Chandrayana -3 ಚಂದ್ರಯಾನ 3 ಯಶಸ್ಸಿನ ಹಿನ್ನಲೆಯಲ್ಲಿ ಇಸ್ರೋಗೆ ಭೇಟಿ ನೀಡುವ ಉದ್ದೇಶದಿಂದ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಜಕೀಯ ಪ್ರತಿನಿಗಳ ಬದಲಾಗಿ ರಾಜ್ಯ ಸರ್ಕಾರದ ಅಧಿಕಾರಿಗಳು ಸ್ವಾಗತಿಸಿದರು.
ಬೆಳಗ್ಗೆ ಬೆಂಗಳೂರಿನ ಹೆಚ್‍ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಸರ್ಕಾರದ ಪರವಾಗಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅವರು ಸೇರಿದಂತೆ ಹಿರಿಯ ಅಧಿಕಾರಿಗಳು ಬರಮಾಡಿಕೊಂಡರು.
ರಾಜ್ಯ ಸರ್ಕಾರದ ರಾಜಕೀಯ ಪ್ರತಿನಿಗಳ ಅಹ್ವಾನ ಬೇಡ ಎಂದು ಪಿಎಂ ಕಚೇರಿಯಿಂದ ಮಾಹಿತಿ ಹಿನ್ನಲೆಯಲ್ಲಿ ಅಧಿಕಾರಿಗಳನ್ನು ಮಾತ್ರ ರಾಜ್ಯ ಸರ್ಕಾರ ಸ್ವಾಗತಕ್ಕೆ ಕಳಿಸಿಕೊಟ್ಟಿದೆ.
ಪಿಎಂ ಆಹ್ವಾನ ಮಾಡಲು ಹೋಗುವಂತೆ ಗೃಹ ಸಚಿವ ಡಾ.ಜಿ ಪರಮೇಶ್ವರ್‍ಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದರು.
Chandrayana -3 ವಿದೇಶ ಪ್ರವಾಸದಲ್ಲಿದ್ದ ಪ್ರಧಾನಿಗಳು ಗ್ರೀಸ್ ದೇಶದ ಪ್ರವಾಸ ಮುಗಿಸಿ ಸತತ 10 ಗಂಟೆಗಳ ಕಾಲ ಪ್ರಯಾಣಿಸಿ ನೇರವಾಗಿ ಬೆಂಗಳೂರು ನಗರದ ಹೆಚ್‍ಎಎಲ್ ವಿಮಾನ ನಿಲ್ದಾಣದಲ್ಲಿ ಬಂದಿಳಿದರು.ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಬೆಂಗಳೂರಿಗೆ ಆಗಮಿಸಿರುವ ಪ್ರಧಾನಿಗಳನ್ನು ಸಾವಿರಾರು ಸಾರ್ವಜನಿಕರು ಹೆಚ್‍ಎಎಲ್ ವಿಮಾನ ನಿಲ್ದಾಣದ ಹೊರಭಾಗದಲ್ಲಿ ಸ್ವಾಗತಿಸಿದರು.
ಬೆಂಗಳೂರಿನಲ್ಲಿ ಇಸ್ರೋ ವಿಜ್ಞಾನಿಗಳ ತಂಡವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಇಡೀ ಪೀಳಿಗೆಯನ್ನು ಜಾಗೃತಗೊಳಿಸಿ ಯುವ ಮನಸ್ಸುಗಳಲ್ಲಿ ಆಳವಾದ ಛಾಪು ಮೂಡಿಸಿದ ಕೀರ್ತಿಯನ್ನು ಇಸ್ರೋ ವಿಜ್ಞಾನಿಗಳಿಗೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು,ಚಂದ್ರಯಾನವು ಚಂದ್ರನ ಮೇಲೆ ಮೃದುವಾಗಿ ಇಳಿದ ದಿನ ಆಗಸ್ಟ್ 23 ನ್ನು ‘ರಾಷ್ಟ್ರೀಯ ಬಾಹ್ಯಾಕಾಶ ದಿನ’ ಎಂದು ಘೋಷಿಸಿದರು. ಚಂದ್ರನ ಮೇಲ್ಮೈಯಲ್ಲಿ ವಿಕ್ರಮ್ ಲ್ಯಾಂಡರ್‌ನ ಟಚ್‌ಡೌನ್ ಜಾಗವನ್ನು ಅನ್ನು ‘ಶಿವಶಕ್ತಿ’ ಬಿಂದು ಎಂದು ಘೋಷಿಸಿದರು.
ಭಾರತದ ಚಂದ್ರಯಾನದ ಯಶಸ್ವಿ ಮಿಷನ್ ಹಿಂದಿನ ವಿಜ್ಞಾನಿಗಳನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ನೀವು ‘ಮೇಕ್ ಇನ್ ಇಂಡಿಯಾ’ ಅನ್ನು ಚಂದ್ರನಲ್ಲಿಗೆ ಕೊಂಡೊಯ್ದಿದ್ದೀರಿ’ ಎಂದು ಶ್ಲಾಘಿಸಿದರು.