Uttaradi Math ಯಜ್ಞ,ಯಾಗಗಳು, ತಪಸ್ಸು, ಧ್ಯಾನ ಎಲ್ಲವೂ ನಮಗಾಗಿಯೇ ಹೊರತು ದೇವರಿಗೆ ಇದರಿಂದ ಏನೂ ಆಗಬೇಕಿಲ್ಲ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.
ಸೋಮವಾರ ಸಂಜೆ ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆಯುತ್ತಿರುವ ಶ್ರೀ ಸತ್ಯಧರ್ಮ ತೀರ್ಥ ಶ್ರೀಪಾದಂಗಳವರ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಅನುಗ್ರಹ ಸಂದೇಶ ನೀಡಿದರು.
ಸತ್ಕಾರ್ಯಗಳು ಮಾಡುವುದರಿಂದ ನಮ್ಮ ಉದ್ಧಾರ ಆಗುತ್ತದೆಯೇ ಹೊರತೂ ನಾವು ಕೊಡುವ ಆಹುತಿಯಿಂದಲೇ ದೇವರು ಬದುಕಬೇಕಾಗಿಲ್ಲ. ದೇವರು ನಮಗೆ ಈ ದೇಹ, ಬದುಕಲು ಬೇಕಾದ ವ್ಯವಸ್ಥೆ ಮಾಡಿಕೊಟ್ಟ ಉಪಕಾರಕ್ಕೆ ಅವನ ಸ್ಮರಣೆ, ಪೂಜೆ ಮಾಡುವುದು ನಮ್ಮ ಕರ್ತವ್ಯ ಎಂದರು.
ಮತಾ0ತರದ ವಿರುದ್ಧ ಆಕ್ರೋಶ :
ಧರ್ಮವೇ ಈ ರಾಷ್ಟçದ ಜೀವಾಳ. ಹೀಗಾಗಿ ಈ ಧರ್ಮವನ್ನು ನಾಶಮಾಡಬೇಕೆಂದು ಅನೇಕ ರೀತಿಯ ಪ್ರಯತ್ನ ನಡೆಯುತ್ತಿದೆ. ನಿಮಗೆ ವಿದ್ಯೆ, ಆರೋಗ್ಯ ಕೊಡುತ್ತೇವೆ ಎಂದು ಸುಳ್ಳು ಹೇಳಿ ನಮ್ಮ ಸಂಸ್ಕೃತಿಯ ಬಗ್ಗೆ ದಾಳಿಗಳಾಗಿವೆ. ಕೊನೆಗೆ ಹಣದ ಆಸೆಯನ್ನೂ ತೋರಿಸುವ ಪ್ರಯತ್ನಗಳು ನಡೆದಿವೆ. ಆದರೆ ನಮ್ಮ ಸನಾತನ ಸಂಸ್ಕೃತಿಯ ಬೇರುಗಳು ಗಟ್ಟಿಯಾಗಿ ಇರುವ ಕಾರಣ ನಮ್ಮತನ ಇಂದಿಗೂ ಉಳಿದಿದೆ ಎಂದರು.
ಶ್ರೀಗಳಿದ್ದಲ್ಲಿ ವಿಜಯ :
ಪ್ರವಚನ ನೀಡಿದ ಪಂಡಿತ ರಂಗೇಶಾಚಾರ್ಯ, ಯೋಗೇಶ್ವರನಾದ ರಾಮದೇವರು ಮತ್ತು ಸುಧಾಧರರಾದ ಸ್ವಾಮಿಗಳು ಇರುವಾಗ ಅಲ್ಲಿ ನಿತ್ಯವೂ ವಿಜಯ ಇರಲಿದೆ. ದೇವರು ಮತ್ತು ಸ್ವಾಮಿಗಳು ಇರುವ ಜಾಗ ಅಯೋಧ್ಯೆಗೆ ಸಮಾನವಾದುದು ಎಂದರು.
Uttaradi Math ಈ ವೇಳೆ ಬೆಂಗಳೂರಿನ ಜಯತೀರ್ಥ ವಿದ್ಯಾಪೀಠದ ಕುಲಪತಿಗಳಾದ ಗುತ್ತಲ ರಂಗಾಚಾರ್ಯ, ಪಂಡಿತರಾದ ಲಕ್ಷ್ಮೀನರಸಿಂಹಾಚಾರ್ಯ, ಶ್ರೀಕಾಂತಾಚಾರ್ಯ ಮುಕ್ಕುಂದಿ, ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ಪಂಡಿತರಾದ ನವರತ್ನ ಶ್ರೀನಿವಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ಜಿಲ್ಲಾ ಮಠಾಧಿಕಾರಿ ಬಾಳಗಾರು ಜಯತೀರ್ಥಾಚಾರ್ಯ ಮೊದಲಾದವರಿದ್ದರು.