Independence Day Celebrations in Shivamogga ಶಿವಮೊಗ್ಗ ನಗರದ ಸುವರ್ಣ ಸಂಸ್ಕೃತಿಕ ಭವನದಲ್ಲಿ ಸಂತೃಪ್ತಿ ಅಂಧರ ಸೇವಾ ಕೇಂದ್ರ ಹೊನ್ನಾಳಿ ಇವರಿಂದ ಸ್ವತಂತ್ರ ದಿನಾಚರಣೆ ಅಂಗವಾಗಿ ಸಂಗೀತ ಸಂಜೆ ಕಾರ್ಯಕ್ರಮವನ್ನು ಚಂದ್ರೋದಯ ಪತ್ರಿಕೆ ಬಳಗ ಕಾರ್ಯಕ್ರಮ ಆಯೋಜನೆ ಮಾಡಿತ್ತು.
ಈ ಸಂದರ್ಭದಲ್ಲಿ ಪತ್ರಿಕೆಯ 33ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಜರಗಿತು. ಚಂದ್ರೋದಯ ಪತ್ರಿಕೆ ಬೆಳೆಸಲು ಸಹಕರಿಸಿದ ಪತ್ರಿಕೆ ಬಳಗದ ಮಿತ್ರರಿಗೆ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಮಲ್ನಾಡ್ ಎಕ್ಸ್ಪ್ರೆಸ್ ಸಂಪಾದಕರಾದ ಶಿಜು ಪಾಶ, ಅತಿಥಿಗಳಾಗಿ ಕೆಜಿ ವೆಂಕಟೇಶ್, ಗಣೇಶ್ ಬಿಳಿಗಿ, ಚಂದ್ರೋದಯ ಪತ್ರಿಕೆಯ ಸಂಪಾದಕರಾದ ವೆಂಕಟೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ನವೀನ್ ತಲಾರಿ ಅವರು Independence Day Celebrations in Shivamogga ಕಾರ್ಯಕ್ರಮದ ನಿರೂಪಣೆ ಮಾಡಿದರು.
ಕಾರ್ಯಕ್ರಮದ ಯಶಸ್ವಿಗೆ ಕಾರಣರಾದ ಎಲ್ಲಾ ಮಿತ್ರರಿಗೂ ಚಂದ್ರೋದಯ ಪತ್ರಿಕೆ ಬಳಗದಿಂದ ಧನ್ಯವಾದಗಳು ತಿಳಿಸಿರುತ್ತಾರೆ.