Saturday, December 6, 2025
Saturday, December 6, 2025

BGS College Shivamogga ದೇಶ ಪ್ರೇಮದ ಜೊತೆಗೆ ದೇಶದ ಅ‌ಭಿವೃದ್ಧಿಗೆ ಕೈಜೋಡಿಸಬೇಕು- ಎಚ್.ಕಲ್ಲಣ್ಣ

Date:

BGS College Shivamogga ಭಾರತಕ್ಕೆ ತಗುಲಿದ್ದ ಬಡತನ ಹಾಗೂ ಮೂಡನಂಬಿಕೆಗಳು ಸ್ವಾತಂತ್ರ್ಯಾ ನಂತರದ ದಿನಗಳಲ್ಲಿ ಅತಿ ಕಡಿಮೆಯಾಗುತ್ತಿರುವುದು ಸಂತೋಷದ ಸಂಗತಿ.

ಸಾರ್ಥಕವನಿಸುವ ಸಾಧನೆಗೈದ ಭಾರತ ಇನ್ನಷ್ಟು ಆಳದಲ್ಲಿ ಅಡಗಿರುವ ಬಡತನ, ಹಸಿವು ಇಂಗಿಸುವ ಜೊತೆಗೆ ಇನ್ನಷ್ಟು ವೈಜ್ಞಾನಿಕವಾದ ಅಭಿವೃದ್ಧಿ ಸಾಧಿಸುತ್ತದೆ ಎಂದು ಡಿವಿಎಸ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಎಚ್. ಕಲ್ಲಣ್ಣ ಅವರು ತಿಳಿಸಿದರು.

ಅವರಿಂದು ಗುರುಪುರದ ಬಿಜಿಎಸ್ ಶಾಲಾ- ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರೋತ್ಸವ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಾ ದೇಶ ಈಗ ಹೊಂದುತ್ತಿರುವ ಅಭಿವೃದ್ಧಿಯ ಹೆಜ್ಜೆಗಳು ಸದ್ಯದಲ್ಲೇ ಇನ್ನಷ್ಟು ಒಳ್ಳೆಯ ನಿರೀಕ್ಷಿತ ಫಲ ನೀಡುತ್ತವೆ ಎಂದು ಹೇಳಿದರು.

BGS College Shivamogga 1947ರ ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಐತಿಹಾಸಿಕ ನೆನಪುಗಳನ್ನು ತಿರುವಿ ನೋಡಿದಾಗ ನಾವೀಗ ಸಬಲರು ಹಾಗೂ ಸುಜ್ಞಾನಿಗಳು ಆಗುವಂತಹ ದಿಟ್ಟ ಹೆಜ್ಜೆಯನ್ನು ಇಡುತ್ತಿದ್ದೇವೆ. ಅಂತಹ ಹೆಜ್ಜೆಗೆ ಇಂದಿನ ಮಕ್ಕಳೇ ಮೂಲ ಸ್ಪೂರ್ತಿ. ಹಾಗಾಗಿ ನೀವುಗಳು ದೇಶ ಪ್ರೇಮದ ಜೊತೆಗೆ, ದೇಶದ ಅಭಿವೃದ್ಧಿಗೆ ಕೈಜೋಡಿಸುವಂತೆ ಮಕ್ಕಳಿಗೆ ಕರೆ ನೀಡಿದರು.

ಪ್ರಾಂಶುಪಾಲರಾದ ಸುರೇಶ್ ಎಸ್. ಎಚ್. ಮಾತನಾಡುತ್ತಾ ದೇಶ ಅಭಿವೃದ್ಧಿ ಹೊಂದಲು ನೀವುಗಳು ಈ ಕ್ಷಣದಿಂದಲೇ ಬದಲಾವಣೆ ತಂದುಕೊಳ್ಳುವ ಅಗತ್ಯವಿದೆ.ಓದಿನ ವಿಷಯಗಳ ಬಗ್ಗೆ ಶ್ರದ್ದೆ, ಹಾಗೂ ಸಮಯಪ್ರಜ್ಞೆ ಹೊಂದಬೇಕಿದೆ. ವಿಶೇಷವಾಗಿ ಎಲ್ಲರೂ ದೇಶದ ಬಗ್ಗೆ ಅಭಿಮಾನವನ್ನು ಹೊಂದುವಂತರಾಗ ಬೇಕಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಹಿರಿಯ ಶಿಕ್ಷಕರಾದ ಹರೀಶ್ ಹಾಗೂ ಉಪನ್ಯಾಶಕರಾದ ರಮೇಶ್ ಇನ್ನು ಮುಂತಾದವರು ಉಪಸ್ಥಿತರಿದ್ದರು. ಶಾಲಾ ಕಾಲೇಜಿನ ಮಕ್ಕಳಿಂದ ಸ್ವಾತಂತ್ರ ಹೋರಾಟಗಾರರ ಬಗ್ಗೆ ಮಾತನಾಡಿದರು ಮತ್ತು ದೇಶಭಕ್ತಿ ಗೀತೆಯನ್ನು ಹಾಡಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...