JCI Shivamogga ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವ ಜತೆಯಲ್ಲಿ ನಾಯಕತ್ವ ಗುಣ ಬೆಳೆಸುವಲ್ಲಿ ಜೆಸಿಐ ಸಂಸ್ಥೆ ಮಹತ್ತರ ಪಾತ್ರ ವಹಿಸುತ್ತದೆ. ಯುವಜನತೆ ಜೆಸಿಐನಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ಸೆನೇಟರ್ ಜೆಸಿಐ ಮಾಜಿ ರಾಷ್ಟ್ರೀಯ ಉಪಾಧ್ಯಕ್ಷ ಎಸ್ ವಿ ಶಾಸ್ತ್ರಿ ಹೇಳಿದರು.
ಶಿವಮೊಗ್ಗ ನಗರದ ಜೆಸಿಐ ಶಿವಮೊಗ್ಗ ಸ್ಟಾರ್ ವತಿಯಿಂದ ವಿನೋಬನಗರದ ವಿಧಾತ್ರಿ ಭವನ್ ಸಭಾಂಗಣದಲ್ಲಿ ಆಯೋಜಿಸಿದ್ದ ಒಂದು ದಿನದ ಪರಿಣಾಮಕಾರಿ ಸಂವಹನ ಕೌಶಲ್ಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಧನಾತ್ಮಕ ಆಲೋಚನೆ ಹಾಗೂ ಉತ್ತಮ ನಿರ್ಧಾರಗಳನ್ನು ಕೈಗೊಳ್ಳುವಂತೆ ವ್ಯಕ್ತಿತ್ವ ಬೆಳೆಸುವಲ್ಲಿ ಜೆಸಿಐ ಹೆಚ್ಚು ಸಹಕಾರಿ ಆಗಿದೆ. ಜೀವನದಲ್ಲಿ ಯಶಸ್ಸು ಗಳಿಸಲು ನೆರವಾಗುತ್ತದೆ ಎಂದು ತಿಳಿಸಿದರು.
ಜೆಸಿಐ ಸಂಸ್ಥೆಯು ಅಂತರಾಷ್ಟ್ರೀಯ ಸಂಸ್ಥೆಯಾಗಿದ್ದು, ವಿಶ್ವವಿದ್ಯಾಲಯದಷ್ಟು ಅಪಾರ ಜ್ಞಾನಭಂಡಾರ ಹೊಂದಿದ್ದು, ಜೆಸಿಐನಲ್ಲಿ ಭಾಗಿಯಾಗುವ ಪ್ರತಿಯೊಬ್ಬರು ಜೀವನ ಉತ್ತಮಗೊಳಿಸಲು ಅಗತ್ಯವಿರುವ ಅಂಶಗಳನ್ನು ಕಲಿಯುತ್ತಾರೆ. ಜೆಸಿ ಸದಸ್ಯರ ತೊಡಗಿಸಿಕೊಳ್ಳುವಿಕೆಯು ಬಹಳ ಮುಖ್ಯವಾಗುತ್ತದೆ ಎಂದರು.
JCI Shivamogga ರೋಟರಿ ವಲಯ 11ರ ಮಾಜಿ ಸಹಾಯಕ ಗವರ್ನರ್ ಜಿ ವಿಜಯಕುಮಾರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತಾ
ಸೇವಾ ಮನೋಭಾವದಿಂದ ಸಮಾಜದಲ್ಲಿ ಉತ್ತಮ ಕೆಲಸ ಮಾಡುತ್ತಿರುವ ಸಂಸ್ಥೆ ಜೆಸಿಐ. ಶಾಲಾ ಅಭಿವೃದ್ಧಿ ಕಾರ್ಯಗಳಲ್ಲಿಯು ಜೆಸಿಐ ಸಂಸ್ಥೆ ನಿರಂತರವಾಗಿ ತೊಡಗಿಸಿಕೊಂಡಿದೆ. ನಿರಂತರವಾಗಿ ಶಿಕ್ಷಣ, ಆರೋಗ್ಯ, ವ್ಯಕ್ತಿತ್ವ ನಿರ್ಮಾಣ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ವಿಶೇಷ ಸೇವೆ ಸಲ್ಲಿಸುತ್ತಿದೆ ಎಂದು ಹೇಳಿದರು.
ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಕೆ, ಉತ್ತಮ ವ್ಯಕ್ತಿತ್ವ ನಿರ್ಮಾಣ ಹಾಗೂ ಸಮಾಜದಲ್ಲಿ ಜವಾಬ್ದಾರಿಯುತ ವ್ಯಕ್ತಿಯಾಗಿ ನಿರ್ಮಾಣ ಮಾಡುವುದು ಶಿಕ್ಷಣದ ಮೂಲ ಆಶಯ. ಶಿಕ್ಷಣದ ಜತೆಯಲ್ಲಿ ಸಂವಹನ ಕೌಶಲ್ಯವು ಅತ್ಯಂತ ಅವಶ್ಯಕ. ಉತ್ತಮ ಸಾಧಕರಾಗಿ ರೂಪುಗೊಳ್ಳಲು ಸಂವಹನ ಅತ್ಯಂತ ಅಗತ್ಯ ಎಂದು ತಿಳಿಸಿದರು.
ಜೆಸಿಐ ಶಿವಮೊಗ್ಗ ಸ್ಟಾರ್ಸ್ ಅಧ್ಯಕ್ಷೆ ಅಶ್ವಿನಿ ಚಂದ್ರಶೇಖರ್ ಮಾತನಾಡಿ, ಯುವಜನರಲ್ಲಿ ನಾಯಕತ್ವ ಗುಣ ಸೇರಿದಂತೆ ಕೌಶಲ್ಯಯುತ ವ್ಯಕ್ತಿತ್ವ ನಿರ್ಮಿಸುವಲ್ಲಿ ಜೆಸಿಐ ವಿಶೇಷ ಸಂವಹನ ಕೌಶಲ್ಯ ಕಾರ್ಯಾಗಾರ ಹಮ್ಮಿಕೊಂಡಿದ್ದು, ಭಾಗಿಯಾಗಿರುವ ಪ್ರತಿಯೊಬ್ಬರು ತರಬೇತಿಯ ಸಂಪೂರ್ಣ ಪ್ರಯೋಜನ ಪಡೆದುಕೊಂಡು ಉತ್ತಮ ಸಂವಹನಕಾರರಾಗಬೇಕು. ಉತ್ತಮ ಸಂವಹನ ಕೌಶಲ್ಯ ಜೀವನದಲ್ಲಿ ಯಶಸ್ಸಿನಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಜೆಸಿಐ ನ ಪೈಲೆಟ್ ಹಾಗೂ ರಾಷ್ಟ್ರೀಯ ತರಬೇತುದಾರರಾದ ಜೆ ಸಿ ಪ್ರಜ್ವಲ್ ಜೈನ್ ಮಾತನಾಡುತ್ತಾ ಜೆಸಿಐ ಸಂಸ್ಥೆಯು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರ ಸೇರಿದಂತೆ ಸೇವಾ ಕ್ಷೇತ್ರದಲ್ಲಿ ವಿಶೇಷ ಕೆಲಸ ಮಾಡುತ್ತಿದ್ದು, ಯುವಜನರು ಜೆಸಿಐನಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಇದರಿಂದ ಸಾಧನೆಯ ಹಾದಿಯಲ್ಲಿ ಮಾರ್ಗದರ್ಶನವಾಗಿ ನೆರವಾಗುತ್ತದೆ ಎಂದು ತಿಳಿಸಿದರು.
ಜೆಸಿಐ ಕೋ ಪೈಲೆಟ್ ಹಾಗೂ ತರಬೇತುದಾರರಾದ ಜೆ ಸಿ ಸುಷ್ಮಾ ಹಿರೇಮಠ್ ಜೆಸಿಐ ಶಿವಮೊಗ್ಗ ಸ್ಟಾರ್ಸ್ ಕಾರ್ಯದರ್ಶಿ ಪ್ರಿಯಾಂಕ ಗೌಡ ಉಪಸ್ಥಿತರಿದ್ದರು.