Karnataka Sugama Sangeeta Parishath ಸಾಹಿತಿ ವೆಂಕಟೇಶಮೂರ್ತಿ ಎಚ್.ಎಸ್. ಅವರು ಕನ್ನಡ ಸಾಹಿತ್ಯ, ಸುಗಮ ಸಂಗೀತ,
ರಂಗಭೂಮಿ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಒಡನಾಡಿಗಳು ಕೊಡುಗೆಗಳನ್ನ ಅವರ ಸ್ಮರಿಸಿಕೊಂಡರೆ,
ಸುಗಮ ಸಂಗೀತ ಕ್ಷೇತ್ರದ ಪ್ರಮುಖರು ಅವರ ಗೀತೆಗಳನ್ನು ಹಾಡುವ ಮೂಲಕ ಗೀತ ಗೌರವ ಸಲ್ಲಿಸಿದರು.
ವೆಂಕಟೇಶಮೂರ್ತಿ 80ನೇ ವರ್ಷದ ಜನ್ಮದಿನದ ಪ್ರಯುಕ್ತ ಕರ್ನಾಟಕ ಸುಗಮ ಸಂಗೀತ ಪರಿಷತ್ತು ಬೆಂಗಳೂರಿನಲ್ಲಿ ಹಮ್ಮಿಕೊಂಡ
“ಭಾವ ರಂಗ ಚಿತ್ರ ಧಾರಾ’ ಕಾರ್ಯಕ್ರಮದಲ್ಲಿ ಅಂಕಿತ ಪುಸ್ತಕ ಹೊರತಂದ ‘ನೆನಪಿನ ಒರತೆ’ ಪುಸ್ತಕ ಬಿಡುಗಡೆ ಮಾಡಲಾಯಿತು.
ಇದು ವೆಂಕಟೇಶಮೂರ್ತಿ ಅವರ ಸಾಹಿತ್ಯ ಕೇಂದ್ರಿತ ಆತ್ಮಕಥನವಾಗಿದೆ.
Karnataka Sugama Sangeeta Parishath ಸಾಹಿತಿ ದೊಡ್ಡರಂಗೇಗೌಡ ಅವರು ಮಾತನಾಡಿ, ವೆಂಕಟೇಶಮೂರ್ತಿ ಅವರು ಯಾವತ್ತೂ ತಮ್ಮ ಕವಿತೆಗಳನ್ನು ಬಚ್ಚಿಟ್ಟುಕೊಂಡಿಲ್ಲ.ಸಮಾಜದಸ್ವಾಸ್ಯ ನಿರ್ಮಾಣ ಮಾಡಲು ಸದಾ ಎಚ್ಚರಿಕೆಯಿಂದಲೇ ಬರೆಯುತ್ತಾರೆ. ಅವರು ಸೃಜನಶೀಲ ಸಮುದಾಯದ ನಡುವೆ ಸಕ್ರಿಯವಾದ ಸಂತ ಎಂದರು.
ಅಂಜನಾ ಹೆಗಡೆ ನಿರೂಪಣೆ ಮಾಡಿದ್ದಾರೆ. ಗಾಯಕರಾದ ವೈ.ಕೆ. ಮುದ್ದುಕೃಷ್ಣ,ಮುದ್ದು ಮೋಹನ್, ಕಿಕ್ಕೇರಿ
ಕೃಷ್ಣಮೂರ್ತಿ, ನಗರ ಶ್ರೀನಿವಾಸ, ಸಂಗೀತ ಕಟ್ಟಿ, ಪ್ರೇಮಲತಾ ಮೆಚ್ಚುಗೆಯ ಮಾತುಗಳನ್ನಾಡಿದರು.
ಇದೇ ಸಂದರ್ಭದಲ್ಲಿ ಸಾಹಿತಿ ಚನ್ನಗಿರಿ ತಿರುಮಲರಾವ್ ಅವರು ಕವಿ ಎಚ್ ಎಸ್ ವಿ ಅವರಿಗೆ ನೆನಪಿನ ಕಣಿಕೆ ನೀಡಿದರು.