Uttaradi Mutt ಶ್ರೀಕೃಷ್ಣ ಪರಮಾತ್ಮನ ಚರಿತ್ರೆಯ ಗಂಗೆಯಲ್ಲಿ ಸದಾ ಮೀಯುವ ಅವಕಾಶ ನಮ್ಮದಾಗಬೇಕು ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.
ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಶ್ರೀ ಸತ್ಯಧರ್ಮರ ಭಾಗವತ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಅನುಗ್ರಹ ಸಂದೇಶ ನೀಡಿದರು.
ಪರಮಾತ್ಮನ ಅವತಾರದ ಲೀಲೆಗಳನ್ನು ಚಿಂತನ ಮಾಡಬೇಕು. ಜ್ಞಾನಪೂರ್ವಕವಾಗಿ ದೇವರ ಅವತಾರದ ಮಹಿಮೆಗಳನ್ನುಘಿ, ಗುಣಗಳನ್ನು ಸತ್ಯವಾದ ಜ್ಞಾನದಿಂದ ತಿಳಿದುಕೊಳ್ಳಬೇಕು. ಕೃಷ್ಣನ ಲೀಲೆಗಳ ಶ್ರವಣ, ಕೀರ್ತನ ಮಾಡಿದರೆ ಘೋರವಾದ ಸಂಸಾರವನ್ನು ಪರಿಹಾರ ಮಾಡಿಕೊಂಡು ಅನಂತಕಾಲದ ಸುಖವನ್ನು ಹೊಂದಲು ಸಾಧ್ಯವಿದೆ. ಕೃಷ್ಣ ಕಥೆಯೇ ಸಂಸಾರ ಪರಿಹಾರಕ. ಭಕ್ತಿಯಿಂದ ಕೃಷ್ಣನ ನಾಮವನ್ನು ಸ್ಮರಣೆ ಮಾಡಿ ಎಂದರು.
ಮಹಾಭಾರತದ ನಾಮವನ್ನು ಉಚ್ಛಾರ ಮಾಡಿದರೆ, ಅರ್ಥವನ್ನು ತಿಳಿದುಕೊಂಡರೆ ಸಾಕು ಎಲ್ಲ ಪಾಪಗಳು ನಾಶವಾಗುತ್ತದೆ. ಮಹಾಭಾರತದಲ್ಲಿ ಭಗವಂತನ ದಿವ್ಯ ಮತ್ತು ಭವ್ಯವಾದ ಮಂಗಳ ಚರಿತ್ರೆಯನ್ನು ಕೊಂಡಾಡಿದ್ದಾರೆ. ಹೀಗಾಗಿ ಮಹಾಭಾರತ ಗ್ರಂಥ ಎಲ್ಲರಿಗೆ ಅತ್ಯಂತ ಹಿರಿದಾದುದು ಎಂದರು.
Uttaradi Mutt ಪಂಡಿತರಾದ ಎಲ್.ಎಸ್. ವಾದಿರಾಜಾಚಾರ್ಯ ಪ್ರವಚನ ನೀಡಿದರು.
ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ಪಂಡಿತರಾದ ನವರತ್ನ ಶ್ರೀನಿವಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ವಾದಿರಾಜ ಅಗ್ನಿಹೋತ್ರಿ, ಮಧುಸೂಧನ ನಾಡಿಗ್, ಸಿ.ಪಿ. ವಾದಿರಾಜ, ಗುರುರಾಜ ಕಟ್ಟಿಘಿ ಮೊದಲಾದವರಿದ್ದರು.
ಶ್ರೀ ವಿಷ್ಣು ತೀರ್ಥರ ಮಹಿಮೆ ವಿವರಿಸಿದ ಶ್ರೀಗಳು
ಶ್ರೀ ವಿಷ್ಣು ತೀರ್ಥರು ಮಹಾನುಭಾವರು. ಪರಮ ವೈರಾಗ್ಯದಿಂದ ಸನ್ಯಾಸ ತೆಗೆದುಕೊಂಡವರು.ಯಾವುದೇ ರೀತಿಯ ಪ್ರಾಪಂಚಿಕ, ಸಾಂಸಾರಿಕ, ವೈಷಯಿಕ ವಿಷಯಗಳ ಆಕರ್ಷಣೆ ಇಲ್ಲದಂತೆ ದೂರ ಇದ್ದು ಏಕಾಂತದಲ್ಲಿ ಪರಮಾತ್ಮನ ಸ್ಮರಣೆಗಾಗಿ ಜೀವನವನ್ನು ಮೀಸಲಿಟ್ಟವರು ಎಂದರು.
ಸಕಲ ಶಾಸಗಳ ಅಭಿಪ್ರಾಯ, ಸಾರ ಭಗವಂತನ ಸ್ಮರಣೆ ಮಾಡಬೇಕು, ದೇವರ ಅನುಗ್ರಹ ಪಡೆಯಲು ಪ್ರಯತ್ನಿಸಬೇಕು ಎಂಬುದೇ ಆಗಿದೆ. ಶ್ರೀಮದ್ ಭಾಗವತ ಮತ್ತು ನ್ಯಾಯಸುಧಾ ಗ್ರಂಥಗಳಿಗೆ ವಿಷ್ಣು ತೀರ್ಥರು ಬರೆದ ವ್ಯಾಖ್ಯಾನಗಳಲ್ಲಿ ಇದನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದು ಶ್ರೀ ಸತ್ಯಾತ್ಮ ತೀರ್ಥರು ಹೇಳಿದರು.