Saturday, November 23, 2024
Saturday, November 23, 2024

Department of Social Justice and Empowerment ಅಂಚೆ ಇಲಾಖೆಯಲ್ಲಿ ಅನುಕಂಪಾಧಾರಿತ ನೇಮಕದ ಶೇ 5 ನಿಯಮಕ್ಕೆ ಚರ್ಚಿಸಿ ತಿದ್ದುಪಡಿ ತರಲಾಗುವುದು-ಸಚಿವ ಎ. ನಾರಾಯಣಸ್ವಾಮಿ

Date:

Department of Social Justice and Empowerment ಭರಮಸಾಗರದಲ್ಲಿ ಭಾರತೀಯ ಅಂಚೆ ಇಲಾಖೆ ವತಿಯಿಂದ ನೂತನವಾಗಿ ನಿರ್ಮಿಸಲಾಗಿರುವ ಭರಮಸಾಗರ ಉಪ ಅಂಚೆ ಕಚೇರಿಯ ನೂತನ ಕಟ್ಟಡ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಮೊಬೈಲ್, ತಂತ್ರಜ್ಞಾನ ಬೆಳೆದಂತೆ ಅಂಚೆ ಕಚೇರಿಗಳ ಕೆಲಸದಲ್ಲೂ ಹಲವಾರು ಬದಲಾವಣೆಗಳು ಉಂಟಾದವು. ಡಿಬಿಟಿ, ಡಿಜಿಟಲ್ ಪೇಮೆಂಟ್ ಶುರು ಆದ ಮೇಲೆ ಅಂಚೆ ಕಚೇರಿಗಳ ಅಸ್ತಿತ್ವಕ್ಕೆ ಕುಂದು ಒದಗಿತ್ತು. ಆದರೆ ದೇಶದ ಪ್ರಧಾನಿಗಳಾದ ನರೇಂದ್ರ ಮೋದಿಯವರು ಅಂಚೆ ಕಚೇರಿ ಮುಚ್ಚಲು ಅವಕಾಶ ನೀಡದೆ, ಸರ್ಕಾರದ ಹಲವು ಯೋಜನೆ ಹಾಗೂ ಗ್ರಾಮೀಣ ಜನರಿಗೆ ಜೀವಾವಿಮಾ ಸೌಲಭ್ಯಗಳನ್ನು ಜಾರಿಮಾಡಲು ಅಂಚೆ ಕಚೇರಿಗಳಿಗೆ ಅವಕಾಶ ಕಲ್ಪಿಸಿದರು. ‌ ಇಂದು ಬ್ಯಾಂಕ್ ಗಳೊಂದಿಗೆ ಪೈಪೋಟಿ ಮೇಲೆ ಅಂಚೇ ಕಚೇರಿಗಳು ಡಿಜಿಟಲ್ ಪೇಮೆಂಟ್ ಸಹ ಮಾಡುತ್ತಿವೆ. ಸರ್ಕಾರದ ಪಲಾನುಭವಿಗಳ ನೇರ ನಗದು ವರ್ಗಾವಣೆ ಸೇವೆಯನ್ನು ಸಹ ಅಂಚೆ ಕಚೇರಿಯಲ್ಲಿ ನೀಡಲಾಗಿದೆ. ನೇರ ನಗದು ವರ್ಗಾವಣೆ ಜಾರಿ ಮೂಲಕ ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶ ನೀಡದೇ ಫಲಾನುಭವಿಗಳಿಗೆ ನೇರವಾಗಿ ಸರ್ಕಾರದ ಯೋಜ‌ನೆ ತಲುಪಿಸಲಾಗುತ್ತಿದೆ ಎಂದರು.

Department of Social Justice and Empowerment ಸರ್ಕಾರದ ಯೋಜನೆಗಳ ಮೇಲೆ ಅವಲಂಬಿತರಾದವರ ಮನೆ ಬಾಗಿಲಿಗೆ ಅಂಚೆ ಕಚೇರಿಗಳು ಸೇವೆಗಳನ್ನು ತಲುಪಿಸುತ್ತವೆ. ಅಂಚೆ ಇಲಾಖೆಯಲ್ಲಿ ಅನುಕಂಪ ಆಧಾರಿತ ನೌಕರಿಯನ್ನು ಕುಟುಂಬದ ಅವಲಂಬಿತರಾದವರಿಗೆ ನೀಡಲು ಶೇ.5 ರಷ್ಟರ ನಿಯಮ ತೊಡಕಾಗಿದೆ. ಅಂಚೇ ಕಚೇರಿಯಲ್ಲಿ ಸೇವೆ ಸಲ್ಲಿಸಿ ಮೃತರಾದ ಬಹಳಷ್ಟು ನೌಕರರ ಕುಟುಂಬದವರು ಅನುಕಂಪ ಆಧಾರಿತ ನೌಕರಿ‌ ಕೊಡಿಸುವಂತೆ ಮನವಿ ಮಾಡುತ್ತಾರೆ. ಇದನ್ನು ಗಮನದಲ್ಲಿ ಇರಿಸಿಕೊಂಡು ಕೇಂದ್ರ ಸರ್ಕಾರದಲ್ಲಿ ಚರ್ಚಿಸಿ, ಈಗಿರುವ ಶೇ.5 ನಿಯಮಕ್ಕೆ ತಿದ್ದುಪಡಿ ತರಲಾಗುವುದು ಎಂದರು.

ಜಿಲ್ಲೆಯ ಭೀಮಸಮುದ್ರ, ಚಿಕ್ಕಜಾಜೂರು, ಮೊಳಕಾಲ್ಮೂರು ಹಾಗೂ ಪರುಶುರಾಂಪುರದಲ್ಲಿ ಅಂಚೆ ಕಚೇರಿ ಕಟ್ಟಡ ನಿರ್ಮಾಣಕ್ಕೆ ಸೂಕ್ತ ಭೂಮಿ ಮಂಜೂರು ಮಾಡಲಾಗುವುದು ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.

ಬಹುವರ್ಷಗಳ ಹಿಂದೆ ಅಂಚೇ ಕಚೇರಿಗಳು ಗ್ರಾಮೀಣ ಜನರ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದವು‌. ಟೆಲಿಗ್ರಾಮ್ ಸಂದೇಶಕ್ಕೆ ಗ್ರಾಮದ ಬಹಳಷ್ಟು ಜನರು ಕಾತರದಿಂದ ಕಾಯುತ್ತಿದ್ದ ಕ್ಷಣ ಇತ್ತು. ಅಂಚೆಯಣ್ಣನ ಪತ್ರಕ್ಕಾಗಿ ಎದುರು ನೋಡುತ್ತಿದ್ದರು‌‌. ಜನರ ನೋವು ನಲಿವುಗಳಲ್ಲಿ ಅಂಚೇ ಕಚೇರಿ ಪ್ರಮುಖ ಪಾತ್ರ ವಹಿಸುತ್ತಿತ್ತು. ನಾನು ಕೂಡ ಬಾಲ್ಯದಲ್ಲಿ ಅಂಚೇ ಕಚೇರಿಯ ಟೆಲಿಗ್ರಾಮ್ ಯಂತ್ರದ ಟಿಕ್ ಟಿಕ್ ಶಬ್ದದ ಎಡಗೆ ಕುತೂಹಲದಿಂದ ನೋಡಿತ್ತಿದ್ದೆ. ಪೋಸ್ಟ್ ಮಾಸ್ಟರ್ ಆ ಸಂದೇಶವನ್ನು ಡಿಕೋಡ್ ಮಾಡಿ ತಿಳಿಸುತ್ತಿದ್ದರು ಎಂದು ಕೇಂದ್ರ ಸಚಿವ ನಾರಾಯಣಸ್ವಾಮಿ ತಮ್ಮ ಬಾಲ್ಯದ ನೆನಪುಗಳಿಗೆ ಜಾರಿದರು.

ಕರ್ನಾಟಕ ವೃತ್ತದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಎಸ್.ರಾಜೇಂದ್ರ ಕುಮಾರ್ ಮಾತನಾಡಿ, ಅಂಚೆ ಕಚೇರಿಯು ಗ್ರಾಮೀಣ ಭಾಗದಲ್ಲಿ ಉಳಿತಾಯ ಹಾಗೂ ವಿಮೆ ಸೌಲಭ್ಯ ನೀಡುತ್ತಿದೆ. ಅಂಚೆ ಕಚೇರಿಯ ಉಳಿತಾಯ ಖಾತೆಗಳು ಬ್ಯಾಂಕ್ ಖಾತೆಗಳೊಂದಿಗೆ ಸಮ್ಮಿಳತಗೊಳ್ಳಲಿದ್ದು‌, ಬ್ಯಾಂಕ್ ಖಾತೆಗಳಂತೆ, ಅಂಚೆ ಖಾತೆಗಳ ಮೂಲಕ ಹಣಕಾಸು ವ್ಯವಹಾರ ನೆಡಸಬಹುದು. ಸರ್ಕಾರದ ಯೋಜನೆಗಳ ಫನಾಲುಭವಿಗಳಿಗೆ ಅಂಚೆ ಖಾತೆಗಳಿಗೆ ನೇರವಾಗಿ ನಗದು ವರ್ಗಾವಣೆ ಮಾಡಬಹುದಾಗಿದೆ. ಡಿಜಿಟಲ್‌ ಪಾವತಿಯು ಸಹ ಅಂಚೆ ಖಾತೆ ಮೂಲಕ ಸಾಧ್ಯವಾಗಲಿದೆ. ಅಂಚೆ ಕಚೇರಿಗಳಲ್ಲಿ ಆಧಾರ್ ಸೇವೆಗಳು ಹಾಗೂ ಪಾಸ್ ಪೋರ್ಟ್ ಸೇವಾ ಕೇಂದ್ರಗಳನ್ನು ತರೆದು ನಾಗರಿಕರಿಗೆ ಸೇವೆ ನೀಡಲಾಗುತ್ತಿದೆ ಎಂದರು.

ಚಿತ್ರದುರ್ಗ ವಿಭಾಗ ಅಂಚೆ ಅಧೀಕ್ಷಕ ಓ.ವಿರೂಪಾಕ್ಷಪ್ಪ ಪ್ರಸ್ತಾವಿಕವಾಗಿ ಮಾತನಾಡಿ, ಭರಮಸಾಗರ ಅಂಚೆ ಕಚೇರಿ 1964 ರಲ್ಲಿ ಪ್ರಾರಂಭವಾಯಿತು. ನಂತರ ಈ ಹಲವು ಏಳು ಬೀಳುಗಳ ನಡುವೆ ಉಪ ಅಂಚೆ ಕಚೇರಿಯಾಗಿ ಮೇಲ್ದರ್ಜೆಗೆ ಏರಿದೆ. ಜಿಲ್ಲೆಯಲ್ಲಿ 36 ಪ್ರಮುಖ ಅಂಚೆ ಕಚೇರಿ, 317 ಉಪ ಅಂಚೇ ಕಚೇರಿ, 274 ಗ್ರಾಮೀಣ ಅಂಚೆ ಕಚೇರಿಗಳಿವೆ. ಗ್ರಾಮೀಣದ ಶೇ.70 ರಷ್ಟು ಅಂಚೇ ಕಚೇರಿಗಳು ಬಾಡಿಗೆ ಕಟ್ಟಡ ಅಥವಾ ಪೋಸ್ಟ್ ಮಾಸ್ಟರ್ ಮನೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿವೆ. ನರೇಗಾ ಅಡಿ ಅಂಚೇ ಕಚೇರಿ ಕಟ್ಟಡ ನಿರ್ಮಾಣಕ್ಕೆ ಅವಕಾಶವಿದೆ. ಜಿಲ್ಲೆಯ 89 ಅಂಚೆ ಕಚೇರಿಯನ್ನು ಗ್ರಾ.ಪಂ. ಕಚೇರಿಯಲ್ಲಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಬೇಕು ಎಂದು ಕೇಂದ್ರ ಸಚಿವರಲ್ಲಿ ಮನವಿ ಮಾಡಿದರು. ಇದರಿಂದ ಜನರಿಗೆ ತ್ವರಿತಗತಿಯಲ್ಲಿ ಅಂಚೇ ಸೇವೆಗಳನ್ನು ಒದಗಿಸಲು ಅವಕಾಶ ಲಭಿಸಲಿದೆ. ಚಿತ್ರದುರ್ಗ ಅಂಚೆ ಉಪ ವಿಭಾಗ ಪ್ರಸಕ್ತ ಸಾಲಿನಲ್ಲಿ 12.55 ಕೋಟಿ ವರಮಾನ ಗಳಿಸಿದೆ. ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಅಂಚೆ ಪಿ.ಐ.ಎಲ್ ನಲ್ಲಿ ಉತ್ತಮ ಸಾಧನೆ ಮಾಡಲಾಗಿದೆ ಎಂದರು.

ಗ್ರಾ.ಪಂ ಅಧ್ಯಕ್ಷೆ ಮಂಜುಳ ಕೊಗುಂಡೆ ಕರಿಬಸಪ್ಪ, ಮಾಜಿ ಜಿ.ಪಂ.ಸದಸ್ಯ ಗ್ರಾಮದ ಮುಖಂಡ ಡಿ.ವಿ.ಶರಣಪ್ಪ ಸೇರಿದಂತೆ ಮತ್ತಿತರು ವೇದಿಕೆಯಲ್ಲಿ ಇದ್ದರು. ನೂತನ ಉಪ ಅಂಚೆ ಕಚೇರಿ ಕಟ್ಟಡದ ಆವರಣದಲ್ಲಿ ಸಸಿಗಳನ್ನು ನೆಟ್ಟು ನೀರು ಎರೆಯಲಾಯಿತು.

ದಾವಣಗೆರೆ ಸ್ಥಾನಿಕ ಸಹಾಯಕ ಅಂಚೆ ಅಧೀಕ್ಷಕ ಜೆ.ಎಸ್.ಗುರುಪ್ರಸಾದ್ ಪ್ರಾರ್ಥಿಸಿದರು. ಚಿತ್ರದುರ್ಗ ಸ್ಥಾನಿಕ ಸಹಾಯಕ ಅಂಚೆ ಅಧೀಕ್ಷಕ ಅನಿಕುಮಾರ್ ಎನ್ ಸ್ವಾಗತಿಸಿದರು. ಅಂಚೆಯಣ್ಣ ಎಂ.ಬಿ.ಬಸವರಾಜು ನಿರೂಪಿಸಿದರು. ಜಿ.ಹೆಚ್.ಸುರೇಶ್ ವಂದಿಸಿದರು.

ನಾಡಿಗೇರ್ ಸಿ ಎಂ
ಭರಮಸಾಗರ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ “ರಾಜ್ಯೋತ್ಸವ ಕವಿಗೋಷ್ಠಿ”

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ...

Mohare Hanumantharaya Award ಪ್ರಶಸ್ತಿ ಪುರಸ್ಕೃತ ಪತ್ರಕರ್ತ, ‘ಕ್ರಾಂತಿ ದೀಪ ‘ಮಂಜುನಾಥ್ ಅವರಿಗೆ ಸನ್ಮಾನ

Mohare Hanumantharaya Award ಪತ್ರಿಕೋದ್ಯಮದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಮೊಹರೆ ಹಣಮಂತರಾಯ...

MESCOM ನವೆಂಬರ್ 23 .ಹೊಳಲೂರು ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಹೊಳಲೂರು ಗ್ರಾಮದ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ...

Rotary Club Shimoga ಪ್ರೌಢಾವಸ್ಥೆಯು ದೇಹದಲ್ಲಿ ಅನೇಕ ಬದಲಾವಣೆ ತರುತ್ತದೆ.ಅದನ್ನ ಗಮನಿಸಬೇಕು- ಡಾ.ಮೋಕ್ಷಾ

Rotary Club Shimoga ರೋಟರಿ ಸಂಸ್ಥೆಯು ನಿಸ್ವಾರ್ಥವಾಗಿ ವಿಶ್ವದ ಎಲ್ಲ ಭಾಗಗಳಲ್ಲಿ...