Naga Panchami Festival ವರ್ಷ ಋತುವಿನ ಆರಂಭದ ಶ್ರಾವಣ ಮಾಸದಿಂದ ಹಬ್ಬಗಳ ಸಾಲು ಪ್ರಾರಂಭವಾಗುತ್ತದೆ.
ಶ್ರಾವಣಮಾಸ ಬರುವುದೇ ರೈಲಿನಂತೆ.ಅದರ
ಹಿಂದಿನ ಬೋಗಿಗಳೇ ಸಾಲು ಸಾಲು ಹಬ್ಬಗಳು.
ಶ್ರಾವಣ ಮಾಸದ ಶುಕ್ಲಪಕ್ಷದ ಐದನೇ ದಿನ ಬರುವ
ಪಂಚಮಿಯನ್ನು ನಾಗರಪಂಚಮಿ ಹಬ್ಬವನ್ನಾಗಿ
ಆಚರಿಸಲಾಗುತ್ತದೆ.
ನಾಗರಪಂಚಮಿಯ ನಂತರ ರಕ್ಷಾಬಂಧನ,ಕೃಷ್ಣ
ಜನ್ಮಾಷ್ಟಮಿ,ಗಣೇಶಚತುರ್ಥಿ,ದಸರಾ,ದೀಪಾವಳಿ
ಹೀಗೆ ಹಬ್ಬಗಳ ಸಾಲು ಆರಂಭವಾಗುತ್ತದೆ.
ಕರ್ನಾಟಕದಲ್ಲಿ ನಾಗರಪಂಚಮಿಗೆ ಬಹಳ ಮಹತ್ವದ ಸ್ಥಾನವಿದೆ.
ಈ ಹಬ್ಬ ಬಂತೆಂದರೆ ಹೆಣ್ಣುಮಕ್ಕಳುಗಳಿಗೆ
Naga Panchami Festival ಖುಷಿಯೋ ಖುಷಿ.ಮದುವೆಯಾದ ಹೆಣ್ಣುಮಕ್ಕಳು ತವರುಮನೆಗೆ ಹೋಗಿ ಮನೆಯವರೆಲ್ಲರ ಜೊತೆ
ಕೂಡಿಕೊಂಡು ಹಬ್ಬವನ್ನು ಆಚರಿಸುವುದು ರೂಢಿ
ಯಲ್ಲಿದೆ.ಮದುವೆಯಾಗದ ಹೆಣ್ಣುಮಕ್ಕಳು ತಮಗೆ
ಉತ್ತಮ ಜೀವನ ಸಂಗಾತಿ ಸಿಗಲಿ ಎಂದು ನಾಗದೇವನನ್ನು ಭಕ್ತಿಯಿಂದ ಪ್ರಾರ್ಥನೆಮಾಡಿ ಪೂಜೆ ಸಲ್ಲಿಸುತ್ತಾರೆ.ಮನೆಯಲ್ಲಿರುವ ಹೆಂಗಳೆಯರೆಲ್ಲ ಸೇರಿಕೊಂಡು ಸಿಹಿತಿನಿಸುಗಳನ್ನು
ತಯಾರಿಸುತ್ತಾರೆ.ಈದಿನ ಚಂದನ ಅಥವಾ ಅರಿಶಿಣದಿಂದ ಮಣೆಯಮೇಲೆ ನಾಗದೇವರ ಆಕೃತಿ ಬರೆದು ಪೂಜೆಮಾಡುವುದು ರೂಢಿಯಲ್ಲಿದೆ. ನಾಗಪ್ಪನನ್ನು ಭಕ್ತಿಯಿ ಪೂಜಿಸಿ ಸಿಹಿತಿಂಡಿಗಳನ್ನು ನೈವೇದ್ಯಮಾಡಿ ಎಲ್ಲರಿಗೂ ಒಳ್ಳೆಯದಾಗಲಿ ಎಂತ ಪ್ರಾರ್ಥಿಸುತ್ತಾರೆ.
ಮನೆಯಲ್ಲಿ ಮಾಡಿದ ಹಬ್ಬದ ಅಡುಗೆಯನ್ನು
ಎಲ್ಲರ ಜೊತೆ ಉಂಡು ಸಂಭ್ರಮ ಪಡುತ್ತಾರೆ.
ಮದುವೆಯಾದ ಹೆಣ್ಣುಮಕ್ಕಳು ತನ್ನ ತೌರುಮನೆಯಲ್ಲಿ ಎಲ್ಲಾಕಾಲದಲ್ಲೂ ಸಂತೋಷ
ನಲಿದಾಡುತ್ತಿರಲಿಮತ್ತುತನ್ನತೌರುಮನೆಯವರೆಲ್ಲರ ಆಯುರಾರೋಗ್ಯ,ಸುಖ ನೆಮ್ಮದಿಯು ಯಾವ ಕಾಲಕ್ಕೂ ಸಮೃದ್ಧವಾಗಿರಲಿ ಎಂದು ಬಯಸಿ ಹೃದಯಪೂರ್ವಕವಾಗಿ ನಾಗದೇವನಲ್ಲಿ ಪ್ರಾರ್ಥಿಸುತ್ತಾರೆ.
ಇನ್ನೊಂದು ಮಹತ್ವದ ಸಂಗತಿಯೆಂದರೆ ನಾಗದೇವರು(ಶೇಷದೇವರು)ಇಡೀಬ್ರಹ್ಮಾಂಡವನ್ನು ತನ್ನ ಹೆಡೆ(ತಲೆ)ಯ ಮೇಲೆ ಹೊತ್ತುಕೊಂಡು ಎಲ್ಲರನ್ನು ರಕ್ಷಿಸುತ್ತಿರುವರು.
ಹಾಗಾಗಿ ನಾಗರಪಂಚಮಿಯಂದು ಶೇಷದೇವರನ್ನು(ನಾಗದೇವರ)ಶ್ರದ್ಧಾಭಕ್ತಿಗಳಿಂದ ಪೂಜಿಸಿ ನಮ್ಮ ತಪ್ಪುಗಳನ್ನೆಲ್ಲ ಮನ್ನಿಸಿ,ಯಾವುದೇ
ಅಪಾಯಗಳು ಬರದಂತೆ ರಕ್ಷಿಸಿ ಕಾಪಾಡುವಂತೆ ಭಕ್ತಿಯಿಂದ ಪ್ರಾರ್ಥಿಸೋಣ.
ನಾಗದೋಷವಿದ್ದ ದಂಪತಿಗಳು ನಾಗರ ಪ್ರತಿಷ್ಠೆಯನ್ನು ಶಾಸ್ತ್ರೋಕ್ತವಾಗಿ ಮಾಡಿ ದೋಷ
ಪರಿಹಾರಮಾಡಿಕೊಂಡು ನಾಗನ ಅನುಗ್ರಹ
ಪಡೆಯುವುದು ರೂಢಿಯಲ್ಲಿದೆ.ಕಾಳಸರ್ಪ ದೋಷ ಪರಿಹಾರಕ್ಕೆ ಕಾಳಸರ್ಪ ಶಾಂತಿ ಮಾಡುವುದು ರೂಢಿಯಲ್ಲಿದೆ.
ಭತಿಳಿದೋ ಅಥವಾ ತಿಳಿಯದೆಯೋಮಾಡಿದ ಸರ್ಪಹತ್ಯಾದೋಷಪರಿಹಾರಕ್ಕೆಆಶ್ಲೇಷಾಬಲಿಪೂಜೆ
ಯನ್ನುಮಾಡಿದೋಷಪರಿಹಾರಮಾಡಿಕೊಳ್ಳು
ವುದನ್ನುಕಂಡಿದ್ದೇವೆ.
ಪುರಾಣದಕಥೆಗಳಲ್ಲಿಕೇಳಿರುವಂತೆ,ಮಹಾಭಾರತದಲ್ಲಿ ಬರುವ ಶಮೀಕ ಋಷಿಯ ಕಥೆ ನೆನಪಾಗುತ್ತದೆ.ಶಮೀಕಋಷಿಯಮಗಶೃಂಗಿಯಿಂದ ಶಾಪಕ್ಕೀಡಾಗಿ ತಕ್ಷಕನೆಂಬನಾಗನಿಂದ ತನ್ನ ತಂದೆ ಪರೀಕ್ಷಿತರಾಜನು ಮರಣಹೊಂದಿದ್ದರಿಂದ ಜನಮೇಜಯನು ನಾಗವಂಶವನ್ನೇ ನಿರ್ನಾಮ ಮಾಡಲುಸರ್ಪಯಜ್ಞವನ್ನುಕೈಗೊಂಡನು.ಜನಮೇಜಯನ ಮನಸ್ಸನ್ನು ಬದಲಿಸಿ ಆಸ್ತಿಕ ಮುನಿಯು ಸರ್ಪಗಳನ್ನು ನಾಶಪಡಿಸುವ ಯಜ್ಞವನ್ನು ನಿಲ್ಲಿಸುವಂತೆಮಾಡುತ್ತಾನೆ.ಜನಮೇಜಯ ಸರ್ಪ ಯಜ್ಞವನ್ನು ನಿಲ್ಲಿಸಲು ನಿರ್ಧರಿಸಿದ ದಿನ ಶ್ರಾವಣಶುಕ್ಲಪಕ್ಷದಪಂಚಮಿಯಾಗಿರುತ್ತೆ.
ಆದ್ದರಿಂದ ಈ ದಿನವನ್ನು ನಾಗರಪಂಚಮಿ ಎಂದು ಆಚರಿಸಲಾಗುತ್ತಿದೆ ಎಂಬಪ್ರತೀತಿಯೂ ಇದೆ.
ಪುರಾಣದ ಇನ್ನೊಂದು ಕಥೆಯ ಪ್ರಕಾರ ಶ್ರೀಕೃಷ್ಣನು
ಕಾಲಿಯ ಎಂಬ ಸರ್ಪದ ಉಪಟಳದಿಂದ ಜನರನ್ನು ರಕ್ಷಿಸುತ್ತಾನೆ.ಒಂದು ದಿನ ಬಾಲಕೃಷ್ಣನು
ಯಮುನಾ ನದಿ ತೀರದಲ್ಲಿ ಆಟವಾಡುತ್ತಿದ್ದನು.
ಅವನು ಆಟವಾಡುತ್ತಿದ್ದ ಚೆಂಡು ನದಿಯ ದಂಡೆ
ಯಲ್ಲಿದ್ದ ಮರದ ಕಾಂಡಕ್ಕೆ ಸಿಕ್ಕಿ ಹಾಕಿಕೊಳ್ಳುತ್ತೆ.
ಆ ಚೆಂಡನ್ನು ತೆಗೆದುಕೊಳ್ಳಲು ಹೋಗಿ ಕೃಷ್ಣನು
ಕಾಲಿಯ ಎಂಬ ಸರ್ಪದ ಜಾಲದಲ್ಲಿ ಬೀಳುತ್ತಾನೆ.ಆಗ ಕಾಲಿಯ (ಸರ್ಪ) ಕೃಷ್ಣನ ಮೇಲೆ ಆಕ್ರಮಣ ಮಾಡುತ್ತದೆ.
ಕೃಷ್ಣನಿಗೂ ಕಾಲಿಯಾ ಸರ್ಪಕ್ಕೂ ಬಹಳ ಹೋರಾಟವಾಗುತ್ತದೆ.ಸರ್ಪಕ್ಕೆ ಇವನು ಸಾಮಾನ್ಯ ಬಾಲಕನಲ್ಲ,ಇವನು ಶ್ರೀಕೃಷ್ಣನಿರಬೇಕೆಂದು ಆಲೋಚನೆ ಬರುತ್ತದೆ.ಆಗ ಕಾಲಿಯಾ ಕೃಷ್ಣನಿಗೆ ತನ್ನನ್ನು ಕೊಲ್ಲಬಾರದೆಂದು ಬೇಡಿಕೊಂಡಿತು.
ಈ ಮಾತಿಗೆ ಸರ್ಪದ ಮೇಲೆ ಕನಿಕರದಿಂದ ಕೃಷ್ಣನು
ಒಪ್ಪಿ ಜನರಿಗೆ ತೊಂದರೆ ಕೊಡಬೇಡ ಎಂದು ಬುದ್ಧಿವಾದ ಹೇಳಿ ಆ ಸರ್ಪಕ್ಕೆ ಜೀವದಾನ ಕೊಡುತ್ತಾನೆ.ಶ್ರೀಕೃಷ್ಣನು ಕಾಲಿಯಾ ಎಂಬ ದುಷ್ಟ
ಸರ್ಪವನ್ನು ಗೆದ್ದ ದಿನವಾದ್ದರಿಂದ ಈ ದಿನ ನಾಗರಪಂಚಮಿ ಯನ್ನಾಗಿ ಆಚರಿಸಿಕೊಂಡು
ಬರಲಾಗುತ್ತಿದೆ.
ಇಂತಹ ನಾಗರಪಂಚಮಿ ಹಬ್ಬದಂದು ನಾಗದೇವರನ್ನು ಭಕ್ತಿಯಿಂದ ಪೂಜಿಸಿ ಎಲ್ಲರಿಗೂ
ಸುಕ್ಷೇಮವನ್ನು ದಯಪಾಲಿಸುವಂತೆ ಪ್ರಾರ್ಥಿಸೋಣ.
ಲೇ: ಎನ್.ಜಯಭೀಮ ಜೊಯಿಸ್.
ಶಿವಮೊಗ್ಗ