PM Swanidhi Yojana ಪಿಎಂ ಸ್ವನಿಧಿ ಯೋಜನೆ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಬೀದಿ ಬದಿ ವ್ಯಾಪಾರಸ್ಥರಿಗೆ ಯಾವುದೇ ಗ್ಯಾರಂಟಿ ಇಲ್ಲದೆ ಕೇವಲ ಆಧಾರ್ ಕಾರ್ಡ್ ಮತ್ತು ಸ್ಥಳೀಯ ಆಡಳಿತದ ಬೀದಿ ಬದಿ ವ್ಯಾಪಾರಿಯ ಐಡಿ ಕಾರ್ಡ್ ಇದ್ದರೆ ಮೊದಲ ಬಾರಿಗೆ 10 ಸಾವಿರ ರೂ ಸಾಲ ನೀಡಲಾಗುವುದು ಎಂದು ಕೌಶಲ್ಯಾಭಿವೃದ್ಧಿ ಅಧಿಕಾರಿ ಸುರೇಶ್ ಹೇಳಿದರು.
ಕುವೆಂಪು ರಸ್ತೆಯ ಲೀಡ್ ಬ್ಯಾಂಕ್ ಆವರಣದಲ್ಲಿ ಡೇ-ನಲ್ಮ್ ಯೋಜನೆ ಶಿವಮೊಗ್ಗ ಮಹಾನಗರ ಪಾಲಿಕೆ, ಶಿವಮೊಗ್ಗ, ಕೌಶಲ್ಯಾಭಿವೃದ್ಧಿ ಉದ್ದಮಶೀಲತೆ ಹಾಗೂ ಜೀವ ನೋಪಾಯ ಇಲಾಖೆ, ಹಾಗೂ ವಿವಿಧ ಬ್ಯಾಂಕ್ ಗಳು ಹಾಗೂ ಕಾರ್ಮಿಕ ಇಲಾಖೆ ರವರ ಸಹ ಯೋಗದಲ್ಲಿ ಬೀದಿ ಬದಿ ವ್ಯಾಪಾರಿ ಗಳ ವಿಶೇಷ ಸಾಲ ಮೇಳಾ, ಮೇ ಬಿ ಡಿಜಿಟಲ್ ಮತ್ತು ಸ್ವ ನಿಧಿ ಸೇ ಸಮೃದ್ಧಿ ಕಾರ್ಯಕ್ರಮ ಹಾಗೂ 200 ಫಲಾನುಭವಿಗಳಿಗೆ ಸಾಲ ವಿತರಣೆ, ಮತ್ತು ಕಿ ಖ ಕೋಡ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರ್ಕಾರ ಬೀದಿ ಬದಿ ವ್ಯಾಪಾ ರಸ್ಥರಿಗೆ ಸಾಲ ಮಾತ್ರ ಕೊಡುತ್ತಿಲ್ಲ. ಅವರ ಕುಟುಂಬಕ್ಕೆ ಜೀವನ ನಿರ್ವಹಣೆಯನ್ನೂ ಕಲಿಸಿದೆ. ಕಾಯಿದೆ ಮಾಡಿ ಅಸ್ತಿತ್ವ ಕೊಟ್ಟಿದೆ. 12 ತಿಂಗಳು ಕಂತನ್ನು ತಪ್ಪದೆ ಕಟ್ಟಿದಲ್ಲಿ ಮತ್ತೆ ಅವರಿಗೆ 2ನೇ ಬಾರಿಗೆ 20 ಸಾವಿರ, 3ನೇ ಬಾರಿಗೆ 50 ಸಾವಿರ ಮತ್ತು ಅದಕ್ಕಿಂತ ಹೆಚ್ಚಿನ ಆರ್ಥಿಕ ನೆರವನ್ನು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ನೀಡಲಿದೆ. ಮತ್ತು ಕ್ಯೂ ಆರ್ ಕೋಡ್ ಬಳಕೆ ಮಾಡಿದಲ್ಲಿ ಒಂದು ತಿಂಗಳಲ್ಲಿ ಕನಿಷ್ಠ ನೂರು ಚಲಾವಣೆ ಆದಲ್ಲಿ ಅವರಿಗೆ ಕ್ಯಾಶ್ ಬ್ಯಾಕ್ ಸೌಲಭ್ಯ ಕೂಡ ಸಿಗುತ್ತದೆ. ಡಿಫಾಲ್ಟರ್ ಆಗಬಾರದು. ಸಾಲ ಒಂದೇ ಅಲ್ಲ. ಸ್ವನಿಧಿ ಸೆ ಸಮೃದ್ಧಿ ಯೋಜನೆಯಡಿ ಇಡೀ ಕುಟುಂಬದ ಪ್ರೊಫೈ ಲಿಂಗ್ ಮಾಡಿ ಸರ್ಕಾರದ ಹಲವು ಯೋಜನೆಗಳಿಗೆ ಅರ್ಹತೆ ಸಿಗುವಂತೆ ಮಾಡಲಾಗುತ್ತದೆ.
ಅದನ್ನು ವಿವಿಧ ಇಲಾ ಖೆಗಳು ಪಾಲಿಕೆಯೊಂದಿಗೆ ಸೇರಿ ಅರ್ಹ ಅಭ್ಯರ್ಥಿಗಳಿಗೆ ಒದಗಿಸು ತ್ತಾರೆ ಎಂದರು.
PM Swanidhi Yojana ಡಿಜಿಟಲ್ ಪೇಮೆಂಟ್ ಮಾಡು ವುದರಿಂದ ಅನೇಕ ಲಾಭವಿದೆ. ಸಾಲ ಕಟ್ಟಲು ಸುಲ ಭವಾಗುತ್ತದೆ. ವ್ಯಾಪಾರ ವೃದ್ಧಿ ಯಾಗುತ್ತದೆ. ಚಿಲ್ಲರೆ ಅಭಾವ ಹೋಗಲಾಡಿಸಬಹುದು. ಕ್ಯಾಶ್‌ಲೆಸ್ ಆಗುವುದರಿಂದ ಅನೇಕ ಸೌಲಭ್ಯಗಳು ದೊರೆಯುತ್ತವೆ ಎಂದರು.
ಆರೋಗ್ಯ ವಿಮೆ ಸಿಗುತ್ತದೆ. ಶುಚಿತ್ವ ಎಂಬುದು ಬಹಳ ಮುಖ್ಯ.ಗುಣಮಟ್ಟದ ಆಹಾರ ನೀಡಿದಲ್ಲಿ ಗ್ರಾಹಕ ನಿಮ್ಮಲ್ಲಿ ಹೆಚ್ಚಿನ ವ್ಯವಹಾರ ಮಾಡುತ್ತಾರೆ. ಬರೀ ಸಾಲ ನೀಡುವುದಷ್ಟೇ ಸರ್ಕಾರದ ಉದ್ದೇಶವಲ್ಲ. ಬೀದಿ ಬದಿ ವ್ಯಾಪಾರಿಗಳ ಇಡೀ ಕುಟುಂಬದ ಹಿತಾಸಕ್ತಿ ಕಾಪಾ ಡುವುದು ಮತ್ತು ಜೀವನ ನಿರ್ವಹಣೆ ಉತ್ತಮಗೊ ಳಿಸುವುದು ಉದ್ದೇಶವಾಗಿದೆ ಎಂದರು.
ಕಾರ್ಮಿಕ ಇಲಾಖೆಯ ರಘುನಾಥ್ ಅವರು ಕಾರ್ಮಿಕ ಇಲಾಖೆಯ ಸೌಲಭ್ಯಗಳು ಮತ್ತು ಬೀದಿ ಬದಿ ವ್ಯಾಪಾರಿ ಗಳಿಗೆ ಇರುವ ನಿಯಮಗಳ ಬಗ್ಗೆ ತಿಳಿಸಿದರು.
ಕಾರ್ಯಕ್ರಮವನ್ನು ಮಹಾ ನಗರ ಪಾಲಿಕೆ ಮೇಯರ್ ಶಿವ ಕುಮಾರ್ ಉದ್ಘಾಟಿಸಿದರು.
ಶ್ರೀಮತಿ ರೇಖಾ ರಂಗನಾಥ್, ವಿರೋಧ ಪಕ್ಷದ ನಾಯಕರು, ಸುರೇಶ್, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು, ವೆಂಕಟರಾಮುಲು ಸಹಾಯಕ ಪ್ರಭಂದಕರು ಕೆನರಾ ಬ್ಯಾಂಕ್, ಶಿವಮೊಗ್ಗ. ಅಮರನಾಥ್ ವ್ಯವಸ್ಥಾಪಕರು, ಜಿಲ್ಲಾ ಮಾರ್ಗದರ್ಶಿ ಕೆನರಾ ಬ್ಯಾಂಕ್, ಶಿವಮೊಗ್ಗ. ಜಿತೇಂದ್ರ, ಸ್ಟೇಟ್ ಮೀಷನ್ ಮ್ಯಾನೇಜರ್, ಡೇ-ನಲ್ಮ್ ಇಲಾಖೆ,ಬೆಂಗಳೂರು. Àಮನ್ವಯ ಯಶೋಧ, ಅನುಪಮಾ, ಲೋಕೇಶ್ವರಪ್ಪ, ಟಿವಿಸಿ ಸಮಿತಿಯ ಸದಸ್ಯರು, ಧ್ಯಕ್ಷರು ಅಐಈ ಮಹಾನಗರ ಪಾಲಿಕೆ, ಶಿವಮೊಗ್ಗ. ಪ್ರಸೀದ್ ವ್ಯವಸ್ಥಾಪಕರು, ರಿಜಿನಲ್ ಆಫೀಸ್, ಎಸ್.ಬಿ.ಐ ಶಿವಮೊಗ್ಗ. ರಘುನಾಥ್ ಯೋಜನಾ ನಿರ್ದೇಶಕರು, ಕಾರ್ಮಿಕ ಇಲಾಖೆ, ಶಿವಮೊಗ್ಗ. ಹಾಜರಿದ್ದರು.