World Folk Day ಕರ್ನಾಟಕ ಜಾನಪದ ಪರಿಷತ್ತು, ತೀರ್ಥಹಳ್ಳಿ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜು ಸಾಂಸ್ಕೃತಿಕ ಸಂಘ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಸಹಕಾರದಲ್ಲಿ ವಿಶ್ವ ಜಾನಪದ ದಿನಾಚರಣೆ ಪ್ರಯುಕ್ತ ಆಗಸ್ಟ್ 18 ರಂದು ಮಧ್ಯಾಹ್ನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಉದ್ಘಾಟಿಸಿದರು.
ಪ್ರಿನ್ಸಿಪಾಲರಾದ ವೈ. ಎಂ. ಸುಧಾ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಜಾನಪದ ಪರಿಷತ್ತು ತೀರ್ಥಹಳ್ಳಿ ತಾಲ್ಲೂಕು ಅಧ್ಯಕ್ಷರಾದ ಲೀಲಾವತಿ ಜಯಶೀಲ ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ಬಸವಾನಿಯ ಜಾನಪದ ವೈದ್ಯರಾದ ವೆಂಕಟರಮಣ ಅವರನ್ನು ಸನ್ಮಾನಿಸಲಾಯಿತು.
ಜಾನಪದಲ್ಲಿ ಮಹಿಳೆ ವಿಚಾರವಾಗಿ ಡಾ. ಬಿ. ಎಂ. ಜಯಶೀಲ ಮಾತನಾಡಿದರು.
ವಿದ್ಯಾರ್ಥಿಗಳು ಜನಪದ ಹಾಡುಗಳನ್ನು ಹೇಳಿದರು. ವೇದಿಕೆಯಲ್ಲಿ ಕಸಾಪ ತಾಲ್ಲೂಕು ಅಧ್ಯಕ್ಷರಾದ ಟಿ. ಕೆ. ರಮೇಶ್ ಶೆಟ್ಟಿ, ಕಜಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ಕೆ.ಜಿ. ವೆಂಕಟೇಶ್, ಉಪಾಧ್ಯಕ್ಷರಾದ ನಡಬೂರು ವೆಂಕಟೇಶ್, ಬೆಜ್ಜವಳ್ಳಿ ಮಂಜಪ್ಪ, ಗೋಪಾಲ ಕೃಷ್ಣ ಗುಂಡಗದ್ದೆ, ಪ್ರೇಮಾ ಮೇಡಂ, ಸಾಹಿತಿಗಳಾದ ಶಿವಾನಂದ ಕರ್ಕಿ, ಕಸಾಪ ಕೋಶಾಧ್ಯಕ್ಷರಾದ ಹಾಲಿಗೆ ನಾಗರಾಜ್, ಆರ್. ಎಂ. ಧರ್ಮಣ್ಣ, ಕಾಲೇಜು ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎನ್. ಎಸ್. ಎಸ್. ಉಪನ್ಯಾಸಕರಾದ ಎಸ್. ಎಂ. ಜಗದೀಶ್ ನಿರೂಪಿಸಿದರು. ಕಜಾಪ ಸಂಘಟನಾ ಕಾರ್ಯದರ್ಶಿ, ಗಾಯಕಿ ಶರ್ಮಿಳಾ ಮಂಜುನಾಥ ಅವರ ಜಾನಪದ ಹಾಡಿನೊಂದಿಗೆ World Folk Day ಕಾರ್ಯಕ್ರಮ ಆರಂಭವಾಯಿತು. ಉಪನ್ಯಾಸ ಕರಾದ ನಾಗಭೂಷಣ ಸ್ವಾಗತಿಸಿದರು. ಬಿ. ಇ. ಪ್ರಕಾಶ್ ವಂದಿಸಿದರು.