S.L.Bairappa ಕನ್ನಡದ ಖ್ಯಾತ ಲೇಖಕರಾದ ಎಸ್.ಎಲ್.ಭೈರಪ್ಪನವರು 1962ರಲ್ಲಿ ರಚಿಸಿದ ಕಾದಂಬರಿ ದೂರ ಸರಿದರು..
ಈ ಪುಸ್ತಕವು ಮೈಸೂರಿನ ಒಂದು ಕಾಲೇಜಿನಲ್ಲಿ ತತ್ತ್ವಶಾಸ್ತ್ರ ಮತ್ತು ಸಾಹಿತ್ಯ ಓದುವ ವಿದ್ಯಾರ್ಥಿಗಳ ನಡುವೆ ಬೆಳೆದ ಪ್ರೇಮದ ಕಥೆಯಾಗಿದೆ.
ಈ ಕಥೆಯಲ್ಲಿ ಸಚ್ಚಿದಾನಂದ ಮತ್ತು ವಿನತೆ ಮುಖ್ಯ ಪಾತ್ರಧಾರಿಗಳಾಗಿದ್ದಾರೆ.. ಕಥೆಯ ಪ್ರಾರಂಭವು ಈ ವಿದ್ಯಾರ್ಥಿಗಳ ನಡುವಿನ ಸಾಹಿತ್ಯಾಸಕ್ತಿಯನ್ನು ಪ್ರತಿಬಿಂಬಿಸುತ್ತದೆ. ಪುಸ್ತಕ ಓದುವ ಹವ್ಯಾಸ ಇಬ್ಬರು ವಿದ್ಯಾರ್ಥಿಗಳ ನಡುವೆ ಪ್ರೇಮ ಕುದುರಲು ಕಾರಣವಾಗುತ್ತದೆ..
ಉಮಾ,ವಸಂತ, , ರಮಾ, ಪಾತ್ರಗಳೂ ಓದುಗರ ಮನಸ್ಸನ್ನು ತಟ್ಟುತ್ತವೆ. ಗಂಡು ಹೆಣ್ಣಿನ ಭಾವನೆಗಳ, ಪ್ರೇಮ ಪ್ರಸ್ತಾಪ, ಪ್ರೇಮ ವೈಫಲ್ಯ, ಸಾಹಿತ್ಯನೊಂದಿನ ನಂಟು, ಎನಾದರೂ ಸಾಧಿಸಿಯೇ ತೀರಬೇಕೆಂಬ ಛಲಕ್ಕೆ ಈ ಪುಸ್ತಕ ಕೈಗನ್ನಡಿಯಾಗಿದೆ.
S.L.Bairappa ವಸಂತನಿಗೆ ರಮೆಗೆ ಮೇಲೆ ಪ್ರೇಮವಾಗುತ್ತದೆ.ಆದರೆ ರಮೆಗೆ ಸಚ್ಚಿದಾನಂದನ ಮೇಲೆ ಪ್ರೇಮ ಹುಟ್ಟಿಕೊಳ್ಳುತ್ತದೆ. ಆದರೆ ಸಚ್ಚಿದಾನಂದ ವಿನತೆಯನ್ನ ಪ್ರೀತಿಸುತ್ತಿರುತ್ತಾನೆ.
ಇಲ್ಲಿ ಲೇಖಕರು ಹಲವು ಯುಗ ಮನಸ್ಸುಗಳ ಮನಸ್ಸಿನ ತಲ್ಲಣಗಳನ್ನು ಪ್ರೇಮಕಥೆಯ ಮೂಲಕ ಹೆಣೆದಿದ್ದಾರೆ.
ಸ್ನಾತಕೋತ್ತರ ಪದವಿ ಮುಗಿಸಿ ಎಲ್ಲ ವಿದ್ಯಾರ್ಥಿಗಳು ಕೆಲಸಕ್ಕೆ ಚದರುತ್ತಾರೆ.ನಂತರದ ಬದುಕನ್ನು ರಸವತ್ತಾಗಿ ವರ್ಣಿಸುವಲ್ಲಿ ಲೇಖಕರು ಗೆದ್ದಿದ್ದಾರೆ.
ತಾಯಿಯ ಮನವೊಲಿಸುವಲ್ಲಿ ವಿಫಲಳಾದ ವಿನತೆ ಸಚ್ಚಿದಾನಂದನ ನೆನಪಿನಲ್ಲೇ ಕೊನೆಯುಸಿರೆಳೆಯುತ್ತಾಳೆ.. ಸಚ್ಚಿನಾನಂದನೂ ಮನೆಯವರ ಒಪ್ಪಿಗೆ ಮೇರೆಗೆ ಬೇರೆ ಹುಡುಗಿಯನ್ನು ವರಿಸುತ್ತಾನೆ..ಹೀಗೆ ಕಥೆ ಮುಂದುವರೆಯುತ್ತದೆ… ಇಲ್ಲಿ ಓದುಗರು ಗಮನಿಸಲೇಬೇಕಾದ ವಿಷಯವೆಂದರೆ, ಪುಸ್ತಕದ ಶೀರ್ಷಿಕೆಯೇ ಹೇಳುವಂತೆ ಕೊನೆಯಲ್ಲಿ ಎಲ್ಲವೂ “ದೂರ ಸರಿಯುತ್ತದೆ”…
ಅತ್ಯದ್ಬುತವಾದ ಬರವಣಿಗೆಯ ಮೂಲಕ ಓದುಗರಿಗೆ ಹತ್ತಿರವಾಗುವ ಎಸ್.ಎಲ್.ಭೈರಪ್ಪನವರ ಪುಸ್ತಕ “ದೂರ ಸರಿದರು” ಒಮ್ಮೆ ಓದಿ.
ಬರಹ: ಅಂಜುಮ್ ಬಿ.ಎಸ್.