Friday, November 22, 2024
Friday, November 22, 2024

Gunavante Srimaya Yakshagana Kala Kendra ಯಾವುದೇ ಕ್ಷೇತ್ರದಲ್ಲಿ ಕಲಾವಿದನಾಗಲು ನಿರಂತರ ತುಡಿತ, ವ್ಯಾಪಕ ಅಧ್ಯಯನ ಅಗತ್ಯ- ಸುರೇಶ್ ನಾಯ್ಕ

Date:

Gunavante Srimaya Yakshagana Kala Kendra ಅಖಿಲ ಭಾರತ ಕಲಾ ವಿದ್ಯಾರ್ಥಿಗಳಿಗೆ ಯಕ್ಷಗಾನ ಕಮ್ಮಟದ ಸಮಾರೋಪ ಸಮಾರಂಭ ಮತ್ತು ವಿದ್ಯಾರ್ಥಿಗಳ  ಕಲಿಕಾ ಪ್ರದರ್ಶನ  ಕಾರ್ಯಕ್ರಮವು ದಿ: 23/08/2023 ರಂದು  ಬುಧವಾರ ಹೊನ್ನಾವರ  ಗುಣವಂತೆ  ಶ್ರೀಮಯ ಯಕ್ಷಗಾನ ಕಲಾ ಕೇಂದ್ರದಲ್ಲಿ ನಡೆಯಿತು. ಸಭಾಧ್ಯಕ್ಷತೆಯನ್ನು ವಹಿಸಿದ ಹೊನ್ನಾವರ ತಾಲ್ಲೂಕ ಪಂಚಾಯತ ಕಾರ್ಯ ನಿರ್ವಹಾಣಾಧಿಕಾರಿಗಳಾದ ಶ್ರೀ. ಸುರೇಶ ನಾಯ್ಕ ಮಾತನಾಡಿ ಯಾವುದೇ ಕ್ಷೇತ್ರದಲ್ಲಿ ಕಲಾವಿದನಾಗಲು ನಿರಂತರ ಪ್ರಯತ್ನ, ತುಡಿತ  ಮತ್ತು ವ್ಯಾಪಕ ಅದ್ಯಯನದ ಅವಶ್ಯಕತೆ  ಇದೆ. ಕಲಾವಿದನಾದ ನಂತರ ಬರುವ ಯಶಸ್ಸು ತೃಪ್ತಿಯನ್ನು ತರುತ್ತದೆ. ಕೆರೆಮನೆಯ ಕುಟುಂಬ ಯಕ್ಷಗಾನದಲ್ಲಿ ನಾವೀನ್ಯತೆಯ  ಕಾರ್ಯ ಮಾಡಿ ದೇಶ ವಿದೇಶದಲ್ಲಿ ಖ್ಯಾತಿ , ಪ್ರಖ್ಯಾತಿಯನ್ನು ಪಡೆದಿದ್ದು ಈ ದಾರಿಯಲ್ಲಿ ತರಬೇತಿ  ಪಡೆದವರು ಸಾಗಬೇಕು ಎಂದು ಅಭಿಪ್ರಾಯ ಪಟ್ಟರು. 

ಕಾರ್ಯಕ್ರಮದ ಉದ್ಘಾಟನೆ  ಮಾಡಿದ ತಾಲೂಕ ಸರ್ವೆಯರ್ ಅಧಿಕಾರಿಯಾದ ಶ್ರೀ. ಭುವನ ಸುಂದರರವರು ಮಾತನಾಡಿ ಯಕ್ಷಗಾನ  ಒಂದು ಸುಂದರ ಸರ್ವಾಂಗ ಶಾಸ್ತ್ರೀಯ ಕಲೆಯಾಗಿದ್ದು ಹಲವು ರಾಜ್ಯಗಳಿಂದ ಕಲಿಯಲು  ಬಂದ ಶಿಬಿರಾರ್ಥಿಗಳು ಯಕ್ಷಗಾನ  ಕಲಿತು ಜೀವನವನ್ನು ಕಲಾಮಯ ಮಾಡಿಕೊಳ್ಳುತ್ತಾ ದೇಶ ಬೆಳಗುವಂತ ಕಲಾ ಜೀವನ ಅನುಭವಿಸಿ ಅನುಭೂತಿ ಪಡೆಯುವಂತಾಗಲಿ  ಎಂದು ಶುಭ ಹಾರೈಸಿದರು. 

ಮುಖ್ಯ ಅತಿಥಿಗಳಾದ  ಶ್ರೀ. ಮಹೇಶ ಕಲ್ಯಾಣಪುರ  ಮಾತನಾಡಿ ಬಹು ವರ್ಷಗಳ ಹಿಂದೆ ನಮ್ಮ ದೇಶ ಕಲೆ, ಸಂಸ್ಕೃತಿ ಮತ್ತು ವೈಜ್ಞಾನಿಕ ಕ್ಷೇತ್ರದಲ್ಲಿ ವಿಶ್ವಗುರು ಸ್ಥಾನ ಪಡೆದಿತ್ತು. ಕಾಲಾನಂತರದಲ್ಲಿ ಆದ ವೈಪರಿತ್ಯದ ಮೂಲಕ ನಾವು ಹಿನ್ನೆಡೆ ಅನುಭವಿಸಿ ಪ್ರಸ್ತುತ  ಉತ್ತಮ ನಾಯಕತ್ವದಲ್ಲಿ ಮತ್ತೆ ಭಾರತ ವಿಶ್ವಗುರು  ಆಗುತ್ತಿರುವದನ್ನು ಹೆಮ್ಮೆ ಪಡಬೇಕು ಎಂದರು. ಪ್ರತಿಯೊಬ್ಬರೂ  ಮಾಡುವ ಕೆಲಸದಲ್ಲಿ ತನ್ಮಯತೆ, ಆಸಕ್ತಿ ಮತ್ತು ನಾವಿನ್ಯತೆ ರೂಡಿಸಿಕೊಂಡಲ್ಲಿ ಪದ್ಮಶ್ರೀಯಂತಹ ಗೌರವ ತಮ್ಮನ್ನು ಹುಡುಕಿ ಬರುತ್ತದೆ ಎಂದು ಹೇಳುತ್ತಾ ಶಿಬಿರಾರ್ಥಿಗಳಿಗೆ ಪ್ರೇರಣಾದಾಯಕ ಮಾತುಗಳಿಂದ  ಪ್ರೋತ್ಸಾಹಿಸಿದರು. ಇನ್ನೋರ್ವ ಅತಿಥಿಗಳಾದ ಡಾ. ಮಂಜುನಾಥ  ಸಾಯುಜ್ಯ ಪಡೆಯಲು ಗೀತಾ, ಗೋವಿಂದ  ಗಂಗಾ , ಗಾಯತ್ರಿ, ಗೋವು ಮತ್ತು ಗಾನಯೋಗ  ಆದಂತಹ ಯಕ್ಷಗಾನ ಪ್ರಮುಖ ಪಾತ್ರ ವಹಿಸುತ್ತದೆ. ಇದು ಭಾರತೀಯತೆಯ ಮೂಲ ಕರಿಕಲ್ಪನೆ ಎಂದು ನಮ್ಮ ಕಲಾ ಸಂಸ್ಕೃತಿಯನ್ನು ಕೊಂಡಾಡಿದರು. ತರಬೇತಿಯ ಸಂಪನ್ಮೂಲರಾದ ಶ್ರೀ ಗುರುರಾಜ ಮಾರ್ಪಳ್ಳಿ ಯವರು ಶುಭ ಹಾರೈಸಿದರು. 

Gunavante Srimaya Yakshagana Kala Kendra ಈ ಶಿಬಿರದಲ್ಲಿ  ಮದ್ಯ ಪ್ರದೇಶ, ದೆಹಲಿ, ಉತ್ತರ ಪ್ರದೇಶ, ಪಂಜಾಬ, ಬಿಹಾರ,  ಮಹಾರಾಷ್ಟç ಮೂಲಕ ವಿವಿಧ ರಾಜ್ಯಗಳಿಂದ ಮತ್ತು ಕರ್ನಾಟಕದ ಬೇರೆ ಬೇರೆ ಭಾಗದಿಂದ ಬಂದ ಒಟ್ಟು 22 ವಿದ್ಯಾರ್ಥಿಗಳಿಗೆ  ಯಕ್ಷಗಾನದ ವಿವಿಧ ಅಂಗಗಳ  ಪರಿಚಯ, ಅಭ್ಯಾಸ ಬಣ್ಣಗಾರಿಕೆ ಇತ್ಯಾದಿಗಳ ಪ್ರಾತ್ಯಕ್ಷಿಕೆ ಈ 21 ದಿನಗಳ ಶಿಬಿರದಲ್ಲಿ ಸಂಪನ್ನವಾಯಿತು.

ಅಭಿನಯ, ನೃತ್ಯ, ಹಾಡುಗಾರಿಕೆ, ಯಕ್ಷಗಾನದ ಸಂಪ್ರದಾಯ, ಪ್ರಯೋಗಗಳ ಕುರಿತು ಶಿಬಿರದ ವಿವಿಧ ತಜ್ಞರು ಕಲಾವಿದ್ಯಾರ್ಥಿಗಳಿಗೆ ವಿವರಣೆ ಪ್ರಾತ್ಯಕ್ಷಿಕೆ, ಉಪನ್ಯಾಸಗಳ ಮೂಲಕ ತಿಳುವಳಿಕೆ ನೀಡಿದರು. ಯಕ್ಷಗಾನದ ಆಂಗೀಕ, ವಾಚಿಕ, ಆಹಾರ್ಯ ಸಾತ್ವಿಕಗಳ  ಅಭ್ಯಾಸದ ಮೂಲಕ ತಮ್ಮ ತಮ್ಮ ಕ್ಷೇತ್ರದಲ್ಲಿ ಅದನ್ನು ಅಳವಡಿಸಿ ಕೊಳ್ಳಲು ಈ ಶಿಬಿರ ಅತ್ಯಂತ ಮಹತ್ವದ್ದಾಗಿದೆ. ಪ್ರತಿದಿನ ಯೋಗಾಭ್ಯಾಸ, ಸ್ವರಾಭ್ಯಾಸ, ಯಕ್ಷಗಾನದ ಹುಟ್ಟು ಬೆಳವಣಿಗೆ ಇವೆಲ್ಲದರ ಕುರಿತು ಉಪನ್ಯಾಸ ನಡೆದು ಅದರಲ್ಲಿ  ಅಪಾರ ಕುತೂಹಲದಿಂದ ವಿದ್ಯಾರ್ಥಿಗಳು ಭಾಗವಹಿಸಿದರು.

ದಿನಾಂಕ 21/08/2023 ರಂದು ಯಕ್ಷಗಾನ ವಿಧ್ವಾಂಸ,ಕಲಾವಿದರಾದ ಡಾ. ಎಂ. ಪ್ರಭಾಕರ ಜೋಶಿ , ಮಂಗಳೂರು ಇವರು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಯಕ್ಷಗಾನದ ಹುಟ್ಟು ಬೆಳವಣಿಗೆ ರಂಗ ತಂತ್ರಗಳ ಕುರಿತು ಸುದೀರ್ಘ ಉಪನ್ಯಾಸ   ಬಹಳ ಉಪಯುಕ್ತವಾಗಿತ್ತು. 

ಈ ಶಿಬಿರದ ಮುಖ್ಯ ನಿರ್ದೇಶಕ, ಗುರು ಕೆರೆಮನೆ ಶಿವಾನಂದ ಹೆಗಡೆ ಸಮಾರೋಪ ಸಮಾರಂಭದಲ್ಲಿ ಪ್ರಾಸ್ತಾವಿಕ ಮಾತನಾಡುತ್ತಾ ಶಿಬಿರದ ಮೂಲಕ ಯಕ್ಷಗಾನದ ಕುರಿತು ಹೊರ ರಾಜ್ಯದವರಿಗೆ, ಕಲಾ ವಿದ್ಯಾರ್ಥಿಗಳಿಗೆ ಆಗುವ ಪ್ರಯೋಜನ ವಿವರಿಸಿದರು. 

ಶಿಬಿರದ ಆಯೊಜನೆ ನಿರ್ವಹಣೆ,ನಿರ್ದೇಶನ  ವಹಿಸಿಕೊಂಡ, ಮಂಡಳಿಯ ನಿರ್ದೇಶಕ, ಕಲಾವಿದ ಕೆರೆಮನೆ ಶಿವಾನಂದ ಹೆಗಡೆ ಮತ್ತು ಶ್ರೀ ಕೆರೆಮನೆ ಶ್ರೀಧರ ಹೆಗಡೆ, ಇವರು ಆಧುನಿಕ ರಂಗಭೂಮಿ,  ಮತ್ತು ಯಕ್ಷಗಾನದ  ನಟ ಸಂಪ್ರದಾಯ, ಮುಖಾಭಿನಯ,ಕೊರಿಯೊಗ್ರಪಿ , ನಾಟ್ಯ ಸ್ವರೂಪ,ಆಂಗಿಕ ಚಲನೆ ಇತ್ಯಾದಿಗಳನ್ನ ಶಿಬಿರದುದ್ದಕ್ಕೂ ಆಗಾಗ ಹಲವಾರು ಪ್ರಾತ್ಯಕ್ಷಿಕೆ ಮೂಲಕ ನಡೆಸಿಕೊಟ್ಟರು.

ಯಕ್ಷಗಾನ ಸಂಗೀತದ ಸ್ವರೂಪ, ಹಾಡುಗಾರಿಕೆಯ ಅನನ್ಯತೆ ಇತ್ಯಾದಿಗಳ  ಅಭ್ಯಾಸವನ್ನ ಮುಖ್ಯವಾಗಿ ಶ್ರೀ ಗುರುರಾಜ ಮಾರ್ಪಳ್ಳಿ,ನಿರ್ವಹಿಸಿದರೆ  ಶ್ರೀ ಅನಂತ ಹೆಗಡೆ ದಂತಳಿಗೆ ಯಕ್ಷಗಾನದ ಹಾಡುಗಾರಿಕೆಯ ಮೂಲಪಾಠ ,ತಾಳಕ್ರಮದೊಂದಿಗೆ ಅಭ್ಯಾಸ ಮಾಡಿಸಿದರು. ನ್ರುತ್ಯ ಸಹಾಯಕರಾಗಿ ಮಂಡಳಿಯ ಕಲಾವಿದ ಚಂದ್ರಶೇಖರ ಉಪ್ಪಾರ, ನಿರ್ವಹಿಸಿದರು.ಶ್ರೀಧರ ಮರಾಠಿ, ಮದ್ದಲೆಯಲ್ಲಿ, ಮುಖವರ್ಣಿಕೆಯಲ್ಲಿ ಈಶ್ವರ ಭಟ್ಟ ಅಂಸಳ್ಳಿ, ಮಹಾವೀರ ಜೈನ್, ಮೂರೂರು ನರಸಿಂಹ ಹೆಗಡೆ, ಚಂಡೆಯಲ್ಲಿ ರಾಮನ್ ಹೆಗಡೆ, ಮುಂತಾದವರು ಶಿಬಿರದ ವಿವಿಧ ಹಂತದಲ್ಲಿ ಸಹಕಾರ ನೀಡಿದರು.

ಇವರುಗಳಿಗೆ ಶ್ರೀ ಶಿವಾನಂದ ಹೆಗಡೆಯವರು ಶಾಲು ಹೊದೆಸಿ ಗೌರವಿಸಿದರು. ವಿವಿಧ ರಾಜ್ಯಗಳಿಂದ ಬಂದ ಶಿಬಿರಾರ್ಥಿಗಳಿಗೆ ಸ್ಕಾಲರ್ ಶಿಪ್ ಮತ್ತು ಪ್ರಮಾಣ ಪತ್ರವನ್ನ ವೇದಿಕೆಯ ಗಣ್ಯರ ಮೂಲಕ ವಿತರಿಸಲಾಯಿತು. 

ಈ ಶಿಬಿರಕ್ಕೆ ಮುಖ್ಯವಾಗಿ ಪಣಂಬೂರು ವಾಸುದೇವ ಐತಾಳ, ಶ್ರೀವತ್ಸ ಕುಮಾರ ಅಮೇರಿಕ, ಶ್ರೀ ಭಾಸ್ಕರ ಮೈಸೂರು, ಶ್ರೀ ಹರಿನ್ ಶಿವರಾಮ ಹಟ್ಟಿಯಂಗಡಿ ಮತ್ತು ಶ್ರೀಮತಿ ಜೋತಿ ಹರಿನ್ ಇವರ ನೀಡಿದ ಆರ್ಥಿಕ ಸಹಾಯವನ್ನು, ಪ್ರೀತಿ ಪ್ರೋತ್ಸಾಹವನ್ನು ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆಯವರು ನೆನೆದು ಆತ್ಮೀಯವಾಗಿ ಕೃತಜ್ಞತೆ  ಸಲ್ಲಿಸಿದರು. 

ಶ್ರೀ. ಎಲ್. ಎಂ. ಹೆಗಡೆ ಕೆರೆಮನೆ   ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಶ್ರೀ ಅನಂತ ಹೆಗಡೆ ದಂತಳಿಕೆ ಗಣಪತಿ ಪೂಜೆಯೊಂದಿಗೆ ಕಾರ್ಯಕ್ರಮಕ್ಕೆ  ಶುಭ ಚಾಲನೆ ನೀಡಿದರು. ಸಮಾರೋಪದ ನಂತರ ಶಿಬಿರಾರ್ಥಿಗಳಿಂದ ಯಕ್ಷಗಾನದ ತಾಳ, ನೃತ್ಯ, ಹಾಡುಗಾರಿಕೆಯ ಪ್ರಾತ್ಯಕ್ಷಿಕೆ ಮತ್ತು ಯಕ್ಷಗಾನದ ಕಲಿಕೆಯನ್ನು ಬಳಸಿಕೊಂಡು ಚಿಕ್ಕ ಚಿಕ್ಕ ನಾಲ್ಕು ರೂಪಕಗಳು ಈ ಸಂದರ್ಭದಲ್ಲಿ ಪ್ರದರ್ಶಿಸಿದ್ದು ಪ್ರೇಕ್ಷಕರ ಮನ  ಸೂರೆಗೊಂಡಿತು. 

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ “ರಾಜ್ಯೋತ್ಸವ ಕವಿಗೋಷ್ಠಿ”

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ...

Mohare Hanumantharaya Award ಪ್ರಶಸ್ತಿ ಪುರಸ್ಕೃತ ಪತ್ರಕರ್ತ, ‘ಕ್ರಾಂತಿ ದೀಪ ‘ಮಂಜುನಾಥ್ ಅವರಿಗೆ ಸನ್ಮಾನ

Mohare Hanumantharaya Award ಪತ್ರಿಕೋದ್ಯಮದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಮೊಹರೆ ಹಣಮಂತರಾಯ...

MESCOM ನವೆಂಬರ್ 23 .ಹೊಳಲೂರು ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಹೊಳಲೂರು ಗ್ರಾಮದ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ...

Rotary Club Shimoga ಪ್ರೌಢಾವಸ್ಥೆಯು ದೇಹದಲ್ಲಿ ಅನೇಕ ಬದಲಾವಣೆ ತರುತ್ತದೆ.ಅದನ್ನ ಗಮನಿಸಬೇಕು- ಡಾ.ಮೋಕ್ಷಾ

Rotary Club Shimoga ರೋಟರಿ ಸಂಸ್ಥೆಯು ನಿಸ್ವಾರ್ಥವಾಗಿ ವಿಶ್ವದ ಎಲ್ಲ ಭಾಗಗಳಲ್ಲಿ...