Siddaramaiah ಹಿಂದುಳಿದ ವರ್ಗಗಳ ಅಭಿವೃದ್ಧಿಯ ಹರಿಕಾರ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ ಜನ್ಮ ದಿನಾಚರಣೆ ಪ್ರಯುಕ್ತ ಮುಖ್ಯಮಂತ್ರಿ
ಸಿದ್ಧರಾಮಯ್ಯ
ಅವರು ವಿಧಾನಸೌಧದ ಪಶ್ಚಿಮ ದ್ವಾರದಲ್ಲಿರುವ ಅರಸು ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಬಳಿಕ ಅರಸು ಅವರ ಕಾರಿನಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣಕ್ಕೆ ತೆರಳಿ ಸದ್ಭಾವನಾ ದಿನಾಚರಣೆಯ ಪ್ರತಿಜ್ಞೆ ಬೋಧಿಸಿದರು.
ಸಚಿವರಾದ
, ಶಿವರಾಜ್ ತಂಗಡಗಿ ಕೆ.ಜೆ.ಜಾರ್ಜ್ ಹಲವು ಗಣ್ಯರು ಈ ವೇಳೆ ಉಪಸ್ಥಿತರಿದ್ದರು
ಅಧಿಕಾರ, ಸಂಪತ್ತು ಮತ್ತು ಅವಕಾಶದ ಹೆಬ್ಬಾಗಿಲನ್ನು ಎಲ್ಲರಿಗೂ ತೆರೆದು, ಸಮಾನವಾಗಿ ಹಂಚಿಕೆ ಮಾಡುವ ಸಾಮಾಜಿಕ ನ್ಯಾಯದ ಪಾಲನೆಗೆ ಮಾದರಿಯಾಗಿರುವವರು ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು.
ಅರಸು ಅವರು ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರುವ ನಾಯಕರನ್ನು ಗುರುತಿಸಿ ಅವಕಾಶ ಕೊಟ್ಟು ರಾಜಕೀಯವಾಗಿ ಬೆಳೆಸಿದರು, ಭೂಸುಧಾರಣೆಯ ಮೂಲಕ ಸಂಪತ್ತಿನ ಸಮಾನ ಹಂಚಿಕೆಗೆಗೆ ಕಾರಣರಾದರು, ಮೀಸಲಾತಿಯ ಮೂಲಕ ಅವಕಾಶ ವಂಚಿತ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಹೆಚ್ಚಿನ ಪ್ರಾತಿನಿಧ್ಯ ಸಿಗುವಂತೆ ಮಾಡಿದರು.
ಅರಸು ಅವರು ಎಳೆದು ತಂದು ನಿಲ್ಲಿಸಿರುವ ಈ ಸಾಮಾಜಿಕ ನ್ಯಾಯದ ಬಂಡಿಯನ್ನು ಇನ್ನಷ್ಟು ಮುಂದಕ್ಕೆ ಎಳೆದುಕೊಂಡು ಹೋಗುವ ಜವಾಬ್ದಾರಿ ನಮ್ಮ ಸರ್ಕಾರದ ಮೇಲಿದೆ, ಮುಖ್ಯಮಂತ್ರಿಯಾಗಿ ನನ್ನ ಮೇಲಿದೆ.
Siddaramaiah ನನ್ನ ರಾಜಕೀಯ ಜೀವನಕ್ಕೆ ಹಲವಾರು ಹಿರಿಯರ ಚಿಂತನೆಗಳು ಪ್ರೇರಣೆ ಮತ್ತು ಮಾರ್ಗದರ್ಶನ ನೀಡಿವೆ. ಆ ಹಿರಿಯರ ಸಾಲಿನಲ್ಲಿ ಡಿ.ದೇವರಾಜ ಅರಸು ಅವರಿಗೆ ವಿಶೇಷವಾದ ಸ್ಥಾನವಿದೆ. ಅವರಂತೆ ನಾನೂ ಕೂಡಾ ಮೈಸೂರಿನ ಮಣ್ಣಿನ ಮಗ ಎಂಬುದು ನನಗೆ ಖಂಡಿತ ಹೆಮ್ಮೆಯ ವಿಷಯ ಎಂದು ದೇವರಾಜ ಅರಸು
ಬಗ್ಗೆ ಸಿದ್ಧರಾಮಯ್ಯ ಮನದುಂಬಿ ಮಾತನಾಡಿದರು.