Saturday, April 4, 2026
Saturday, April 4, 2026

Rotary Club Shivamogga ಆಗಸ್ಟ್ 29 ರಂದು ಸುರಕ್ಷಿತ ವಾಹನ ಚಾಲನೆ & ರಸ್ತೆ ಸುರಕ್ಷತೆ ಅರಿವು ಕಾರ್ಯಕ್ರಮ

Date:

Rotary Club Shivamogga ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಹಾಗೂ ಶಿವಮೊಗ್ಗ ಜಿಲ್ಲಾ ಪೊಲೀಸ್ ಸಹಯೋಗದಲ್ಲಿ ನಗರದ ಅಂಬೇಡ್ಕರ್ ಭವನದಲ್ಲಿ ಆಗಸ್ಟ್ 29ರ ಬೆಳಗ್ಗೆ 10ಕ್ಕೆ ಸುರಕ್ಷಿತ ವಾಹನ ಚಾಲನೆ ಹಾಗೂ ರಸ್ತೆ ಸುರಕ್ಷತೆ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ವತಿಯಿಂದ ಅಂಬೇಡ್ಕರ್ ಭವನದಲ್ಲಿ ಆಗಸ್ಟ್ 29ರ ಬೆಳಗ್ಗೆ 10ಕ್ಕೆ ಆಯೋಜಿಸಿರುವ ರಸ್ತೆ ಸುರಕ್ಷತೆ ಅರಿವು ಕಾರ್ಯಕ್ರಮವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಉದ್ಘಾಟಿಸುವರು. ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಶಿವರಾಜ್.ಎಚ್.ಪಿ. ಅಧ್ಯಕ್ಷತೆ ವಹಿಸುವರು.

Rotary Club Shivamogga ವಿಶೇಷ ಕಾರ್ಯಕ್ರಮವು ಬೆಳಗ್ಗೆ 10 ರಿಂದ ಮಧ್ಯಾಹ್ನ 1ರವರೆಗೂ ನಡೆಯಲಿದ್ದು, ರೋಟರಿ ಜಿಲ್ಲಾ ಗವರ್ನರ್ ಬಿ.ಸಿ.ಗೀತಾ, ಎಎಸ್‌ಪಿ ಅನಿಲ್‌ಕುಮಾರ್ ಎಸ್.ಭೂಮರೆಡ್ಡಿ, ಟ್ರಾಫಿಕ್ ಪೊಲೀಸ್ ವೃತ್ತ ನೀರಿಕ್ಷಕ ಸಂತೋಷ್‌ಕುಮಾರ್ ಡಿ.ಕೆ., ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಪೀಟರ್ ಸೈಮನ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುವರು.

ರೋಟರಿ ಜಿಲ್ಲಾ ಯೋಜನಾ ಚೇರ‍್ಮನ್ ವಸಂತ್ ಹೋಬಳಿದಾರ್, ವಲಯ 11ರ ಸಹಾಯಕ ಗವರ್ನರ್ ರವಿ ಕೋಟೋಜಿ, ವಲಯ ಪ್ರತಿನಿಧಿ ಧರ್ಮೇಂದರ್ ಸಿಂಗ್, ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಕಾರ್ಯದರ್ಶಿ ಕಿರಣ್‌ಕುಮಾರ್.ಜಿ. ಪಾಲ್ಗೊಳ್ಳಲಿದ್ದಾರೆ.

ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ವಲಯ ಸಂಯೋಜಕ ರಮೇಶ್ ಎನ್. ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ನಗರದ ಜನತೆಗೆ ಕುಡಿಯುವ ನೀರಿನ ಸೌಲಭ್ಯದಲ್ಲಿ ಯಾವುದೇ ವ್ಯತ್ಯಯವಾಗಬಾರದು- ಎಸ್.ಎನ್.ಚನ್ನಬಸಪ್ಪ

S.N. Channabasappa ಕುಡಿಯುವ ನೀರಿನ ಪಂಪ್ ಹೌಸ್‌ಗೆ ಶಾಸಕ ಎಸ್.ಎನ್. ಚನ್ನಬಸಪ್ಪ...

Klive Special Article ಶ್ರೀಬಿಷ್ಟಪ್ಪಯ್ಯನವರು

ಲೇ: ಪ್ರಸಾದ್ ಶ್ರೀವತ್ಸ. Klive Special Article ಭಾರತವೆಂದರೆ ಅದು ಕೇವಲ ದೇಶವಲ್ಲ ಅದೆಷ್ಟೋ...

B.Y. Vijayendra ದಾವಣಗೆರೆ ಚುನಾವಣೆ: ಬಿಜೆಪಿ ಅಭ್ಯರ್ಥಿಗೇ ಗೆಲುವು- ಬಿ.ವೈ.ವಿಜಯೇಂದ್ರ.

B.Y. Vijayendra  ಶಿವಮೊಗ್ಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮಾಧ್ಯಮ ಮಿತ್ರರೊಂದಿಗೆ...

Drinking water supply ಗಮನಿಸಿ!.ಏಪ್ರಿಲ್ 4 & 5 ರಂದುಶಿವಮೊಗ್ಗ ನಗರದಲ್ಲಿ ಹಲವೆಡೆ ನೀರು ಸರಬರಾಜು ವ್ಯತ್ಯಯ.

Drinking water supply ನಗರದ ಕೃಷ್ಣರಾಜೇಂದ್ರ ಜಲಶುದ್ಧೀಕರಣ ಘಟಕಕ್ಕೆ ವಿದ್ಯುತ್ ಸರಬರಾಜು ಮಾಡುವ...