Chandrayana -3, 23 ಆಗಸ್ಟ್ 2023ರಂದು ಚಂದ್ರಯಾನ -3 ನೌಕೆಯ ವಿಕ್ರಮ್ ಲ್ಯಾಂಡರ್ ವಿಕ್ರಮ ಚಂದ್ರನ ಅಂಗಳಕ್ಕೆ ತಲುಪಿದೆ. ಬಾಹ್ಯಕಾಶ ವಿಜ್ಞಾನ ಮತ್ತು ಅಂತರಿಕ್ಷಯಾನದಲ್ಲಿ ತನ್ನ ಸಾಧನೆ ಮೆರೆಯುವ ಮೂಲಕ ವಿಶ್ವದ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಭಾರತವು ದೈತ್ಯ ಶಕ್ತಿಯಾಗಿ ಹೊರಹೊಮ್ಮಿದೆ.
ಮಂಗಳಯಾನ -1 ಒಂದೇ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದು, ಚಂದ್ರಯಾನ -1 ಮತ್ತು ಚಂದ್ರಯಾನ -2 (ಭಾಗಶಃ ಯಶಸ್ಸು) ಚಂದ್ರಯಾನ – 3 ಪೂರ್ಣ ಯಶಸ್ಸು ಕಂಡಿದೆ. ನೂರು ಉಪಗ್ರಹಗಳನ್ನು ಏಕಕಾಲಕ್ಕೆ ಉಡಾವಣೆ ಮಾಡಿ ಕಕ್ಷೆಗೆ ಸೇರಿಸಿದ್ದು , ಅಂತರಿಕ್ಷದಲ್ಲಿ ಶತ್ರು ಉಪಗ್ರಹಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಪಡೆದಿರುವುದು ವಿಶೇಷ.
ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಇಳಿಸಿದ ಪ್ರಥಮ ರಾಷ್ಟ್ರ ಭಾರತ ಎನ್ನುವುದಕ್ಕೆ ಚಂದ್ರಯಾನ -3 ಸಾಕ್ಷಿಯಾಗಿದೆ. ಈ ಮೂಲಕ ಭಾರತ ಚಂದ್ರನ ಮೇಲೆ ಕಾಲಿಟ್ಟ ವಿಶ್ವದ ನಾಲ್ಕನೇ ರಾಷ್ಟ್ರವಾಗಿ ಪ್ರತಿಷ್ಠಿತ ದೇಶಗಳ ಸಾಲಿಗೆ ಸೇರ್ಪಡೆಯಾಗಿದೆ.
ಚಂದ್ರನ ದಕ್ಷಿಣ ಧ್ರುವದ ಪ್ರದೇಶದಲ್ಲಿ ಜಗತ್ತಿನ ಯಾವುದೇ ರಾಷ್ಟ್ರದ ಬಾಹ್ಯಾಕಾಶ ನೌಕೆಗಳು ಅಲ್ಲಿ ಸಂಶೋಧನೆಯನ್ನು ಕೈಗೊಂಡಿಲ್ಲ. ಹಾಗಾಗಿ ಭಾರತದ ಕಿರೀಟಕ್ಕೆ ಇದು ಹೆಮ್ಮೆಯ ಗರಿಯಾಗಿದೆ.
Chandrayana -3, ಇದು ಸುವರ್ಣ ಯುಗದ ಆರಂಭ. ನಮ್ಮ ಉತ್ಸಾಹ ಮತ್ತಷ್ಟು ಹೆಚ್ಚಿದೆ. ಚಂದ್ರಯಾನ -3 ಸುಲಭದ ಕಾರ್ಯವಾಗಿರಲಿಲ್ಲ. ನಾವು ನೋವು, ಸಂಕಟಗಳನ್ನು ಅನುಭವಿಸಿದ್ದೇವೆ. ಈಗ ಯಶಸ್ಸಿನ ಪಥದಲ್ಲಿ ಸಾಗಿದ್ದೇವೆ ಎಂದು ಇಸ್ರೋ ಅಧ್ಯಕ್ಷರಾದ ಎಸ್. ಸೋಮನಾಥ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಇಂದಿನ ಚಾರಿತ್ರಿಕ ದಿನವನ್ನು ಎಂದಿಗೂ ಮರೆಯಲಾಗದು. ಭಾರತವು ಚಂದಿರನ ದಕ್ಷಿಣ ಧ್ರುವಕ್ಕೆ ಬಾಹ್ಯಾಕಾಶ ನೌಕೆ ಕಳುಹಿಸಿದ ವಿಶ್ವದ ಮೊದಲ ರಾಷ್ಟ್ರವಾಗಿದೆ. ಬೇರೆ ಯಾವುದೇ ರಾಷ್ಟ್ರಕ್ಕೂ ಇದುವರೆಗೆ ಈ ಸಾಧನೆ ಮಾಡಲಾಗಿಲ್ಲವೆಂದು ಪ್ರಧಾನಿ ನರೇಂದ್ರ ಮೋದಿಯವರು ಅಭಿನಂದನೆ ಸಲ್ಲಿಸಿದ್ದಾರೆ.
ನಾವು ದೇಶವನ್ನು ಭಾರತಮಾತೆ ಎಂದೂ ಚಂದ್ರನನ್ನು ಚಂದಮಾಮ ಎಂದು ಕರೆಯುತ್ತೇವೆ . ಇನ್ನು ಮೇಲೆ ಮಕ್ಕಳು ಕಲಿಯಬೇಕಾಗಿರುವ ಪದ್ಯಗಳು ಬದಲಾಗಲಿವೆ. ನಾವೆಲ್ಲ ಚಂದ್ರ ಬಹು ದೂರ ಇದ್ದಾನೆ. ( ಚಂದಮಾಮ ಬಡೆ ದೂರ್ ಕೆ ಹೈ) ಅಂತಿದ್ವಿ. ಈಗಿನ ಮಕ್ಕಳು ಚಂದ್ರಮಾಮಾನತ್ತ ಪ್ರವಾಸಕ್ಕೆ ಹೋಗುತ್ತೇವೆ. ( ಚಂದಮಾಮ ಏಕ್ ಟೂರ್ ಕೆ ಹೈ ) ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.
ಚಂದ್ರಯಾನ -3 ಯಶಸ್ವಿಯಾದ ಹಿನ್ನೆಲೆಯಲ್ಲಿ ಕೋಟ್ಯಂತರ ಹೃದಯಗಳು isroಗೆ ಧನ್ಯವಾದ ಸಲ್ಲಿಸಿದ್ದಾರೆ.
ಇಂದಿನಿಂದ ಚಂದ್ರನ ಮೇಲ್ಮೈಯಲ್ಲಿ ಟೈರ್ಸ್ ಆಫ್ ಪ್ರಗ್ಯಾನ್ ಎಂಬ ಚಿತ್ರ ಶಾಶ್ವತವಾಗಿ ಅಚ್ಚೊತ್ತಲಿದೆ..ರೋವರ್ ಈ ಮುದ್ರೆಯನ್ನು ಹೊಂದಿದೆ. ಚಂದ್ರನಲ್ಲಿ ಗಾಳಿ ಇಲ್ಲದ ಕಾರಣ ಈ ಗುರುತುಗಳು ಶಾಶ್ವತವಾಗಿ ಉಳಿಯಲಿದೆ.
ಪ್ರಗ್ಯಾನ್ ರೋವರ್ ಯಶಸ್ವಿ ನಿರ್ವಹಣೆ ಬಗ್ಗೆ ಇಸ್ರೊ ಸಂಸ್ಥೆಗೆ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರು ಅಭಿನಂದನೆ ಸಲ್ಲಿಸಿದ್ದಾರೆ .
ಭಾರತೀಯ ಬಾಹ್ಯಾಕಾಶ ವಿಜ್ಞಾನಿಗಳ ತಂಡ ಮತ್ತು ಇಸ್ರೋ ಸಂಸ್ಥೆಯ ಒಟ್ಟು ಪ್ರಯತ್ನಕ್ಕೆ ಕೆ ಲೈವ್ ನ್ಯೂಸ್ ಅಭಿನಂದನೆ ಸಲ್ಲಿಸುತ್ತದೆ.