Poet Vithalrao Gaddar ಕ್ರಾಂತಿಕಾರ ದಲಿತ ಕವಿ ಹಾಗೂ ಹೋರಾಟಗಾರ ವಿಠಲರಾವ್ ಗದ್ದರ್‌ರವರು ಅಗಲಿದ ಹಿನ್ನೆಲೆಯಲ್ಲಿ ತಾಲ್ಲೂಕು ದಲಿತ ಸಂಘರ್ಷ ಸಮಿತಿ ವತಿಯಿಂದ ತಾಲ್ಲೂಕಿನ ರಂಗೇನಹಳ್ಳಿ ಗ್ರಾಮದ ಸಮುದಾಯ ಭವನದಲ್ಲಿ ಮುಖಂಡರುಗಳು ಶ್ರದ್ದಾಂಜಲಿ ಸಲ್ಲಿಸಿದರು.
ಈ ವೇಳೆ ದಸಂಸ ತಾಲ್ಲೂಕು ಅಧ್ಯಕ್ಷ ಜೆ.ರಾಮಚಂದ್ರ ಮಾತನಾಡಿ ಜನಸಾಮಾನ್ಯರ ಪ್ರಜಾಕವಿ ಹಾಗೂ ಕ್ರಾಂತಿಕಾರ ಹೋರಾಟಗಾರ ಗದ್ದರ್ ಅವರು ಶೋಷಿತರು ತುಳಿತ್ತಕೊಳಗಾದವರ ಪರವಾಗಿ ಹಾಡು ಬರೆದು ಜನರಲ್ಲಿ ಜಾಗೃತಿ ಮೂಡಿಸಿದವರು ಎಂದು ಹೇಳಿದರು.
೧೯೪೯ ರಲ್ಲಿ ಜನಿಸಿದ ಗುಮ್ಮಡಿ ವಿಠಲ್‌ರಾವ್, ತೆಲಂಗಾಣದ ಚಳುವಳಿಗೆ ಸೇರ್ಪಡೆಗೊಂಡರು. ಹಿಂದುಳಿದ ಜಾತಿಗಳು, ದಲಿತರ ಹಕ್ಕುಗಳಿಗಾಗಿ ಹೋರಾಟ ಮಾಡಿದ್ದರು. ಹಾಡುಗಳ ಮೂಲಕವೇ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡು ಹೆಚ್ಚಿನ ಜನಮನ್ನಣೆ ಪಡೆದುಕೊಂಡಿದ್ದರು. ಜೈ ಬೋಲೋ ತೆಲಂಗಾಣದ ಚಿತ್ರದಲ್ಲಿ ಹಾಡಿದ್ದ ಗದ್ದರ್ ಅವರಿಗೆ ನಂದಿ ಪ್ರಶಸ್ತಿ ಲಭಿಸಿತ್ತು ಎಂದರು.
Poet Vithalrao Gaddar ಗದ್ದರ್ ಅವರು ರಾಜ್ಯದ ಗಡಿಪ್ರದೇಶಗಳಲ್ಲಿ ತಮ್ಮ ಕ್ರಾಂತಿಗೀತೆಗಳು ಮತ್ತು ಕ್ರಾಂತಿಕಾರ ಎಡಪಂಥಿಯ ಹೋರಾಟ ಮೂಲಕ ಖ್ಯಾತರಾಗಿದ್ದರು. ಹಲವು ಬಾರಿ ಸೆರೆವಾಸ ಅನುಭವಿಸಿ ಪೊಲೀಸರಿಂದ ಶೋಷಣೆಗೆ ಒಳಗಾಗಿದ್ದವರು. ಇವರ ನಿಧನ ಹೋರಾಟಗಾರರಿಗೆ ತುಂಬಲಾರದ ನಷ್ಟವಾಗಿದೆ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ದಸಂಸ ತಾಲೂಕು ಸಂಘಟನಾ ಸಂಚಾಲಕರಾದ ಮೌಂಟ, ಲಕ್ಕವಳ್ಳಿ ಹೋಬಳಿ ಸಂಚಾಲಕ ಮುನಿಯಾ, ಮುಖಂಡರುಗಳಾದ ಕಿರಣ್, ವಿಕಾಸ್, ಮಂಜುನಾಥ್, ಮಹೇಂದ್ರಸ್ವಾಮಿ, ಎಂ.ಸಿ.ಹಳ್ಳಿ ರಮೇಶ್ ಮತ್ತತಿರರು ಹಾಜರಿದ್ದರು.