Saturday, December 6, 2025
Saturday, December 6, 2025

JCI Shivamogga ಸುದೀರ್ಘ ಅವಧಿಯ ಪೊಲೀಸ್ ಕರ್ತವ್ಯ ಆತ್ಮ ತೃಪ್ತಿ‌ ತಂದಿದೆ-ಶೇಖರ್

Date:

JCI Shivamogga ಸುಧೀರ್ಘ ಅವಧಿಯ ಪೊಲೀಸ್ ಕರ್ತವ್ಯ ಆತ್ಮತೃಪ್ತಿ ತಂದಿದೆ, ಅನೇಕ ಅಪರಾಧಗಳ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ವಿಶೇಷ ಪೊಲೀಸ್ ತಂಡದಲ್ಲಿ ನಾನೂ ಒಬ್ಬನಾಗಿದ್ದೇನೆ ಎನ್ನುವುದು ಜೀವಮಾನದ ಹಿರಿಮೆ ಎಂದೇ ಭಾವಿಸುತ್ತೇನೆ ಎಂದು ಶೇಖರ್ ರವರು ತಿಳಿಸಿದರು.

ಅವರು ಜೆಸಿಐ ಶಿವಮೊಗ್ಗ ಶರಾವತಿ ಘಟಕದಿಂದ ವಿನೋಬಾನಗರದ ವಿಧಾತ್ರಿ ಹೋಟೆಲ್ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಸೆಲ್ಯೂಟ್ ದ ಸೈಲೆಂಟ್ ಸ್ಟಾರ್ ಎನ್ನುವ ಕಾರ್ಯಕ್ರಮದಲ್ಲಿ ಮಾತಾನಾಡಿದರು, ಸಾಮಾನ್ಯ ಪೊಲೀಸ್ ಕಾನ್ಸೆಟೇಬಲ್ ಆಗಿ ವಿವಿಧ ಠಾಣೆಗಳಲ್ಲಿ, ರೌಡಿ ನಿಯಂತ್ರಣ ದಳದಲ್ಲಿ ಕೆಲಸ ಮಾಡುವಾಗ ಜೀವಭಯವನ್ನು ಬಿಟ್ಟು ಅಪಾಯಕಾರಿ ಹಂತದಲ್ಲಿ ಕೆಲಸ ಮಾಡುವ ಸಂದರ್ಭಗಳಿರುತ್ತದೆ, ಹೀಗಿದ್ದರೂ ಕರ್ತವ್ಯವನ್ನು ನಿಭಾಯಿಸಲೇ ಬೇಕಾಗುತ್ತದೆ, ಇಂತಹ ಕ್ಲಿಷ್ಟಕರಗಳಲ್ಲಿ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳ ಪ್ರೋತ್ಸಾಹ, ಮೆಚ್ಚುಗೆಗಳು ಎಂದಿಗೂ ಮರೆಯುವಂತದಲ್ಲ,

ಈ ನಿರಂತರತೆಯಲ್ಲಿ ಇದೀಗ ಬಡ್ತಿ ಸಿಕ್ಕಿದೆ, ತುಂಗಾನಗರದಲ್ಲಿ ಎಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ, ಜನಸ್ನೇಹಿ ಪೊಲೀಸ್ ಆಗಿದ್ದರೆ ನಾಗರೀಕರ ನಡುವೆ ಆರೋಗ್ಯಕರ ಸಂಪರ್ಕ ಸಾಧಿಸಬಹುದು ಇದರಿಂದ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಹಕಾರಿಯಾಗುತ್ತದೆ ಎಂದರು.

JCI Shivamogga ಜೆಸಿಐ ಶಿವಮೊಗ್ಗ ಶರಾವತಿ ಘಟಕವು ಆಹ್ವಾನಿಸಿ ಈ ಗೌರವ ಸಮರ್ಪಣೆ ಮಾಡಿರುವುದಕ್ಕೆ ನಾ ಎಂದಿಗೂ ಅಭಾರಿಯಾಗಿರುತ್ತೇನೆ, ಇದು ಮತ್ತಷ್ಟು ಜನಸ್ನೇಹಿ ಪೊಲೀಸ್ ಕರ್ತವ್ಯ ನಿರ್ವಹಣೆಗೆ ಸಹಕಾರಿಯಾಗುತ್ತದೆ ಎಂದು ಶೇಖರ್ ಅವರು ತಿಳಿಸಿದರು.

ಘಟಕಾಧ್ಯಕ್ಷರು ಜೆಸಿ.ಶೋಭಾ ಸತೀಶ್ ಮಾತಾನಾಡಿ ಜೆಸಿಐ ಇಂಡಿಯಾದ ಕಾರ್ಯಕ್ರಮವಾದ ಸೆಲ್ಯೂಟ್ ದ ಸೈಲೆಂಟ್ ಸ್ಟಾರ್ ನ ಶೀರ್ಷಿಕೆಯಲ್ಲಿ ಈ ಭಾರಿ ಪೊಲೀಸ್ ಕರ್ತವ್ಯದಲ್ಲಿರುವವರಿಗೆ ಆಹ್ವಾನಿಸಬೇಕಿತ್ತು ಈ ಮಾಸಿಕ ಗೌರವ ಸಮರ್ಪಣೆಗಾಗಿ ತುಂಗಾನಗರ ಪೊಲೀಸ್ ಠಾಣೆಯಲ್ಲಿರುವ ಎಎಸ್ಐ ಶೇಖರ್ ರವರಿಗೆ ಆಹ್ವಾನಿಸಲು ತೀರ್ಮಾನಿಸಿದಂತೆ ಅವರಿಗೆ ಬರಪೂರವಾಗಿ ಹಾರೈಸಿ ಸನ್ಮಾನ ಮಾಡಲಾಗಿದೆ, ಅವರೇ ಹೇಳಿದಂತೆ ಪೊಲೀಸ್ ಕೆಲಸ ಸಾಮಾನ್ಯವಲ್ಲ, ಮಡದಿ-ಮಕ್ಕಳಿಂದ ದೂರವಿದ್ದು ಕೆಲಸ ಮಾಡಬೇಕಾದ ಅತೀವ ಸವಾಲುಗಳನ್ನು ಸ್ವೀಕರಿಸಿ ಕರ್ತವ್ಯ ನಿಭಾಯಿಸುತ್ತಾರೆ ಹೀಗಾಗಿ ಅವರಿಗೆ ನಾವು ಎದೆಗೌರವಗಳಿಂದ ಸೆಲ್ಯೂಟ್ ಮಾಡಬೇಕಿದೆ ಈ ಸೌಭಾಗ್ಯ ನಮ್ಮ ಘಟಕಕ್ಲೆ ಲಭಿಸಿದೆ ಎಂದು ಹೇಳಿದರು,

ವೇದಿಕೆಯಲ್ಲಿ ಐಪಿಪಿ.ಜೆಸಿ.ಸೌಮ್ಯ ಅರಳಪ್ಪ, ಕಾರ್ಯದರ್ಶಿ, ಜೆಸಿ.ಸ್ಮಿತಾ ಮೋಹನ್, ಕಾರ್ಯಕ್ರಮದ ನಿರ್ದೇಶಕರಾಗಿ ಜೆಸಿ.ಚಂದ್ರಹಾಸ್ ಎನ್ ರಾಯ್ಕರ್ ಉಪಸ್ಥಿತರಿದ್ದರು,
ಕಾರ್ಯಕ್ರಮದಲ್ಲಿ ಸ್ಥಾಪಕ ಅಧ್ಯಕ್ಷರಾದ ಜೆಸಿ.ಜ್ಯೋತಿ ಅರಳಪ್ಪ, ಪೂರ್ವಾಧ್ಯಕ್ಷರುಗಳಾದ ಜೆಸಿ.ಗಾರಾ.ಶ್ರೀನಿವಾಸ್, ಜೆಸಿ.ಮೋಹನ್ ಕಲ್ಪತರು, ವಲಯಾಧಿಕಾರಿಗಳಾದ, ಜೆಸಿ.ಮಮತಾ ಶಿವಣ್ಣ, ಜೆಸಿ.ದಿವ್ಯಾ ಪ್ರವೀಣ್ ಸೇರಿದಂತೆ ಘಟಕದ ಎಲ್ಲಾ ಜೆಸಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...