Uttaradi Mutt ಸಜ್ಜನರಿಗೆ ಸುಖ ಆಗಬೇಕು ಎಂಬ ಏಕಮಾತ್ರ ಉದ್ದೇಶದಿಂದ ಪರಮಾತ್ಮ ದುರ್ಜನರ ನಾಶ ಮಾಡುತ್ತಾನೆ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.
ಬುಧವಾರ ಸಂಜೆ ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಶ್ರೀ ಸತ್ಯಧರ್ಮರ ಭಾಗವತ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಅನುಗ್ರಹ ಸಂದೇಶ ನೀಡಿದರು.
ನಾವು ಕೂಡ ಸಜ್ಜನರಾಗಬೇಕು. ಹೀಗಾಗಿ ನಿತ್ಯದಲ್ಲಿ ದೇವರ ಪೂಜೆ ಮಾಡಿ, ಪ್ರಾರ್ಥಿಸಬೇಕು. ದೇವರ ಉಪಕಾರ ಸ್ಮರಿಸಿ, ಆತನ ಗುಣಗಳ ಸ್ತೋತ್ರ ಮಾಡಬೇಕು. ಆಗ ಯಾವ ಆಪತ್ತೂ ಬರುವುದಿಲ್ಲ. ಸಾಧನ ಶರೀರ ಇದ್ದಾಗ ಮಾತ್ರ ದೇವರ ಚಿಂತನೆ, ಪೂಜೆ ಸಾಧ್ಯ. ಇಂತಹ ಮಾನವ ಜನ್ಮ ಇದ್ದಾಗಲೂ ದೇವರ ಸ್ಮರಣೆ ಬಾರದಿದ್ದರೆ ಯಾವ ಪ್ರಯೋಜನ ಇಲ್ಲ ಎಂದರು.
ಈ ಜನ್ಮವೇ ಉಪಕಾರ :
ಪಂಡಿತ ಅನ್ವೇಷಾಚಾರ್ಯ ಸರಸ್ವತಿ ಮಾತನಾಡಿ, ಭಗವಂತ ನಮಗೆ ಮಾಡುವ ಅನಂತ ಉಪಕಾರವನ್ನು ಸದಾ ಸ್ಮರಣೆ ಮಾಡಬೇಕು. ಮಾನವ ಜನ್ಮ ಕೊಟ್ಟ ಅತಿ ದೊಡ್ಡ ಉಪಕಾರ. ಅದರಲ್ಲೂ ಇಂತಹ ಗುರುಗಳ ಶಿಷ್ಯರಾಗಿರುವುದು ಕೂಡ ಭಗವಂತ ಮಾಡಿದ ಮಹದುಪಕಾರ ಎಂದರು.
Uttaradi Mutt ಇಂತಹ ಉಪಕಾರ ಮಾಡಿದ ಭಗವಂತನಿಗೆ ನಾವು ಪ್ರತ್ಯುಪಕಾರ ಮಾಡುವುದು ಹೇಗೆ? ಆದರೆ ನಾವು ಪ್ರತ್ಯುಪಕಾರ ಅಲ್ಲ. ದೇವರಿಗೆ ಅಪಚಾರ ಮಾಡುತ್ತೇವೆ. ಇದು ಪಾಪ ಯೋಗ್ಯವಾದದ್ದು. ಸರ್ವಥಾ ಹೀಗೆ ಮಾಡದೆ. ದೇವರ ಉಪಕಾರದ ಸ್ಮರಣೆ ಮಾಡಬೇಕು ಎಂದರು.
ರಾಮೇಶ್ವರದಿಂದ ಆಗಮಿಸಿದ್ದ ಪಂಡಿತ ವಿದ್ಯಾಶಾಚಾರ್ಯ ಕುಲಕರ್ಣಿ ಹೈದರಾಬಾದ್‌ನ ನಾಗೇಂದ್ರ ಪ್ರಸಾದಾಚಾರ್ಯ ಪ್ರವಚನ ನೀಡಿದರು.
ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ಕಾರ್ಯದರ್ಶಿ ಗುರುರಾಜ, ದಿವಾನರಾದ ಶಶಿ ಆಚಾರ್ಯ, ಪಂಡಿತರಾದ ನವರತ್ನ ಶ್ರೀನಿವಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ಸತ್ಯನಾರಾಯಣ ನಾಡಿಗ್, ಮುರಳಿ, ರಾಮಧ್ಯಾನಿ ಅನಿಲ್ ಮೊದಲಾದವರಿದ್ದರು.
