Uttaradi Mutt ಸ್ತುತಿಯನ್ನು ಮಾಡುವ ನೆಪದಲ್ಲಿ ಕೃಷ್ಣ ಭಕ್ತರಿಗೆ ಬ್ರಹ್ಮದೇವರು ಉತ್ತಮವಾದ ಸಂದೇಶ ನೀಡಿದ್ದಾರೆ. ದೇವರ ಬಗ್ಗೆ ಜ್ಞಾನವನ್ನು ನೀಡಿದ್ದಾರೆ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.
ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಶ್ರೀ ಸತ್ಯಧರ್ಮರ ಭಾಗವತ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಅನುಗ್ರಹ ಸಂದೇಶ ನೀಡಿದರು.
ಯಾವುದೇ ಮಾತುಗಳನ್ನು ಕೇಳಿದರೂ, ನುಡಿದರೂ ಭಗವಂತನ ಅನುಸಂಧಾನ ಯಾವಾಗಲೂ ಇರಬೇಕು. ಲೌಖಿಕ ವ್ಯವಹಾರದಲ್ಲೂ ದೇವರ ಸ್ಮರಣೆ ಮಾಡಿದರೆ ಪ್ರತಿ ಕ್ಷಣವೂ ಸಾಧನೆಯ ಕ್ಷಣವಾಗುತ್ತದೆ. ದೇವರ ಸ್ಮರಣೆ ಇಲ್ಲದೆ ಕಾಲ ಕಳೆಯಬಾರದೆಂಬ ಸಂದೇಶ ಗರ್ಭಸ್ತುತಿಯಲ್ಲಿದೆ ಎಂದರು.
Uttaradi Mutt ಉಪಕಾರ ತಿಳಿಯಿರಿ :
ಪ್ರವಚನ ನೀಡಿದ ಪಂಡಿತ ಡಾ. ಆನಂದತೀರ್ಥ ನಾಗಸಂಪಿಗೆ, ದೇವರ ಬಗ್ಗೆ, ಗುರುಗಳ ಬಗ್ಗೆ ನಮಗೆ ಶ್ರದ್ಧೆ ಕಡಿಮೆ ಆಗುತ್ತಿದೆ. ಭಗವಂತ ನಮ್ಮೊಳಗೆ ನಿಂತುಕೊAಡು ನಾನಾ ಸ್ತರದಲ್ಲಿ ಉಪಕಾರ ಮಾಡುತ್ತಿದ್ದಾನೆ. ಆದರೆ ಇದನ್ನು ತಿಳಿದುಕೊಳ್ಳುವ ಸಂಯಮ ನಮಗೆ ಇಲ್ಲವಾಗಿದೆ ಎಂದರು.
ಗುರುಗಳು ಕೂಡ ನಮಗಾಗಿ ಅನುಗ್ರಹ ಮಾಡುತ್ತಾರೆ. ಆದರೆ ಅಲ್ಪ ಜ್ಞಾನಿಗಳಾದ ನಮಗೆ ಅದರ ಅರಿವೇ ಆಗುವುದಿಲ್ಲ. ಎಲ್ಲವೂ ನಮ್ಮಿಂದಲೇ ಆಗುತ್ತಿದೆ ಎಂಬ ಅಹಂಕಾರ ನಮ್ಮದಾಗಿದೆ ಎಂದರು.
ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ಪಂಡಿತರಾದ ನವರತ್ನ ಶ್ರೀನಿವಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ವಾದಿರಾಜ ಅಗ್ನಿಹೋತ್ರಿ, ಮಧುಸೂಧನ ನಾಡಿಗ್, ಸಿ.ಪಿ. ವಾದಿರಾಜ, ಗುರುರಾಜ ಕಟ್ಟಿ ಮೊದಲಾದವರಿದ್ದರು.