Lions Club Shiralakoppa ಶಿರಾಳಕೊಪ್ಪದ ಲಯನ್ಸ್ ಕ್ಲಬ್ ವತಿಯಿಂದ ಸರಣಿ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ತಾಲ್ಲೂಕಿನ ದೇವಿಕೊಪ್ಪದ ಸರ್ಕಾರಿ ಪ್ರಾಥಮಿಕ ಶಾಲೆಗೆ ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ಶಿರಾಳಕೊಪ್ಪ ವತಿಯಿಂದ ನಲಿ ಕಲಿ ಪಠ್ಯಕ್ರಮಕ್ಕೆ ಉಪಯುಕ್ತವಾದ ಪೀಠೋಪಕರಣಗಳು ಹಾಗೂ ಕ್ರೀಡಾ ಸಾಮಗ್ರಿಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಶಿವಯೋಗಿ ಮಾತನಾಡುತ್ತಾ ನಾನು ಈ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದು ಗ್ರಾಮಾಂತರ ಪ್ರದೇಶದಲ್ಲಿ ಸಂಪನ್ಮೂಲದ ಕೊರತೆ ಇರುವುದರಿಂದ ನಮ್ಮ ಕ್ಲಬ್ ಹಾಗೂ ವೈಯಕ್ತಿಕವಾಗಿ ಇಲ್ಲಿನ ಅವಶ್ಯಕತೆ ಅರಿತು ಈ ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ದೇವಿಕೊಪ್ಪ ಗ್ರಾಮದ 30 ಹಿರಿಯ ನಾಗರಿಕರಿಗೆ ಹೊದಿಕೆ ವಿತರಣೆ ಮಾಡಲಾಯಿತು ಹಾಗೂ ಇತ್ತೀಚಿಗೆ ಮಳೆ ಹಾನಿಗೊಳಗಾದ 6 ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ಗಳನ್ನು ವಿತರಿಸಲಾಯಿತು.
ಇತ್ತೀಚಿನ ದಿನಗಳಲ್ಲಿ ಹಿರಿಯ ನಾಗರಿಕರನ್ನು ಕುಟುಂಬದಲ್ಲಿ ನಿರ್ಲಕ್ಷದಿಂದ ನೋಡುವ ದುರಂತ ನಮ್ಮದಾಗಿದೆ. ಈ ಸಂದರ್ಭದಲ್ಲಿ ಅವರಿಗೆ ಮಳೆ ಹಾಗೂ ಚಳಿಯಿಂದ ಸುರಕ್ಷತೆ ಒದಗಿಸುವ ದೃಷ್ಟಿಯಿಂದ ಹೊದಿಕೆಗಳನ್ನು ವಿತರಿಸಲಾಗುತ್ತಿದೆ ಎಂದು ಅಧ್ಯಕ್ಷ ಶಿವಯೋಗಿ ಅಭಿಪ್ರಾಯಪಟ್ಟರು.
ಬಳ್ಳಿಗಾವಿಯ ಶ್ರೀ ಅಲ್ಲಮಪ್ರಭು ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ಶಿರಾಳಕೊಪ್ಪ ವತಿಯಿಂದ ಐಡಿ ಕಾರ್ಡ್ ಗಳನ್ನು ಮಾಡಿಸಿ ವಿತರಿಸಲಾಯಿತು.
Lions Club Shiralakoppa ಈ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಎಂ ಆರ್ ಗಿರೀಶ್, ಖಜಾಂಚಿ ಯೋಗರಾಜ್ ಪ್ರಾಂತೀಯ ಅಧ್ಯಕ್ಷ ವೇದಮೂರ್ತಿ , ಶಿವಕುಮಾರ್, ಸುರೇಶ್, ಉಮೇಶ್ ಲಯನ್ ನಾಗಭೂಷಣ ಗೌಡ ಅನ್ನಪೂರ್ಣ, ಶೃತಿ ಗಿರೀಶ್, ಆಶಾ ಮಂಜುನಾಥ್, ಗೀತಾ ಶಿವಯೋಗಿ, ರಾಧಾ ರಾಜೀವ್, ಅಲ್ಲಮ ಪ್ರಭು ಶಾಲಾ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಲ್ಲಪ್ಪ, ದೇವಿಕೊಪ್ಪ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ನಾಗರಾಜ್ ಗೌಡ ದೇವಿ ಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯರಾದ ಜಗದೀಶ್ ಗ್ರಾಮಸ್ಥರು ಮತ್ತು ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.