Thursday, March 19, 2026
Thursday, March 19, 2026

Actor Prakash Raj ನಟ ಪ್ರಕಾಶ್ ರಾಜ್ ಅವರ ನಿರ್ದಿಗಂತ ತಂಡದಿಂದ “ಗಾಯಗಳು” ನಾಟಕ ಪ್ರದರ್ಶನ

Date:

Actor Prakash Raj ಖ್ಯಾತ ನಟ ಪ್ರಕಾಶ್ ರಾಜ್ ಅವರ ನಿರ್ದಿಗಂತ ಸಂಸ್ಥೆಯ ನೇತೃತ್ವದಲ್ಲಿ ಮೂಡಿಬರುತ್ತಿರುವ ಗಾಯಗಳು ನಾಟಕ ಪ್ರದರ್ಶನವು ಶಿವಮೊಗ್ಗದ ಸುವರ್ಣ ಸಂಸ್ಕೃತಿ ಭವನದಲ್ಲಿ 2023ರ ಆಗಸ್ಟ್ 07 ರಂದು ಸಂಜೆ 06:45ಕ್ಕೆ ಪ್ರದರ್ಶನ ಕಾಣಲಿದೆ.

ನಮ್ ಟೀಮ್ ರಂಗತಂಡವು ಈ ನಾಟಕವನ್ನು ಆಯೋಜಿಸಿದ್ದು, ಪರಿಕಲ್ಪನೆ, ವಿನ್ಯಾಸ ಮತ್ತು ನಿರ್ದೇಶನ ಡಾ. ಶ್ರೀಪಾದ ಭಟ್ ಅವರದು. ಶ್ವೇತಾರಾಣ ಹಾಸನ ಅವರ ಸಹ ನಿರ್ದೇಶನವಿದೆ.
ಪಿರಾಂಡೆಲೊ ಅವರ ವಾರ್, ಕುವೆಂಪು ಅವರ ಸ್ಮಶಾನ ಕುರುಕ್ಷೇತ್ರ, ಮಂಟೋ ಅವರ ಶರೀಫನ್, ಕೃಷ್ಣಮೂರ್ತಿ ಹನೂರು ಅವರ ಅಜ್ಞಾತನೊಬ್ಬನ ಆತ್ಮಕತೆ, ಬ್ರೆಕ್ಟ್, ಸಾಹಿರ್ ಲುಧಿಯಾನ್ವಿ ಸೇರಿದಂತೆ ಹಲವರ ಕಥೆ, ಕವನ, ಕಾದಂಬರಿ, ನಾಟಕ ಆಧಾರಿತ ರಂಗರೂಪವಿದು.

ಪ್ರವೇಶ ದರ 100 ರೂ. ನಾಟಕ ಪ್ರದರ್ಶನವನ್ನು ಸ್ವತಃ ಖ್ಯಾತ ಕಲಾವಿದ ಪ್ರಕಾಶ್ ರೈ ಅವರು ಚಾಲನೆ ನೀಡುವರು. ನಾಟಕ ಪ್ರದರ್ಶನಕ್ಕೆ 10 ನಿಮಿಷ ಮುಂಚಿತವಾಗಿಯೇ ಪ್ರೇಕ್ಷಕರು ಆಗಮಿಸಲು ಕೋರಲಾಗಿದೆ.

ಟಿಕೆಟ್‌ಗಾಗಿ ಸಂಪರ್ಕಿಸಿ 7353674369, 9844518866,

Actor Prakash Raj ಇಡೀ ಜಗತ್ತು ಯುದ್ಧೋನ್ಮಾದದಿಂದ ನರಳುತ್ತಿದೆ. ರಾಜಕಾರಣ ಗಳ, ಧರ್ಮಗುರುಗಳ, ಮಾರುಕಟ್ಟೆಯ ದಲ್ಲಾಳಿಗಳ ಕೈಗಳು ಲೇಟಿ ಮ್ಯಾಕ್‌ಬೆತ್‌ಗಳ ಕೈಗಳಂತೆ ಎಷ್ಟು ತೊಳೆದರೂ ತೊಡೆಯಲಾಗದ ರಕ್ತದ ಕಲೆಗಳಿಂದ ತೊಯ್ದಿದೆ. ಪುರುಷಾಹಂಕಾರದ ಈ ಗಾಯಗಳು ಮೇದಿನಿ ಮತ್ತು ಮಾನಿನಿಯರ ಕರುಳ ಕತ್ತರಿಸುತ್ತಿದೆ. ಮನುಷ್ಯರನ್ನೇ ವಿಭಜಿಸುವ, ಮನುಷ್ಯತ್ವವನ್ನೇ ಅಣಕಿಸುವ ವರ್ಣಭೇದವಂತೂ ಇನ್ನೂ ಕ್ರೂ. ಇವು ನಮಗೆ ನಾವೇ ಮಾಡಿಕೊಂಡ ಗಾಯಗಳು. ಇವುಗಳಿಗೆ ಮುಖಾಮುಖಿಯಾಗದೇ ನಮಗೆ ಬಿಡುಗಡೆ ಇಲ್ಲ. ಅಂಥ ಅಸಂಖ್ಯಾತ ಗಾಯಗಳ ಕಥೆಗಳಿವೆ ಈ ನೆಲದ ತುಂಬ. ಅವುಗಳಿಂದ ಯುದ್ಧ ಹಾಗೂ ಕೋಮುಹಿಂಸೆಯ ಕಥನಗಳಲ್ಲಿ ಕೆಲವನ್ನು ಆಯ್ದು ಇಲ್ಲಿ ರಂಗಚಿತ್ರವಾಗಿಸುತ್ತಿವೆ.
ಅವು ಸಹಜವಾಗಿಯೇ ಮಹಿಳೆಯರ ನೋವಿನ ಹಲ್ಲುಗಳಾಗಿ ಪರಿಗಮಿಸಿವೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa “ಸಹ್ಯಾದ್ರಿ ಉತ್ಸವ” ಕ್ಕೆ ಸರ್ಕಾರವು ಮತ್ತೆ ಚಾಲನೆ ನೀಡಲು ಒತ್ತಾಯಿಸುತ್ತೇನೆ- ಶಾಸಕ ಎಸ್.ಎನ್. ಚನ್ನಬಸಪ್ಪ

S.N. Channabasappa ಶಿವಮೊಗ್ಗ ಜಿಲ್ಲೆಯ ಸಮೃದ್ಧ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು...

Madhu Bangarappa ಎಸ್ಎಸ್ಎಲ್ ಸಿ ಪರೀಕ್ಷಾರ್ಥಿಗಳಿಗೆ ಶುಭ ಹಾರೈಸಿದ ಸಚಿವ ಮಧು ಬಂಗಾರಪ್ಪ

Madhu Bangarappa ರಾಜ್ಯಾದ್ಯಂತ ಇಂದಿನಿಂದ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1...

Jawahar Navodaya Vidyalaya ಕುಂದಗಸವಿಯ ಎಂ.ಎನ್.ಅಪೂರ್ವ ನವೋದಯ ವಿದ್ಯಾಲಯಕ್ಕೆ ಆಯ್ಕೆ

Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯ ನಡೆಸುವ ಪ್ರಸಕ್ತ ಸಾಲಿನ...