Kasturirangan Committee ಪಶ್ಚಿಮಘಟ್ಟ ಪ್ರದೇಶಗಳ ಗ್ರಾಮಸ್ಥರಿಗೆ ತಲೆದೋರಿದ್ದ ಕಸ್ತೂರಿ ರಂಗನ್ ವರದಿ ಬಗ್ಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಸಮಿತಿ ರಚಿಸಿ ಸ್ಪಷ್ಟ ನಿರ್ಣಯ ಕೈಗೊಂಡಿರುವುದಕ್ಕೆ ಕಡವಂತಿ ಗ್ರಾಮ ಪಂಚಾಯಿತಿ ಸದಸ್ಯ ವಿನೋದ್ ಬೊಗಸೆ ಸ್ವಾಗತಿಸಿದ್ದಾರೆ.
ಈ ಸಂಬಂಧ ಹೇಳಿಕೆಯಲ್ಲಿ ತಿಳಿಸಿರುವ ಅವರು, ಕಳೆದ ಹಲವಾರು ವರ್ಷಗಳಿಂದ ಕಸ್ತೂರಿ ರಂಗನ್ ವರದಿಯು ಅವೈಜ್ಞಾನಿಕವಾಗಿ ಕೂಡಿತ್ತು. ಸೆಟಲೈಟ್ ಮೂಲಕ ಚಿತ್ರೀಕರಣಗೊಳಿಸಿ ಅರಣ್ಯ ಪ್ರದೇಶವೆಂದು ಘೋಷಿ ಸಲಾಗಿತ್ತು ಎಂದು ಹೇಳಿದ್ದಾರೆ.
ಪಶ್ಚಿಮಘಟ್ಟ ಭಾಗದಲ್ಲಿ ಪ್ರಮುಖ ಬೆಳೆಗಳಾದ ಕಾಫಿ, ರಬ್ಬರ್, ತೆಂಗು ಹಾಗೂ ಟೀ ಬೆಳೆಯುವ ತೋಟಗ ಳಿವೆ. ಇವುಗಳೆಲ್ಲವು ಹಸಿರೆಂಬ ಕಾರಣಕ್ಕೆ ಅರಣ್ಯವೆಂದು ವರದಿಯಲ್ಲಿ ಸಿದ್ದಪಡಿಸಿತ್ತು. ಈ ಸಂಬಂಧ ಸರ್ಕಾರಕ್ಕೆ ಸಂಸದೆ ಶೋಭಾ ಕರಂದ್ಲಾಜೆಯವರು ಸೂಕ್ತ ವರದಿ ಮಂಡಿಸಿರುವ ಪರಿಣಾಮ ಕೇಂದ್ರ ಸಚಿವ ಭೂಪೇಂದ್ರ ಅವರು ಸಮಿತಿ ರಚಿಸಿ ನಿರ್ಣಯ ಸೂಕ್ತ ಕೈಗೊಳ್ಳಲು ಮುಂದಾಗಿರುವುದು ಸಂತಸದ ವಿಚಾರ ಎಂದಿದ್ದಾರೆ.
Kasturirangan Committee ಕಸ್ತೂರಿ ರಂಗನ್ ವರದಿ ಸಂಬಂಧ ಸಮಿತಿಯ ತಂಡ ಪ್ರತಿ ಹಳ್ಳಿಗಳಿಗೆ ಭೇಟಿ ನೀಡುವ ಮೂಲಕ ಸ್ಥಳೀಯ ವಾಗಿ ತೋಟಗಳು, ಅಂಗಡಿ-ಮುಂಗಟ್ಟುಗಳಿವೆಯೇ ಎಂಬ ಸಮೀಕ್ಷೆ ನಡೆಸಿ ಒಂದು ವರ್ಷದೊಳಗೆ ವರದಿ ನೀಡ ಲು ಸೂಚಿಸಿರುವುದು ನಿಜವಾಗಿ ಉತ್ತಮ ಕೆಲಸವಾಗಿದೆ. ಆ ನಿಟ್ಟಿನಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅತ್ಯು ತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.