Sri Idagunji Mela Keremane ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ (ರಿ) ಕಳೆದ 36 ವರ್ಷಗಳಿಂದ ನಡೆಸುತ್ತಿರುವ ಶ್ರೀಮಯ ಯಕ್ಷಗಾನ ಕಲಾ ಕೇಂದ್ರ ಕೆರೆಮನೆ ಇದೇ ಬರುವ ಆಗಸ್ಟ್ 23 ಬುಧವಾರದಂದು ಸಂಜೆ 5 ಗಂಟೆಗೆ ಯಕ್ಷಗಾನ ಗುರುಕುಲ ಶಿಕ್ಷಣ ಆರಂಬಿಸಲಿದೆ.
ಇದೇ ಸಂದರ್ಭದಲ್ಲಿ ಅಖಿಲ ಭಾರತ ಕಲಾ ವಿದ್ಯಾರ್ಥಿಗಳಿಗೆ 21 ದಿನಗಳ ಯಕ್ಷಗಾನ ಶಿಬಿರ ನಡೆಯಲಿದೆ. ಸುಮಾರು 25 ಜನ ವಿದ್ಯಾರ್ಥಿಗಳು ಉತ್ತರಪ್ರದೇಶ, ಛತ್ತಿಸಘಡ, ಜಾರ್ಖಂಡ, ದೆಹಲಿ, ರಾಜಸ್ಥಾನ, ಮಹಾರಾಷ್ಟç ಹಾಗೂ ಕರ್ನಾಟಕ ರಾಜ್ಯಗಳ ವಿದ್ಯಾರ್ಥಿಗಳ ಯಕ್ಷಗಾನ ತರಬೇತಿಯ ಸಮಾರೋಪ ಸಮಾರಂಭ ನೇರವೇರಲಿದೆ.
Sri Idagunji Mela Keremane “ಯಕ್ಷಗಾನ ಕಾರ್ಯಾಗಾರ” ಸಮಾರೋಪ ಸಮಾರಂಭದ ದ ಉದ್ಘಾಟಕರಾಗಿ ಡಾ. ನಯನಾ ಎನ್.(ಕೆ.ಎ.ಎಸ್) ಸಹಾಯಕ ಆಯುಕ್ತರು ಭಟ್ಕಳ ಹಾಗೂ ಅಧ್ಯಕ್ಷರಾಗಿ ಶ್ರೀ ಸುರೇಶ ನಾಯ್ಕ ಮಾನ್ಯ ತಾಲೂಕಾ ಪಂಚಾಯತಕಾರ್ಯನಿರ್ವಹಣಾಧಿಕಾರಿಗಳು ಹೊನ್ನಾವರ ಅತಿಥಿಗಳಾಗಿ ಶ್ರೀ ಜಿ.ಎಸ್.ನಾಯ್ಕ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಹೊನ್ನಾವರ ಹಾಗೂ ಶ್ರೀ ಮಹೇಶ ಕಲ್ಯಾಣಪುರ ಕಲಾ ಪೋಷಕರು ಹೊನ್ನಾವರ ಇವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಸಂಯೋಜಕರಾಗಿ ಶ್ರೀ ಗುರುರಾಜ ಮಾರ್ಪಳ್ಳಿ ಭಾಗವಹಿಸಲಿದ್ದಾರೆ ಎಂದು ಮಂಡಳಿಯ ನಿರ್ದೇಶಕರು ಆದ ಕೆರೆಮನೆ ಶಿವಾನಂದ ಹೆಗಡೆಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.