Saturday, December 6, 2025
Saturday, December 6, 2025

ZP Chikkamagaluru ಬಿಳೀಕಲ್ಲಹಳ್ಳಿ ಗ್ರಾಪಂ ಅಧ್ಯಕ್ಷ & ಉಪಾಧ್ಯಕ್ಷರ ಆಯ್ಕೆ

Date:

ZP Chikkamagaluru ಚಿಕ್ಕಮಗಳೂರು ತಾಲ್ಲೂಕಿನ ಬಿಳೇಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಗೋಪಿಕೃಷ್ಣ ಹಾಗೂ ಉಪಾಧ್ಯಕ್ಷರಾಗಿ ಹೆಚ್.ಜಯಲಕ್ಷ್ಮಿ ಅವರು ಆಯ್ಕೆಯಾಗಿದ್ದಾರೆ.

ಪಂಚಾಯಿತಿ ಸಭಾಂಗಣದಲ್ಲಿ ನಡೆದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪ್ರತಿಸ್ಪರ್ಧಿ ಯಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯ ಜಗದೀಶ್ ಸ್ಪರ್ಧಿಸಿದ್ದು ಅಂತಿಮ ಹಂತದಲ್ಲಿ 09 ಮತಗಳನ್ನು ಬಿಜೆಪಿ ಬೆಂಬಲಿತ ಸದಸ್ಯ ಗೋಪಿಕೃಷ್ಣ ಪಡೆದುಕೊಂಡರು.

ಗ್ರಾ.ಪಂ.ನಲ್ಲಿ ಒಟ್ಟು 12 ಸದಸ್ಯರ ಪೈಕಿ ಬಿಜೆಪಿ ಬೆಂಬಲಿತ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದವರಿಗೆ 09 ಮತಗಳು, ಕಾಂಗ್ರೆಸ್ ಬೆಂಬಲಿತದಿಂದ ಸ್ಪರ್ಧಿಸಿದವರು ೩ ಮತಗಳು ಪಡೆದುಕೊಂಡ ಹಿನ್ನೆಲೆಯಲ್ಲಿ ಚುನಾವಣಾ ಮೂಲಕ ಅಧ್ಯಕ್ಷರಾಗಿ ಗೋಪಿಕೃಷ್ಣ ಹಾಗೂ ಉಪಾಧ್ಯಕ್ಷರಾಗಿ ಹೆಚ್.ಜಯಲಕ್ಷ್ಮಿ ಅವರನ್ನು ಅವಿರೋಧವಾಗಿ ಚುನಾವಣಾ ಧಿಕಾರಿ ಚಂದ್ರಶೇಖರ್ ಆಯ್ಕೆಗೊಳಿಸುವ ಮೂಲಕ ಘೋಷಿಸಿದರು.

ZP Chikkamagaluru ಅಭಿನಂದನೆ ಸಲ್ಲಿಸಿ ಮಾತನಾಡಿದ ನಗರಸಭಾ ಮಾಜಿ ಸದಸ್ಯ ಪುಷ್ಪರಾಜ್ ಗ್ರಾಮದಲ್ಲಿ ಜಾತಿ, ತಾರತಮ್ಯ ವೆಸಗದೇ ಎಲ್ಲಾ ಸದಸ್ಯರ ಸಹಭಾಗತ್ವದಲ್ಲಿ ಕಾರ್ಯನಿರ್ವಹಿಸಬೇಕು. ಅಂಭೇಡ್ಕರ್ ಆಶಯದಂತೆ ಸರ್ವಧರ್ಮ ವರಿಗೆ ಸಮಾನಾಗಿ ಸರ್ಕಾರದ ಸೌಲಭ್ಯವನ್ನು ಹಂಚಿಕೆ ಮಾಡುವ ಮೂಲಕ ಮಾದರಿ ಗ್ರಾಮವನ್ನಾಗಿ ರೂಪಿಸ ಬೇಕು ಎಂದು ಸಲಹೆ ಮಾಡಿದರು.

ಅಧ್ಯಕ್ಷ ಗೋಪಿಕೃಷ್ಣ ಮಾತನಾಡಿ ಪಂಚಾಯಿತಿ ವ್ಯಾಪ್ತಿಗೊಳಪಡುವ ಪ್ರತಿಯೊಂದು ಗ್ರಾಮಗಳಿಗೆ ಕುಡಿಯುವ ನೀರು, ಸುಗಮ ರಸ್ತೆ ಹಾಗೂ ಸರ್ಕಾರದ ಬಹುತೇಕ ಸೌಲಭ್ಯಗಳನ್ನು ಪ್ರಾಮಾಣ ಕವಾಗಿ ಒದಗಿಸುವ ಮೂಲಕ ಜನಪರವಾಗಿ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಸದಸ್ಯ ರವೀಂದ್ರ ಬೆಳವಾಡಿ, ಬಿಜೆಪಿ ಮಂಡಲ ಅಧ್ಯಕ್ಷ ಈಶ್ವರಳ್ಳಿ ಮಹೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜ್, ಓಬಿಸಿ ಮಂಡಲ ಅಧ್ಯಕ್ಷ ಚಂದ್ರಶೇಖರ್, ಅಕ್ರಮ-ಸಕ್ರಮ ಸಮಿತಿ ಮಾಜಿ ಅಧ್ಯಕ್ಷ ಬಿಳೇಕಲ್ಲಹಳ್ಳಿ ಪ್ರಕಾಶ್, ಗ್ರಾ.ಪಂ. ಸದಸ್ಯರಾದ ಬಿ.ಡಿ.ಜಗದೀಶ್, ಮಮತ, ಯು.ಸಿ. ಜಗದೀಶ್, ಹೆಚ್.ಕೆ.ನಾಗರತ್ನ, ಭಾನುಪ್ರಕಾಶ್, ಲೋಲಾಕ್ಷಿ, ಮಂಜುಳಾ, ಸಿ.ಸುಷ್ಮಾ, ಮಾದಯ್ಯ, ತಿಮ್ಮೇಗೌಡ, ಪಿಡಿಓ ಪಿ.ಲೀಲಾ ಹಾಗೂ ಗ್ರಾಮಸ್ಥರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...