National Medical Commission ವೈದ್ಯರು ತಮ್ಮ ರೋಗಿಗಳಿಗೆ ಜನರಿಕ್ ಔಷಧವನ್ನೇ ಬರೆಯಬೇಕು. ತಪ್ಪಿದಲ್ಲಿ ದಂಡ ವಿಧಿಸಲಾಗುವುದು ಎಂದು ಸೂಚನೆ ನೀಡಿರುವ ರಾಷ್ಟ್ರೀಯ ವೈದ್ಯಕೀಯ ಆಯೋಗ, ವೈದ್ಯರು ಪ್ರಿಸ್ಕ್ರಿಪ್ಷನ್ ಸ್ಪಷ್ಟವಾಗಿ ಹಾಗೂ ಕ್ಯಾಪಿಟಲ್ ಲೆಟರ್ನಲ್ಲೇ ಬರೆಯಬೇಕು ಎಂದು ಎಚ್ಚರಿಕೆ ನೀಡಿದೆ.
National Medical Commission ತಪ್ಪು ತಿಳುವಳಿಕೆ ತಪ್ಪಿಸುವ ನಿಟ್ಟಿನಲ್ಲಿ ಇದು ಅಗತ್ಯವಾಗಿದ್ದು, ಸಾಧ್ಯವಾದರೆ ಪ್ರಿಸ್ಕ್ರಿಪ್ಷನ್ ಟೈಪ್ ಮಾಡಿ ಪ್ರಿಂಟ್ ರೂಪದಲ್ಲಿ ಕೊಡಬೇಕು ಎಂದು ಕೂಡ ಆಯೋಗ ಹೇಳಿದೆ. ವೈದ್ಯರು ಪ್ರಿಸ್ಕ್ರಿಪ್ಷನ್ ಬರೆಯಲು ಬಳಸಬಹುದಾದ ಟೆಂಪ್ಲೇಟ್ಗಳನ್ನು ಕೂಡ ಒದಗಿಸಲಾಗಿದೆ ಎಂದು ಅದು ತಿಳಿಸಿದೆ.
ರಾಷ್ಟ್ರೀಯ ವೈದ್ಯಕೀಯ ಆಯೋಗದಿಂದ ಆ.2ರಂದು ಹೊರಬಿದ್ದಿರುವ ‘ರೆಗ್ಯುಲೇಷನ್ಸ್ ರಿಲೇಟಿಂಗ್ ಟು ಪ್ರೊಫೆಷನಲ್ ಕಂಡಕ್ಟ್ ಆಫ್ ರಿಜಿಸ್ಟರ್ಡ್ ಮೆಡಿಕಲ್ ಪ್ರ್ಯಾಕ್ಟಿಷಿನರ್ಸ್’ ಪ್ರಕಾರ ವೈದ್ಯರು ಔಷಧದ ಹೆಸರುಗಳನ್ನು ಸ್ಪಷ್ಟವಾಗಿ ಮತ್ತು ಕ್ಯಾಪಿಟಲ್ ಲೆಟರ್ನಲ್ಲೇ ಬರೆಯಬೇಕು ಎಂದು ತಿಳಿಸಿದೆ.