Thursday, March 19, 2026
Thursday, March 19, 2026

Dr. Satyanarayana HS ಕನ್ನಡ ಕವಿಗಳ‌ ಋತು ವಿಲಾಸ ಅಭ್ಯಾಸ ಮಾಡುವುದೇ ಒಂದು ಸೊಗಸು- ಡಾ.ಸತ್ಯನಾರಾಯಣ

Date:

Dr. Satyanarayana HS ಮಳೆಯಿಲ್ಲದೆ ಇಳೆಯುಂಟೆ? ಭೂಮಿಯ ಮೇಲಿನ ಜೀವಕೋಟಿ ಬದುಕುಳಿಯಲು ಮಳೆ ಬೇಕು. ಹಾಗೆಂದೇ ಕನ್ನಡ ಕವಿಗಳು ವರ್ಷ ಋತುವನ್ನು ಬಣ್ಣಿಸಿರುವ ಪರಿ ಅನನ್ಯವಾಗಿದೆ. ಪಂಪ ರನ್ನ ಹರಿಹರ ಕುಮಾರವ್ಯಾಸ, ರತ್ನಾಕರವರ್ಣಿಯಿಂದ ಮೊದಲ್ಗೊಂಡು ಆಧುನಿಕ ಕವಿಗಳು ಮಳೆಯನ್ನಿ ಜೀವನಾಡಿಯಾಗಿ ಕಂಡಿರುವ ಬಗೆಯನ್ನು ವಿಮರ್ಶಕ ಡಾ.ಎಚ್.ಎಸ್. ಸತ್ಯನಾರಾಯಣ ವಿವರಿಸಿದರು.

ಭೂಮಿಕಾ ಆಯೋಜಿಸಿದ್ದ ಈ ಸಂಜೆಯ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು ಬಿಎಂಶ್ರೀ ಬೇಂದ್ರೆ ಕುವೆಂಪು ಪುತಿನ ಕೆ ಎಸ್ ನರಸಿಂಹಸ್ವಾಮಿ, ಜಿಎಸ್ ಶಿವರುದ್ರಪ್ಪ, ಕಣವಿ, ನಿಸಾರ್, ಸು ರಂ ಎಕ್ಕುಂಡಿ ಕಂಬಾರ, ಎಂ ಆರ್ ಕಮಲ, ಪ್ರತಿಭಾ ನಂದಕುಮಾರ್ ಮುಂತಾದವರ ಕವಿತೆಗಳಲ್ಲಿ ಚಿತ್ರಿತವಾಗಿರುವ ಮಳೆಯ ವರ್ಣನೆಯನ್ನು ಸಭೆಗೆ ಪರಿಚಯಿಸಿದರು.

Dr. Satyanarayana HS ಜನಪದರ ಅನೇಕ ಮಳೆಯ ಹಾಡುಗಳನ್ನು ಉಲ್ಲೇಖಿಸುತ್ತಾ ಕನ್ನಡದ ಸುಪ್ರಸಿದ್ಧ ಕವಿಗಳ ರಚನೆಗಳನ್ನು ಚರ್ಚಿಸಿದರು. ಅಧ್ಯಕ್ಷತೆ ವಹಿಸಿದ್ದ ಭೂಮಿಕಾ ಅಧ್ಯಕ್ಷ ಡಾ. ಕೃಷ್ಣ ಭಟ್ ಮಾತನಾಡಿ ಕನ್ನಡ ಕವಿಗಳು ಕಂಡ ಋತು ವಿಲಾಸವನ್ನು ಅಭ್ಯಸಿಸುವುದೇ ಒಂದು ಸೊಗಸೆಂದು ಬಣ್ಣಿಸಿದರು.

ಈ ಬಗೆಯ ಕಾರ್ಯಕ್ರಮದಿಂದಲಾದರೂ ವರುಣ ದೇವ ಮಳೆಯನ್ನು ಕರುಣಿಸಲೆಂದು ಆಶಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa “ಸಹ್ಯಾದ್ರಿ ಉತ್ಸವ” ಕ್ಕೆ ಸರ್ಕಾರವು ಮತ್ತೆ ಚಾಲನೆ ನೀಡಲು ಒತ್ತಾಯಿಸುತ್ತೇನೆ- ಶಾಸಕ ಎಸ್.ಎನ್. ಚನ್ನಬಸಪ್ಪ

S.N. Channabasappa ಶಿವಮೊಗ್ಗ ಜಿಲ್ಲೆಯ ಸಮೃದ್ಧ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು...

Madhu Bangarappa ಎಸ್ಎಸ್ಎಲ್ ಸಿ ಪರೀಕ್ಷಾರ್ಥಿಗಳಿಗೆ ಶುಭ ಹಾರೈಸಿದ ಸಚಿವ ಮಧು ಬಂಗಾರಪ್ಪ

Madhu Bangarappa ರಾಜ್ಯಾದ್ಯಂತ ಇಂದಿನಿಂದ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1...

Jawahar Navodaya Vidyalaya ಕುಂದಗಸವಿಯ ಎಂ.ಎನ್.ಅಪೂರ್ವ ನವೋದಯ ವಿದ್ಯಾಲಯಕ್ಕೆ ಆಯ್ಕೆ

Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯ ನಡೆಸುವ ಪ್ರಸಕ್ತ ಸಾಲಿನ...