Kuvempu Kalamandira ಇಂದಿನ ಕಾಲಘಟ್ಟದಲ್ಲಿ ಹಿಂದೂ ಸಂಪ್ರದಾಯದ ಪುರಾತನ ಸಂಸ್ಕೃತಿ, ಪದ್ಧತಿಗಳು ಕ್ಷೀಣಿಸುತ್ತಿದೆ. ಅವುಗಳನ್ನು ಮರುಸೃಷ್ಟಿಸುವಲ್ಲಿ ಟ್ರಸ್ಟ್ ಹಲವಾರು ವರ್ಷಗಳಿಂದ ನಿರಂತರವಾಗಿ ತೊಡ ಗಿಸಿಕೊಂಡು ಆಚರಣೆಗಳನ್ನು ಪುನಶ್ಚೇತನಗೊಳಿಸುತ್ತಿದೆ ಎಂದು ವಂದೇ ಮಾತರಂ ಟ್ರಸ್ಟ್ ಅಧ್ಯಕ್ಷ ಪ್ರೀತೇಶ್ ಹೇಳಿದರು.
ಶಿವಮೊಗ್ಗ ನಗರದ ಕುವೆಂಪು ಕಲಾಮಂದಿರದಲ್ಲಿ ವಂದೇ ಮಾತರಂ ಟ್ರಸ್ಟ್ ವತಿಯಿಂದ ಏರ್ಪಡಿಸಲಾಗಿದ್ದ ದೇಶಭಕ್ತಿ ಗೀತೆಗಳ ನೃತ್ಯ ಸ್ಪರ್ಧಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶನಿವಾರ ಅವರು ಮಾತನಾಡಿದರು.
ಸಾಂಪ್ರದಾಯಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬಂದಂತಹ ಟ್ರಸ್ಟ್ ಇಂದಿಗೆ ದಶಮಾನೋತ್ಸವ ಕಂಡಿದೆ. ಪ್ರಾರಂಭದಲ್ಲಿ ಮರ‍್ನಾಲ್ಕು ಮಂದಿಯೊಂದಿಗೆ ಆರಂಭಿಸಿ ಇಂದು ದೊಡ್ಡಮಟ್ಟದಲ್ಲಿ ಬೆಳೆದು ಮಕ್ಕಳಿಗೆ, ವೃದ್ದರಿಗೆ ಹಾಗೂ ನಿರುದ್ಯೋಗಿ ಯುವಕರಿಗೆ ಪೂರಕವಾಗಿ ಕಾರ್ಯನಿರ್ವಹಿಸುವ ಮೂಲಕ ಮುಂದುವರೆಯುತ್ತಿದೆ ಎಂದು ಹೇಳಿದರು.
Kuvempu Kalamandira ಇತ್ತೀಚಿನ ದಿನಗಳಲ್ಲಿ ಮಾನವ ಆಧುನಿಕ ಜೀವನಶೈಲಿ ಪದ್ಧತಿಯನ್ನು ಅಳವಡಿಸಿಕೊಂಡ ಹಿನ್ನೆಲೆಯಲ್ಲಿ ಪೋಷಕರನ್ನು ಮರೆತು ವೃದ್ದಾಶ್ರಮಗಳಿಗೆ ಕಳಿಸುತ್ತಿದ್ದಾರೆ. ಅಲ್ಲಿರುವಂತಹ ವೃದ್ದರಿಗೆ ಯಾವುದೇ ಕೀಳರಿಮೆ ಬಾರದ ರೀತಿಯಲ್ಲಿ ಟ್ರಸ್ಟ್ ಪದಾಧಿಕಾರಿಗಳು ಹಿಂದೂ ಸಂಪ್ರದಾಯದಂತೆ ವೃದ್ದರಿಗೆ ಪಾದಪೂಜೆ, ಗುರುವಂದನೆ, ಹನುಮಜಯಂತಿ, ರಾಮನವಮಿ, ತಾಯಿ-ಮಕ್ಕಳ ಬಾಂಧವ್ಯ ಮೂಡುವಂತಹ ಸಂಪ್ರದಾಯಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದೆ ಎಂದರು.
ವಿವೇಕಾನಂದರ ಸಂದೇಶದ ಮಾರ್ಗದೊಂದಿಗೆ ಪ್ರಾರಂಭವಾದ ಟ್ರಸ್ಟ್ ಕೋವಿಡ್ ಸಮಯದಲ್ಲಿ ಊಟೋ ಪಾಚಾರ, ೪೦೦ಕ್ಕೂ ಹೆಚ್ಚು ಮಂದಿಗೆ ತರಬೇತಿ ನಡೆಸಿ ಉದ್ಯೋಗ ಕಲ್ಪಿಸಿರುವುದು, ಸೈನ್ಯವೃತ್ತಿಯಲ್ಲಿ ಮೃತರಾದ ಯೋಧರ ಕುಟುಂಬಗಳಿಗೆ ಆರ್ಥಿಕ ನೆರವು, ಆರೋಗ್ಯ ಮತ್ತು ಶಿಕ್ಷಣ ಪರಿಚಯಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮ ರೂಪಿಸಿಕೊಂಡು ಬಂದಿದೆ ಎಂದರು.
ಕಾರ್ಯದರ್ಶಿ ಡಾ|| ವಿನಯ್‌ಕುಮಾರ್ ಮಾತನಾಡಿ ಕೋವಿಡ್ ಎಂಬ ಕರಾಳದಿನಗಳಲ್ಲಿ ಟ್ರಸ್ಟ್ನ ಹಲವಾರು ಪದಾಧಿಕಾರಿಗಳು ಸ್ವಯಂ ಪ್ರೇರಿತರಾಗಿ ಆರೋಗ್ಯ ಸೇವೆ ಒದಗಿಸಿದ್ದಾರೆ. ಇತ್ತೀಚೆಗೆ ಟ್ರಸ್ಟ್ ವತಿಯಿಂದ ಒಂದು ವಾರಗಳ ಕಾಲ ಶಾಲಾ-ಕಾಲೇಜುಗಳಲ್ಲಿ ವ್ಯಸನಮುಕ್ತ ದಿನಾಚರಣೆ ಆಚರಿಸಿ ಮಕ್ಕಳಲ್ಲಿ ಜಾಗೃತಿ ಮೂಡಿಸಲಾಗಿದೆ ಎಂದು ತಿಳಿಸಿದರು.
ಭಜನಾ ಮಂಡಳಿ ಅಧ್ಯಕ್ಷ ಉದಯಸಿಂಹ ಮಾತನಾಡಿ ಪ್ರಸ್ತುತ ಸಮಯದಲ್ಲಿ ಧರ್ಮ ರಕ್ಷಣೆವಾಗಬೇಕಿದೆ. ಮಕ್ಕಳಿಗೆ ಬಾಲ್ಯದಿಂದಲೇ ದೇವಾಲಯದ ಪೂಜೆ, ಪುನಸ್ಕಾರದಂತಹ ಚಟುವಟಿಕೆಗಳಲ್ಲಿ ತೊಡಗಿಸಬೇಕು. ಪೋಷ ಕರು ಹಿಂದೂ ಸಂಪ್ರದಾಯ ಪದ್ಧತಿಗಳನ್ನು ಮಕ್ಕಳಲ್ಲಿ ಅರಿವು ಮೂಡಿಸಿದರೆ ಸಂಸ್ಕೃತಿ, ಸಂಪ್ರದಾಯ ಉಳಿಯಲು ಸಾಧ್ಯವಾಗಲಿದೆ ಎಂದು ಕಿವಿಮಾತು ಹೇಳಿದರು.
ಇದೇ ವೇಳೆ ಕಾರ್ಯಕ್ರಮದ ಉದ್ಘಾಟನೆಯನ್ನು ಅನ್ನಪೂರ್ಣ ವೃದ್ದಾಶ್ರಮದ ವೃದ್ದರಿಂದ ಉದ್ಘಾಟಿ ಸಲಾಯಿತು. ನಗರದ ವಿವಿಧ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಗಣೇಶ್‌ಭಟ್, ಜಯಲಕ್ಷ್ಮಿ ಮತ್ತು ಶಂಕರನಾರಾಯಣ್ ಅವರಿಗೆ ಆತ್ಮೀಯವಾಗಿ ಬೀಳ್ಕೊಟ್ಟು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟ್ ಉಪಾಧ್ಯಕ್ಷ ರೋಹಿತ್, ಸದಸ್ಯರುಗಳಾದ ನಿತೇಶ್, ಸುಜಿತ್, ರವೀಶ್, ನವೀನ್, ರಂಜನ್, ದವನ್, ಜಮೀರ್ ಮತ್ತಿತರರು ಹಾಜರಿದ್ದರು.