Kuvempu University ಶಿವಮೊಗ್ಗದ ನಗರ ಕಛೇರಿ, ಕುವೆಂಪು ವಿಶ್ವವಿದ್ಯಾಲಯ ಇಲ್ಲಿ ಎನ್.ಎಸ್.ಎಸ್. ವತಿಯಿಂದ “ಔಪಚಾರಿಕ ಶಿಕ್ಷಣ ಹಾಗೂ ನಿಯಮಿತ ಉದ್ಯೋಗದಲ್ಲಿಲ್ಲದ ಯುವಕರ ಸಮೀಕ್ಷೆ” ಕುರಿತಂತೆ ಒಂದು ದಿನದ ವಿಶ್ವವಿದ್ಯಾಲಯ ಮಟ್ಟದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಸುಮಾರು 100 ಜನ ಎನ್.ಎಸ್.ಎಸ್. ಅಧಿಕಾರಿಗಳು ಭಾಗವಹಿಸಿದ್ದ ಈ ಕಾರ್ಯಾಗಾರವನ್ನು ಶ್ರೀ ಉಪ್ಪಿನ್ ವೈ ಎಂ ಯುವ ಅಧಿಕಾರಿ, ರಾಸೇಯೋ ಪ್ರಾದೇಶಿಕ ನಿರ್ದೇಶನಾಲಯ, ಬೆಂಗಳೂರು ಇವರು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ವಿಶ್ವವಿದ್ಯಾಲಯದ ಎನ್.ಎಸ್.ಎಸ್. ಕಾರ್ಯಚಟುವಟಿಕೆಗಳು ಅತ್ಯಂತ ತೃಪ್ತಿಕರವಾಗಿ ಮೂಡಿಬರುತ್ತಿವೆ. ಇನ್ನು ಮುಂದೆಯೂ ಕೂಡ ಇಂತಹಾ ಕಾರ್ಯಕ್ರಮಗಳು ಜರುಗಬೇಕು ಎಂದು ಪ್ರಶಂಸಿದರು.
“ಔಪಚಾರಿಕ ಶಿಕ್ಷಣ ಹಾಗೂ ನಿಯಮಿತ ಉದ್ಯೋಗದಲ್ಲಿಲ್ಲದ ಯುವಕರ ಸಮೀಕ್ಷೆ” ಕುರಿತು ಪ್ರಾತ್ಯಾಕ್ಷಿಕೆ ಮೂಲಕ ವಿವರಿಸುತ್ತಾ ಸದರಿ ಸಮೀಕ್ಷೆ ಕುರಿತು ಹೆಚ್ಚಿನ ಮಾಹಿತಿ ನೀಡಿದರು.
Kuvempu University ರಾ.ಸೇ.ಯೋ. ಅಧಿಕಾರಿಗಳು ಮತ್ತು ತರಬೇತುದಾರರಾದ ಶ್ರೀ ಶರತ್ ಪಿ, ಶಿವಮೊಗ್ಗ ಹಾಗೂ ಡಾ ಅಣ್ಣೇಶ್ ಪಿ, ದಾವಣಗೆರೆ ಇವರು “ಔಪಚಾರಿಕ ಶಿಕ್ಷಣ ಹಾಗೂ ನಿಯಮಿತ ಉದ್ಯೋಗದಲ್ಲಿಲ್ಲದ ಯುವಕರ ಸಮೀಕ್ಷೆ” ಕುರಿತು ತರಬೇತಿ ನೀಡಿದರು.
ಈ ಕಾರ್ಯಾಗಾರಕ್ಕೆ ಆಗಮಿಸಿದ್ದ ಸರ್ವರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಡಾ. ನಾಗರಾಜ ಪರಿಸರ, ಎನ್.ಎಸ್.ಎಸ್. ಸಂಯೋಜಕರು ಮಾತನಾಡಿದರು.
ಭಾರತ ಸರ್ಕಾರವು 15 ರಿಂದ 29 ವರ್ಷ ವಯಸ್ಸಿನ ಯುವಕ / ಯುವತಿಯರು ಎಷ್ಟು ಜನ ಉದ್ಯೋಗವಿಲ್ಲದೇ ಇರುವರು ಎಂಬುದನ್ನು ತಿಳಿದುಕೊಂಡು ಅವರಿಗೆ ಉದ್ಯೋಗಾವಕಾಶಗಳನ್ನು ಯಾವರೀತಿ ಕಲ್ಪಿಸಿಕೊಡಬಹುದು ಎಂಬ ಸದುದ್ದೇಶದಿಂದ ಈ ಸಮೀಕ್ಷೆಯನ್ನು ನಡೆಸಲಾಗುತ್ತಿದೆ ಎಂಬುದನ್ನು ತಿಳಿಸಿದರು.
ಶ್ರೀ ಮಹೇಂದ್ರ ಶೆಟ್ಟಿ, ಎನ್.ಎಸ್.ಎಸ್. ಸ್ವಯಂ ಸೇವಕ ಪ್ರಾರ್ಥಿಸಿ, ಡಾ ಟಿ. ಜಿ. ಉಮಾ ರಾಸೇಯೋ ಅಧಿಕಾರಿಗಳು ಸರ್. ಎಂ. ವಿ. ಕಲಾ ಮತ್ತು ವಾಣಿಜ್ಯ ಕಾಲೇಜು, ಭದ್ರಾವತಿ ಇವರು ನಿರೂಪಿಸಿದರೆ ಡಾ ಕೇತನ, ಡಿ ವಿ ಎಸ್ ಕಾಲೇಜು, ಶಿವಮೊಗ್ಗ ಇವರು ಎಲ್ಲರನ್ನೂ ವಂದಿಸಿದರು. ಕೊನೆಯಲ್ಲಿ ಸಮೀಕ್ಷೆ ನಮೂನೆಗಳನ್ನು ವಿತರಿಸಲಾಯಿತು.