Kaveri River ತಮಿಳುನಾಡಿಗೆ ಕಾವೇರಿ ನೀರು ಹರಿಸಿದ್ದನ್ನು ವಿರೋಧಿಸಿ ಕನ್ನಡಸೇನೆ ಮುಖಂಡರುಗಳು ಚಿಕ್ಕಮಗಳೂರು ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಕನ್ನಡಸೇನೆಯ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ರಾಜ್ಯದಲ್ಲಿ ಮಳೆ, ಬೆಳೆ ಹಾಗೂ ಸರಿ ಯಾಗಿ ಕುಡಿಯುವ ನೀರಿಲ್ಲದೇ ರೈತರು ಹಾಗೂ ಜನಸಾಮಾನ್ಯರು ಕಂಗಾಲಾಗಿರುವ ಸಮಯದಲ್ಲಿ ಕಾವೇರಿ ನೀರನ್ನು ನೆರೆ ರಾಜ್ಯಕ್ಕೆ ಹರಿಬಿಟ್ಟು ರಾಜ್ಯದ ಜನತೆಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ದೂರಿದರು.
ಇದೀಗ ರಾಜ್ಯದಲ್ಲಿ ಮಳೆ ಕ್ಷೀಣಿಸಿದ ಹಿನ್ನೆಲೆಯಲ್ಲಿ ಬೆಳೆ ಬೆಳೆಯಲು ಹಾಗೂ ಕುಡಿಯಲು ನೀರಿಲ್ಲ. ಈ ಮಧ್ಯೆ ರಾಜ್ಯದ ಮುಖ್ಯಮಂತ್ರಿಗಳು ಬೇರೆಯವರ ಹಿತ ಪಡೆಯುವ ಸಲುವಾಗಿ ನೀರನ್ನು ಬಿಟ್ಟಿರುವುದು ಸರಿಯಲ್ಲ. ಇದೇ ರೀತಿ ರಾಜ್ಯಸರ್ಕಾರ ಮುಂದುವರೆದರೆ ರಾಜ್ಯದ ಜನತೆಗೆ ವಿರೋಧಕ್ಕೆ ಗುರಿಯಾಗಬೇಕಾಗುತ್ತದೆ ಎಂದರು.
ಕರ್ನಾಟದ ಮಂಡ್ಯ ಜಿಲ್ಲೆಯಲ್ಲಿ ಕಾವೇರಿ ನೀರನ್ನು ಅವಲಂಬಿಸಿ ರೈತರು ಬೆಳೆ ಬೆಳೆಯುತ್ತಿದ್ದಾರೆ. ಆದರೆ ರಾಜ್ಯಸರ್ಕಾರ ಬರಗಾಲದ ಸಮಯದಲ್ಲಿ ತಮಿಳುನಾಡಿಗೆ ನೀರನ್ನು ಹರಿಬಿಟ್ಟಿರುವುದು ಖಂಡನೀಯ. ಇದನ್ನು ಕೂಡಲೇ ತಡೆಹಿಡಿಯದಿದ್ದಲ್ಲಿ ರಾಜ್ಯಾದ್ಯಂತ ಕನ್ನಡಿಗರು ಧಂಗೆ ಏಳಲಿದ್ದಾರೆ ಎಂದು ಎಚ್ಚರಿಸಿದರು.
ಕನ್ನಡಸೇನೆ ಜಿಲ್ಲಾ ವಕ್ತಾರ ಕಳವಾಸೆ ರವಿ ಮಾತನಾಡಿ ಮೊದಲೇ ರೈತರು ಸಾಲಬಾಧೆಯಿಂದ ಸಿಲುಕಿಕೊಂ ಡು ವಿವಿಧ ಸಂಕಷ್ಟ ಎದುರಿಸಿ ಆತ್ಮಹತ್ಯೆ ಶರಣಾಗುತ್ತಿದ್ದು ಈ ನಡುವೆ ನೀರು ಹರಿಬಿಟ್ಟು ಬೆಳೆಗೆ ಸೂಕ್ತ ವ್ಯವಸ್ಥೆ ಕಲ್ಪಿಸದಿರುವುದು ಇನ್ನಷ್ಟು ಆತಂಕಕ್ಕೆ ದೂಡಿದೆ ಎಂದು ಆರೋಪಿಸಿದರು.
ಈ ಬಾರಿ ರಾಜ್ಯದಲ್ಲಿ ಕೇವಲ 50 ಟಿಎಂಸಿ ನೀರು ಮಾತ್ರ ಶೇಖರಣೆಯಾಗಿದೆ. ಇದನ್ನು ಅರಿಯದ ರಾಜ್ಯ ಸರ್ಕಾರ ಯಾವುದೇ ಆಂತರಿಕ ಹಿತಾಸಕ್ತಿಗಾಗಿ ನೆರೆ ರಾಜ್ಯಕ್ಕೆ ನೀರೋದಗಿಸಿರುವುದು ಸೂಕ್ತವಲ್ಲ. ಕೂಡಲೇ ಇದನ್ನು ತಡೆಹಿಡಿದು ರಾಜ್ಯದ ಜನತೆಗೆ ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂ ದರು.
ಇದೇ ವೇಳೆ ನೀರನ್ನು ಹರಿಬಿಟ್ಟಿರುವುದನ್ನು ಖಂಡಿಸಿ ಪ್ರತಿಭಟನೆ ನಂತರ ಜಿಲ್ಲಾ ಡಳಿತ ಮೂಲಕ ಕನ್ನಡಸೇನೆ ಮುಖಂಡರುಗಳು ನೀರು ತಡೆಹಿಡಿಯಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
Kaveri River ಈ ಸಂದರ್ಭದಲ್ಲಿ ಸೇನೆಯ ಉಪಾಧ್ಯಕ್ಷರಾದ ಕೋಟೆ ವಿನಯ್, ಶಂಕರೇಗೌಡ, ಸಂಘಟನಾ ಕಾರ್ಯದರ್ಶಿ ಸತೀಶ್, ಕಾರ್ಯದರ್ಶಿ ಅಶೋಕ್, ನಗರ ಉಪಾಧ್ಯಕ್ಷ ಹರೀಶ್, ಆಟೋ ಚಾಲಕರ ಅಧ್ಯಕ್ಷ ಜಯಪ್ರಕಾಶ್, ನಗರ ಅಧ್ಯಕ್ಷ ಸತೀಶ್, ಮುಖಂಡರುಗಳಾದ ಟೋನಿ, ದೇವರಾಜ್, ವಿನಯ್, ಕೃಷ್ಣಮೂರ್ತಿ ಮತ್ತಿರರಿದ್ದರು.