Chamber Of Commerce ಶುಭಮಂಗಳ ಸಮುದಾಯ ಭವನದಲ್ಲಿ ಆಯೋಜಿಸಿರುವ “ಅಧಿಕಸ್ಯ ಅಧಿಕ ಫಲಂ” ಒಂದು ತಿಂಗಳ ಪರ್ಯಂತ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಎನ್.ಗೋಪಿನಾಥ್ ಹಾಗೂ ಅ.ನಾ.ವಿಜೇಂದ್ರ ಅವರನ್ನು ‘ಶಿವಮೊಗ್ಗ ಸಾಧಕರು’ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಶಿವಮೊಗ್ಗದ ಹಿರಿಮೆ ಹೆಚ್ಚಿಸುವ, ಪ್ರವಾಸೋದ್ಯಮ ಹಾಗೂ ಕೈಗಾರಿಕಾ ಅಬಿವೃದ್ಧಿ ಪೂರಕ ಚಟುವಟಿಕೆಗಳನ್ನು ನಡೆಸುತ್ತಿರುವ, ಯುವಕರಿಗೆ ಆರ್ದಶವಾಗುವಂತೆ ಸಮಾಜಮುಖಿ ಸೇವೆ ಸಲ್ಲಿಸುತ್ತಿರುವ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಹಾಗೂ ಸಾಹಸಿ ಅ.ನಾ.ವಿಜೇಂದ್ರ ಅವರನ್ನು ಸ್ಥಳೀಯ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಶ್ರೀ ಶನೈಶ್ಚರ ದೇವಾಲಯ ಸಮಿತಿ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರು ಸನ್ಮಾನಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಶಿವಮೊಗ್ಗದ ಸಾಧಕರನ್ನು ಗುರುತಿಸಿ ಗೌರವಿಸುವ ವಿಶೇಷ ಕಾರ್ಯಕ್ರಮವನ್ನು ಶುಭಮಂಗಳ ಸಮುದಾಯ ಭವನದಲ್ಲಿ ಆಯೋಜಿಸಿರುವ “ಅಧಿಕಸ್ಯ ಅಧಿಕ ಫಲಂ” ಕಾರ್ಯಕ್ರಮದಲ್ಲಿ ಪ್ರತಿ ನಿತ್ಯ ನಡೆಸಲಾಗುತ್ತಿದೆ.
Chamber Of Commerce ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರಾಗಿರುವ ಎನ್.ಗೋಪಿನಾಥ್ ಅವರು ನನ್ನ ಕನಸಿನ ಶಿವಮೊಗ್ಗ, ರೋಟರಿ ಸಂಸ್ಥೆ, ಹೊಟೇಲ್ ಮಾಲೀಕರ ಸಂಘ, ಯೂತ್ ಹಾಸ್ಟೆಲ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಪರಿಸರ ಸಂರಕ್ಷಣೆ ಕಾರ್ಯದಲ್ಲೂ ಸಾಮಾಜಿಕ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ.
ಅ.ನಾ.ವಿಜೇಂದ್ರ ಸಾಹಸಿ ಹಾಗೂ ಪರಿಸರ ಪ್ರೇಮಿ. ಯೂತ್ ಹಾಸ್ಟೆಲ್, ಸೈಕಲ್ ಕ್ಲಬ್, ಬೈಕ್ ಕ್ಲಬ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ನಿರಂತರ ಕೆಲಸ ಮಾಡುತ್ತಿದ್ದಾರೆ. ಪ್ರತಿ ವರ್ಷ ಹಿಮಾಲಯಕ್ಕೆ ನೂರಾರು ಜನ ಸಾಹಸಿಗಳನ್ನು ಕಳುಹಿಸಿ ಮಾರ್ಗದರ್ಶನ ನೀಡುತ್ತಾರೆ.
“ಅಧಿಕಸ್ಯ ಅಧಿಕ ಫಲಂ” ಒಂದು ತಿಂಗಳ ಪರ್ಯಂತ ಧಾರ್ಮಿಕ ಕಾರ್ಯಕ್ರಮದಲ್ಲಿ ಡಾ. ವೀಣಾ ಬನ್ನಂಜೆ ಅವರಿಂದ ಶ್ರೀಮದ್ಭಾಗವತ ಕುರಿತ ವಿಶೇಷ ಉಪನ್ಯಾಸ ನಡೆಯಿತು. ಜಯಲಕ್ಷ್ಮೀ ಈಶ್ವರಪ್ಪ, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್, ವಿನಾಯಕ್ ಬಾಯರಿ, ಶಬರೀಶ್ ಕಣ್ಣನ್ ಮತ್ತಿತರರು ಉಪಸ್ಥಿತರಿದ್ದರು.