ZP Chikkamagaluru ಚಿಕ್ಕಮಗಳೂರು ತಾಲ್ಲೂಕಿನ ಹಿರೇಕೊಳಲೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಹೆಚ್.ಆರ್. ಕವಿತಾ ಸುನೀಲ್‌ಕುಮಾರ್ ಮತ್ತು ಉಪಾಧ್ಯಕ್ಷರಾಗಿ ಪುಷ್ಪ ಪಳನಿ ಆಯ್ಕೆಯಾಗಿದ್ದಾರೆ.
ಪಂಚಾಯಿತಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಸಂಬಂಧ ಅಧ್ಯಕ್ಷ ಸ್ಥಾನಕ್ಕೆ ಸದಸ್ಯೆ ರೇಣುಕಾ ಪ್ರತಿಸ್ಪರ್ಧಿಯಾಗಿ ಕಣದಲ್ಲಿದ್ದರು. ಕೊನೆಯ ಹಂತದಲ್ಲಿ ಹೆಚ್.ಆರ್.ಕವಿತಾ 04 ಮತಗಳು, ಪ್ರತಿಸ್ಪರ್ಧಿ 03 ಮತಗಳನ್ನು ಪಡೆದುಕೊಂಡರು.
ZP Chikkamagaluru ಬಳಿಕ ಚುನಾವಣಾಧಿಕಾರಿ ರಾಮಣ್ಣಗೌಡ ಪಾಟೀಲ್‌ರವರು ಚುನಾವಣಾ ಮೂಲಕ ಅಧ್ಯಕ್ಷರಾಗಿ ಹೆಚ್.ಆರ್. ಕವಿತಾ ಸುನೀಲ್‌ಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಪುಷ್ಪಪಳನಿ ಅವರನ್ನು ಅವಿರೋಧವಾಗಿ ಘೋಷಿಸಿದರು.
ಅಧ್ಯಕ್ಷೆ ಹೆಚ್.ಆರ್.ಕವಿತಾ ಸುನೀಲ್‌ಕುಮಾರ್ ಮಾತನಾಡಿ ಪಂಚಾಯಿತಿ ಎಲ್ಲಾ ಸದಸ್ಯರ ಸಹಕಾರ ಪಡೆದು ಕೊಂಡು ಗ್ರಾಮಗಳ ಮೂಲ ಸಮಸ್ಯೆಗಳಾದ ಕುಡಿಯುವ ನೀರು, ರಸ್ತೆ ಸೇರಿದಂತೆ ಇನ್ನಿತರೆ ಕೊರತೆಗಳನ್ನು ನೀಗಿ ಸುವಲ್ಲಿ ಜಾತಿ ತಾರತಮ್ಯವೆಸಗದೇ ಸಂವಿಧಾನಕ್ಕೆ ಬದ್ಧವಾಗಿ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರೇಕೊಳಲೆ ಗ್ರಾಮ ಪಂಚಾಯಿತಿ ಸದಸ್ಯರಾದ ಸದಸ್ಯ ಹೆಚ್.ಎನ್.ಶಿವಕುಮಾರ್, ಹೆಚ್.ಪೂರ್ಣೇಶ್, ವಿನಯ್, ಸಂದೀಪ್, ಪೂಣ ðಮಾ, ರೇಣುಕಾ, ಪಿಡಿಓ ವಿಜಯ ಹಾಗೂ ಪೊಲೀಸ್ ಸಿಬ್ಬಂದಿಯವರು ಉಪಸ್ಥಿತರಿದ್ದರು.