MLA Shivamogga ಸ್ವತಂತ್ರ‍್ಯ ಭಾರತದ 77ನೇ ಸ್ವಾತಂತ್ರ‍್ಯೋತ್ಸವವನ್ನಾಚರಿಸುತ್ತಿರುವ ಈ ಶುಭ ಸಂದರ್ಭದಲ್ಲಿ ಶಿವಮೊಗ್ಗದ ಸಮಸ್ತ ನಾಗರೀಕರಿಗೆ ಸಲಹಾ ಸಂಗ್ರಹ ಅಭಿಯಾನವನ್ನು ಪ್ರಸ್ತುತಪಡಿಸುತ್ತಿದ್ದೇವೆ. ತುಂಗಾ ನದಿಯ ತಟದಲ್ಲಿ ಬೆಳೆದು ಬಂದಿರುವ ನಮ್ಮ ಶಿವಮೊಗ್ಗ ನಗರವು ತನ್ನದೇ ಆದ ಭವ್ಯ ಇತಿಹಾಸ ಹಾಗು ಸಂಸ್ಕೃತಿಯನ್ನೊಳಗೊಂಡು ಕರ್ನಾಟಕದ ಪ್ರಮುಖ ನಗರಗಳಲ್ಲೊಂದಾಗಿದೆ. ಇಷ್ಟೆಲ್ಲಾ ವೈಶಿಷ್ಟ್ಯಗಳುಳ್ಳ ನಮ್ಮ ಶಿವಮೊಗ್ಗ ನಗರವನ್ನು ಅಭಿವೃದ್ಧಿಪೂರ್ಣ ನಗರವನ್ನಾಗಿ ನೋಡಬೇಕೆಂಬುದು ನಾಗರೀಕರೆಲ್ಲರ ಮಹಾದಾಸೆಯಾಗಿದೆ. ಈ ನಿಟ್ಟಿನಲ್ಲಿ ನಾಗರೀಕರು ತಮ್ಮ ಮನದಾಳದ ಸಲಹೆಗಳನ್ನು ಹಂಚಿಕೊಳ್ಳಲು ಒಂದು ಮಾರ್ಗ ಕಲ್ಪಿಸಬೇಕೆಂಬ ಆಲೋಚನೆಯೊಂದಿಗೆ ಈ ಸಲಹಾ ಸಂಗ್ರಹ ಅಭಿಯಾನವನ್ನು ಆಯೋಜಿಸಲಾಗಿದೆ ಎಂದು ಶಿವಮೊಗ್ಗ ಶಾಸಕರಾದ ಎಸ್.ಎನ್.ಚೆನ್ನಬಸಪ್ಪ ಅವರು ಮಾಹಿತಿ ನೀಡಿದ್ದಾರೆ.
ಪ್ರತಿಯೊಬ್ಬ ನಾಗರೀಕರು ತಮ್ಮ ನಗರದ ಕುರಿತು ಕಲ್ಪನೆಗಳನ್ನಿಟ್ಟುಕೊಂಡಿರುತ್ತಾರೆ. ಪರಿಸರ ಸುಧಾರಣೆ, ನಗರೀಕರಣ, ಪ್ರವಾಸೋದ್ಯಮ,ಕೈಗಾರಿಕೆ ಮುಂತಾದ ಆಯಾಮಗಳಲ್ಲಿ ಚಿಂತನೆ ನಡೆಸಿರುತ್ತಾರೆ. ಈ ಎಲ್ಲಾ ಆಲೋಚನೆಗಳನ್ನು ಹಾಗು ಕಲ್ಪನೆಗಳನ್ನು ಒಂದೆಡೆ ಸೇರಿಸಿ, ಅವುಗಳ ಕುರಿತು ಮರುಚಿಂತನೆ ನಡೆಸಿ, ಕಾರ್ಯರೂಪಕ್ಕೆ ತರುವ ಒಂದು ಪ್ರಯತ್ನದ ಮುನ್ನುಡಿಯಾಗಿ ಈ ಸಲಹಾ ಸಂಗ್ರಹ ಅಭಿಯಾನವನ್ನು ಪ್ರಾರಂಭಿಸುತ್ತಿದ್ದೇವೆ ಎಂದಿದ್ದಾರೆ.
MLA Shivamogga ಈ ಅಭಿಯಾನವು ದಿನಾಂಕ 17-08-2023 ರಿಂದ ಮುಂದಿನ ಹದಿನೈದು ದಿನಗಳವರೆಗೆ, ಅಂದರೆ 31-08-2023ರವರೆಗೆ ನಡೆಯುತ್ತದೆ. ಇದರ ಭಾಗವಾಗಿ ಶಿವಮೊಗ್ಗ ನಗರದ 35 ವಾರ್ಡ್ ಗಳನ್ನೊಳಗೊಂಡAತೆ, 50 ಪ್ರಮುಖ ಸ್ಥಳಗಳಲ್ಲಿ ಸಲಹಾ ಪೆಟ್ಟಿಗೆಯನ್ನಿಡಲಾಗುತ್ತದೆ.ಎಲ್ಲಾ ಪೆಟ್ಟಿಗೆಗಳ ಜೊತೆಯಲ್ಲಿ ಮಾಹಿತಿ ಕಾರ್ಡುಗಳನ್ನು ಇರಿಸಲಾಗಿದ್ದು, ಸಾರ್ವಜನಿಕರು ತಮ್ಮ ಸಲಹೆಯೊಂದಿಗೆ ತಮ್ಮ ಹೆಸರು ಮುಂತಾದ ಮಾಹಿತಿಗಳನ್ನು ಕಾರ್ಡ್ ನಲ್ಲಿ ಬರೆದು ಸಲಹಾ ಪೆಟ್ಟಿಗೆಯಲ್ಲಿ ಹಾಕಬೇಕು, ಅಷ್ಟೇ ಅಲ್ಲದೆ ಪ್ರತೀ ಬೂತ್ ಮಟ್ಟದಲ್ಲಿ ನಮ್ಮ ಕಾರ್ಯಕರ್ತರ ಪಡೆ ಈ ಅಭಿಯಾನದ ಮೂಲಕ ಹತ್ತಾರು ಮನೆಗಳಿಗೆ ತಲುಪಿ ತಮ್ಮ ಸಲಹೆಗಳನ್ನು ಪಡೆಯಲಿದ್ದಾರೆ.
ಹದಿನೈದು ದಿನಗಳಲ್ಲಿ ಸಂಗ್ರಹವಾದ ಸಲಹೆಗಳನ್ನು ಕರ್ತವ್ಯ ಭವನವು ದಾಖಲಿಸಿಕೊಂಡು, ಅವುಗಳನ್ನು ವಿವಿಧ ಆಯಾಮಗಳಾಗಿ ವಿಂಗಡಿಸಿಕೊAಡು, ಕಾರ್ಯರೂಪಕ್ಕೆ ತರಲು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿಕೊಳ್ಳಲಾಗುತ್ತದೆ. ಸಂಗ್ರಹವಾಗಿರುವ ಎಲ್ಲಾ ಸಲಹೆಗಳು ಮುಂದಿನ ಐದು ವರ್ಷಗಳಲ್ಲಿ ಶಿವಮೊಗ್ಗ ನಗರದ ಅಭಿವೃದ್ಧಿಯ ಕುರಿತು ಬೆಳಕು ಚೆಲ್ಲುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ನಿಮ್ಮ ಸಲಹೆಗಳು ಶಿವಮೊಗ್ಗವನ್ನು ಸ್ಮಾರ್ಟ್ ಮಾಡುವಲ್ಲಿ ಸಹಕಾರಿಯಾಗುತ್ತದೆ. ಶಿವಮೊಗ್ಗದ ಸಮಸ್ಥ ನಾಗರೀಕರು ಈ ಅಭಿಯಾನದಲ್ಲಿ ಪಾಲ್ಗೊಂಡು, ಅಭಿಯಾನವನ್ನು ಯಶಸ್ವಿಗೊಳಿಸಿಕೊಡಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತೇನೆ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.