Saturday, December 6, 2025
Saturday, December 6, 2025

Uttaradi Mutt ನಿಷಿದ್ಧ ಕರ್ಮಗಳನ್ನು ಮಾಡಿದರೆ ಪಾಪ ಪ್ರಾಪ್ತಿ- ಶ್ರೀಸತ್ಯಾತ್ಮ ತೀರ್ಥರು

Date:

Uttaradi Mutt ಏನೇ ಅಪರಾಧ ಎಸಗಿದ್ದರೂ ದಯೆ ತೋರುವ ಸ್ವಭಾವದವ ಇರುವವರು ಸಜ್ಜನರು ಎಂದು ತಿಳಿದುಕೊಂಡಂತೆ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.

ಭಾನುವಾರ ಸಂಜೆ ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆಯುತ್ತಿರುವ ಶ್ರೀ ಸತ್ಯಧರ್ಮತೀರ್ಥ ಶ್ರೀಪಾದಂಗಳವರ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಅನುಗ್ರಹ ಸಂದೇಶ ನೀಡಿದರು.

ದಯೆ, ವಾತ್ಸಲ್ಯ, ಪ್ರೀತಿ ಇದು ಸಜ್ಜನರು, ಸಾಧುಗಳು ಮತ್ತು ಸಂತರ ಸಾಮಾನ್ಯವಾದ ಗುಣಗಳು. ವಿಹಿತ ಕರ್ಮಗಳನ್ನು ಮಾಡಬೇಕೇ ಹೊರತು ನಿಷಿದ್ಧವಾದ ಕರ್ಮಗಳನ್ನು ಯಾರೂ ಮಾಡಬಾರದು. ನಿಷಿದ್ಧ ಕರ್ಮಗಳಿಂದ ಪಾಪ ಸಾಧನೆಯಾಗುತ್ತದೆ ಎಂದರು.

ತಪಸ್ಸನ್ನು ಕಾಪಾಡಿಕೊಳ್ಳಿ :
ಪ್ರವಚನ ನೀಡಿದ ಕಡೂರು ಮಧುಸೂದನಾಚಾರ್ಯ, ಮನುಷ್ಯ ತನ್ನ ತಪಸ್ಸನ್ನು ಕಾಪಾಡಿಕೊಳ್ಳುವುದೇ ಬಹಳ ಕಷ್ಟ. ಹೀಗಾಗಿ ಇಂದ್ರಿಯಗಳ ಮೇಲೆ ನಿಯಂತ್ರಣ ಇರಬೇಕು. ಒಂದೇ ಒಂದು ಕೆಟ್ಟ ಕೆಲಸದಿಂದ ಇಡೀ ಜೀವನದ ತಪಸ್ಸು ನಾಶವಾಗಿಬಿಡುತ್ತದೆ ಎಂದರು.

ಸ್ತ್ರೀ ಸಂಗದಿಂದ ಉಂಟಾದಂತಹ ಪಾಪವನ್ನು ಕಳೆದುಕೊಳ್ಳಬೇಕಾದರೆ ಮುಮುಕ್ಷಗಳಾದವರು ಮೊದಲು ಸ್ನೇಹ ರೂಪವಾದ ಸಂಘವನ್ನು ಮೊದಲು ಬಿಡಬೇಕು. ಒಂದು ವೇಳೆ ಸಂಘ ಮಾಡುವುದಾದರೆ ಭಗವಂತನ ಸಂಘ ಮಾಡಬೇಕು. ಒಬ್ಬನೇ ತಪಸ್ಸು ಮಾಡಬೇಕು. ವಿಷಯಗಳ ಆಸಕ್ತಿಯನ್ನು ಬಿಡಬೇಕು ಎಂದರು.

Uttaradi Mutt ಇದೇ ಸಂದರ್ಭದಲ್ಲಿ ಮಥುರಾದಿಂದ ಶ್ರೀಪಾದಂಗಳವರಿಗೆ ಶ್ರೀಕೃಷ್ಣ ಪರಮಾತ್ಮನ ಶೇಷವಸ್ತ್ರ ಹಾಗೂ ಪ್ರಸಾದವನ್ನು ಸಮರ್ಪಿಸಲಾಯಿತು.

ಪೂಜಾ ಕಾಲದಲ್ಲಿ ಪ್ರವಚನ ಮಾಡಿದ್ದ ಅನಂತಾಚಾರ್ಯ ಅಕಮಂಜಿ ಅವರನ್ನು ಗೌರವಿಸಲಾಯಿತು.
ಈ ವೇಳೆ ಬೆಂಗಳೂರಿನ ಜಯತೀರ್ಥ ವಿದ್ಯಾಪೀಠದ ಕುಲಪತಿಗಳಾದ ಗುತ್ತಲ ರಂಗಾಚಾರ್ಯ, ಪಂಡಿತರಾದ ಲಕ್ಷ್ಮೀನರಸಿಂಹಾಚಾರ್ಯ, ಶ್ರೀಕಾಂತಾಚಾರ್ಯ ಮುಕ್ಕುಂದಿ, ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ಪಂಡಿತರಾದ ನವರತ್ನ ಶ್ರೀನಿವಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ಜಿಲ್ಲಾ ಮಠಾಧಿಕಾರಿ ಬಾಳಗಾರು ಜಯತೀರ್ಥಾಚಾರ್ಯ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...