Trishul Vidya Institute ಸರ್ಕಾರದಿಂದ ನಾವು ಆರ್ಥಿಕ ಸಹಾಯ ಬಯಸುವ ಬದಲು ನಾವೇ ಸರ್ಕಾರಕ್ಕೆ ತೆರಿಗೆ ರೂಪದಿಂದ ಹೆಚ್ಚೆಚ್ಚು ಕೊಡುವಂತಾಗಬೇಕು, ಈ ಸ್ವಾವಲಂಬನೆಯಿಂದಲೂ ಸ್ವಾತಂತ್ರ್ಯಕ್ಕೆ ಅರ್ಥ ಬರುತ್ತದೆ ಎಂದು ಹಿರಿಯ ಪತ್ರಕರ್ತ ಎಚ್ ಬಿ ಮಂಜುನಾಥ್ ಅಭಿಪ್ರಾಯ ಪಟ್ಟರು.
ಅವರಿಂದು ನಗರದ ತ್ರಿಶೂಲ್ ವಿದ್ಯಾ ಸಂಸ್ಥೆಯ ಕ್ಯಾಂಪಸ್ ನಲ್ಲಿ ಭಾರತದ 77ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಾ ಸ್ವಾತಂತ್ರ್ಯವೆಂದರೆ ಮನಬಂದಂತೆ ಸ್ವಚ್ಛಂದವಾಗಿರುವುದೆಂದಲ್ಲ, ಪರಕೀಯರ ನಿಯಂತ್ರಣದಿಂದ ಹೊರಬಂದು ಸ್ವಯಂ ನಿಯಂತ್ರಣವನ್ನು ಹೊಂದಿ ನಮ್ಮ ಕಾಯ್ದೆ ಕಾನೂನುಗಳನ್ನು ನಮಗೆ ಹಿತವಾಗುವಂತೆ ನಾವೇ ರೂಪಿಸಿಕೊಂಡು ದೇಶದ ಸರ್ವಾಂಗೀಣ ಅಭಿವೃದ್ಧಿ ಸಾಧಿಸುತ್ತಾ ರಾಷ್ಟ್ರದ ಹಿತಕ್ಕಾಗಿ ಭೇದ ಭಾವವಿಲ್ಲದೆ ಅನ್ಯೋನ್ಯತೆಯಿಂದ ಕೂಡಿ ಬಾಳುವುದೇ ಸ್ವಾತಂತ್ರ್ಯವಾಗಿದ್ದು ಈ ನಿಟ್ಟಿನಲ್ಲಿ ನಮ್ಮ ಭಾರತ ದೇಶವು ವಿಶ್ವಕ್ಕೆ ಮಾದರಿಯಾಗಿದೆ.
ಭವಿಷ್ಯದಲ್ಲಿ ಭಾರತವು ಮಹಾನ್ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವಲ್ಲಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೂ ಪೋಷಕರು ಮನೆಯಲ್ಲಿ ಮಕ್ಕಳಿಗೂ ರಾಷ್ಟ್ರಪ್ರೇಮದ ಕರ್ತವ್ಯ ಪ್ರಜ್ಞೆಯ ಪರಿಕಲ್ಪನೆಯನ್ನು ಮನದಟ್ಟಾಗುವಂತೆ ನೀಡಬೇಕಿದೆ ಎಂದರು.
Trishul Vidya Institute ಸಂಸ್ಥೆಯ ದಿ.ಕಂದನಕೋವಿ ಬೆಳ್ಳೂಡಿ ರುದ್ರಪ್ಪನವರ ಸುಪುತ್ರ ಕೆ ಬಿ ಪ್ರಕಾಶ್ ರವರ ಉಪಸ್ಥಿತಿಯಲ್ಲಿ ಸುರೇಶ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಶಾಲಾ ಮಕ್ಕಳ ಕವಾಯತು ಧ್ವಜಾರೋಹಣ ರಾಷ್ಟ್ರಗೀತೆ ನಾಡಗೀತೆ ಗಾಯನ ಶಾಲಾ ಮಕ್ಕಳಿಂದ ಸ್ವಾತಂತ್ರ್ಯ ಕುರಿತು ಮಾತುಗಳು ಹಾಗೂ ಚಿಕ್ಕ ಮಕ್ಕಳು ರಾಷ್ಟ್ರ ನಾಯಕರಾ ವೇಶಭೂಷಣದಲ್ಲಿ ಪ್ರದರ್ಶನ ಮುಂತಾದವು ಅಚ್ಚುಕಟ್ಟಾಗಿ ನೆರವೇರಿದವು.
ಅಧ್ಯಾಪಕ ವೃಂದ ಹಾಗೂ ಪೋಷಕ ವೃಂದವು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿತ್ತು.