ್ರದ ಟೈಟಲ್ ಆಗಸ್ಟ್.29ರ ಬೆಳಿಗ್ಗೆ 11:11ಕ್ಕೆ ಬಿಡುಗಡೆಯಾಗಲಿದೆ.

ಖ್ಯಾತ ನಿರ್ದೇಶಕರಾದ ಯೋಗರಾಜ್ ಭಟ್ , ನಟ ಸೃಜನ್ ಲೋಕೇಶ್, ವಿಜಯ್ ರಾಜಕುಮಾರ್, ನಟಿ ತಾರಾ, ನಟ ಧರ್ಮಣ್ಣ ಕಡೂರ, ಸಿಂಪಲ್ ಸುನಿ , ನಿರ್ದೇಶಕರಾದ ಪವನ್ ಒಡೆಯರ್ , ಕಿರುತೆರೆ ನಟ ದೀಕ್ಷಿತ್ ಶೆಟ್ಟಿ, ನಟಿ ರಂಜಿನಿ ರಾಘವನ್, ನಟ ಪೃಥ್ವಿ ಅಂಬಾರ್, ನಟಿ ಖುಷಿ ರವಿ, ಬಹದ್ದೂರ್ ಚೇತನ್, ನಟಿಯರಾದ ಕಾವ್ಯ ಶೆಟ್ಟಿ, ಕ್ರಿಷಿ ತಾಪಂಡ, ಅರ್ಚನಾ ಕೊಟ್ಟಿಗೆ, ವೈಷ್ಣವಿ ಗೌಡ, ನಟರಾದ ವಿಜಯ್ ಸೂರ್ಯ, ರಾಕೇಶ್ ಅಡಿಗ, ನಟ ಮಾಸ್ತಿ ಅವರು ಚಿತ್ರದ ಟೈಟಲ್ ಬಿಡುಗಡೆ ಮಾಡಲಿದ್ದಾರೆ.

ತಾರಾಗಣದಲ್ಲಿ ರಂಗಾಯಣ ರಘು, ಗೋಪಾಲ್ ಕೃಷ್ಣ ದೇಶಪಾಂಡೆ ಮತ್ತು ಸುಜಯ್ ಶಾಸ್ತ್ರಿ, ಹರಿಣಿ, ಪ್ರತಿಮಾ ನಾಯಕ್, ವಿನಯ್ ಯು.ಜೆ., ನಿಧಿ ಹೆಗ್ಡೆ, ಶ್ರೀಹರ್ಷ ಗೋಭಟ್ಟ ಮತ್ತಿತರರು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

Keelambi Media Lab Private Limited ರಾಜೇಶ್ ಕೀಳಂಬಿ, ರಂಜಿನಿ ಪ್ರಸನ್ನ ಅವರ ಸಾರಥ್ಯದಲ್ಲಿ ನಡೆಯುತ್ತಿರುವ ಕೀಳಂಬಿ ಮೀಡಿಯಾ ಲ್ಯಾಬ್ ಪ್ರೈವೇಟ್ ಲಿಮಿಟೆಡ್ ನ ಚೊಚ್ಚಲ ಚಿತ್ರ ಇದಾಗಿದೆ.

ಹೊಸ ಪ್ರತಿಭೆ ಸಂದೀಪ್ ಸುಂಕದ್ ಈ ಚಿತ್ರದ ಕಥೆ ಮತ್ತು ನಿರ್ದೇಶನವನ್ನ ಮಾಡಿದ್ದಾರೆ.
ವಿಶ್ವಜಿತ್ ರಾವ್ ರವರ ಛಾಯಾಗ್ರಹಣ, ಶಶಾಂಕ್ ನಾರಾಯಣ ಸಂಕಲನ, ಮಯೂರ್ ಅಂಬೆಕಲ್ಲು ಸಂಗೀತ & ಆಶಿಕ್ ಕುಸುಗೊಳ್ಳಿ ರವರ ಗ್ರೇಡಿಂಗ್ ಈ ಚಿತ್ರಕ್ಕಿದೆ.

ಸಂಪೂರ್ಣ ಮಲೆನಾಡಿನಲ್ಲೇ ಚಿತ್ರೀಕರಣವಾಗಿರೋ ಈ ಸಿನಿಮಾದಲ್ಲಿ ಅನೇಕ ಮಲೆನಾಡಿಗರು ಕೆಲಸ ಮಾಡಿರೋದು ಮತ್ತೊಂದು ವಿಶೇಷದ ಸಂಗತಿ. ಶೀರ್ಷಿಕೆ ಬಿಡುಗಡೆ ಬಗ್ಗೆ ತಂಡದ ಪ್ರಕಟಣೆಗಳು ಚಿತ್ರರಸಿಕರಲ್ಲಿ ಕುತೂಹಲ ಮೂಡಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...