Supreme Court ಪ್ರಾಥಮಿಕ ಶಾಲೆಯ ಶಿಕ್ಷಕರಾಗುವವರು ಬಿಎಡ್ ಅರ್ಹತೆ ಹೊಂದಿರಬೇಕು ಎಂಬ ಕೇಂದ್ರ ಸರ್ಕಾರದ ಅಧಿಸೂಚನೆಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
Supreme Court ಶಿಕ್ಷಕರಿಗೆ ಸಂಬಂಧಿಸಿದ ಬೋಧನಾ ಕೌಶಲ ಅತ್ಯಂತ ಮಹತ್ವದಾಗಿದೆ. ಪ್ರಾಥಮಿಕ ಶಾಲೆಯಲ್ಲಿ ಬೋಧಿಸಲು ಡಿಎಡ್ ಅರ್ಹತೆಯೇ ಹೊರತೂ ಬಿಎಡ್ ಅಲ್ಲ ಎಂದು ಸುಪ್ರೀಂ ಕೋರ್ಟ್ ಹಲವು ಬಾರಿ ಹೇಳಿರುವುದಾಗಿ ಎಂದು ನ್ಯಾಯಮೂರ್ತಿಗಳಾದ ಅನಿರುದ್ಧ್ ಬೊಸ್ ಮತ್ತು ಸುಧಾಂಶು ಧುಲಿಯಾ ಅವರಿದ್ದ ನ್ಯಾಯಪೀಠ ತಿಳಿಸಿದೆ.
ಬಿಎಡ್ ಕಡ್ಡಾಯ ಅಧಿಸೂಚನೆ ರದ್ದು ಮಾಡಿದ ಸುಪ್ರೀಂ ಕೋರ್ಟ್, ಸರ್ಕಾರದ ನಿರ್ಧಾರ ಸ್ವೇಚ್ಛೆಯಿಂದ ಕೂಡಿದೆ. ಅದು ಅತಾರ್ಕಿಕವಾಗಿದೆ ಎಂದು ಅಭಿಪ್ರಾಯಪಟ್ಟಿದೆ