Shanti Sagara ಏಷ್ಯಾದ ಅತಿದೊಡ್ಡ ಕೆರೆ ಸೂಳೆಕೆರೆ (ಶಾಂತಿ ಸಾಗರ) ನೀರು ಕುಡಿಯಲು ಯೋಗ್ಯವಲ್ಲ ಎಂಬ ಆತಂಕಕಾರಿ ವರದಿ ಬಂದಿದೆ.
ಸೂಳೆಕೆರೆ ನೀರು ಚಿತ್ರದುರ್ಗ ನಗರ ಹೊಳಲ್ಕೆರೆ, ಚನ್ನಗಿರಿ, ಜಗಳೂರು ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆಯಾಗುತ್ತಿತ್ತು. ಆದರೆ ಸೂಳೆಕೆರೆ ನೀರು ಕುಡಿಯಲು ಯೋಗ್ಯವಲ್ಲ ಎಂಬ ವರದಿ ಬಂದ ಹಿನ್ನೆಲೆಯಲ್ಲಿ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ.
Shanti Sagara ಕಳೆದ ಒಂದು ವಾರದಿಂದ ಕೆಂಪು ಮಿಶ್ರಿತ ನೀರು ಸರಬರಾಜು ಆಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸೂಳೆಕೆರೆ ನೀರು ಪೂರೈಕೆ ಕೇಂದ್ರಕ್ಕೆ ಭೇಟಿ ನೀಡಿ ನೀರಿನ ಸ್ಯಾಂಪಲ್‌ನ್ನು ಕಳುಹಿಸಲಾಗಿತ್ತು. ಜಿಲ್ಲಾ ನೀರು ತಪಾಸಣಾ ತಂಡ ಈ ನೀರು ಬಳಕೆ ಮಾಡಲು ಯೋಗ್ಯವಿಲ್ಲ ಎಂದು ವರದಿ ನೀಡಿದೆ.