IMA Shivamogga ಐಎಂಎ ಶಿವಮೊಗ್ಗದಿಂದ ವಿಶಿಷ್ಟವಾದ ಚಾಯ್ ಪೆ ಚರ್ಚಾ ಕಾರ್ಯಕ್ರಮವನ್ನು ನಡೆಸಲಾಯಿತು.
ಇದರಲ್ಲಿ ಪ್ರತಿಭಾವಂತ ಹಿರಿಯ ಸದಸ್ಯ , ಫಿಸಿಷಿಯನ್ ಡಾ. ಶ್ರೀಕಾಂತ್ ಎನ್ ಹೆಗ್ಡೆ ಅವರೊಂದಿಗೆ ಅನೌಪಚಾರಿಕ ಸಂವಾದವನ್ನು ನಡೆಸಲಾಯಿತು ಮತ್ತು ಅವರ ಹಕ್ಕಿಗಳ ಛಾಯಾಚಿತ್ರ ಹವ್ಯಾಸವನ್ನು ಪ್ರದರ್ಶಿಸಲಾಯಿತು.
ಇಂತಹ ಕಾರ್ಯಕ್ರಮದ ಗುರಿ ಕಿರಿಯ ವೈದ್ಯ ಸದಸ್ಯರು , ಸಿಮ್ಸ್ ಮತ್ತು ಸುಇಮ್ಸ್ ವೈದ್ಯ ವಿದ್ಯಾರ್ಥಿಗಳಿಗೆ ವಿಶ್ರಾಂತಿ ಹಾಗು ಮನಶಾಂತಿಗಾಗಿ ಒಳ್ಳೆಯ ಹವ್ಯಾಸವನ್ನು ಪೋಷಿಸಲು ಪ್ರೇರೇಪಿಸುವುದಾಗಿತ್ತು.
ಈ ಸಂಚಿಕೆಯನ್ನು ಚಿರ್ಪ್ಸ್ ಮತ್ತು ಕ್ಲಿಕ್ಸ್ ಎಂದು ಕರೆಯಲಾಯಿತು.
ಡಾ. ಶ್ರೀಕಾಂತ್ ಎನ್ ಹೆಗ್ಡೆಯವರ ಪಕ್ಷಿ ಛಾಯಾಗ್ರಹಣದ ಉತ್ಸಾಹದ ಬಗ್ಗೆ ಮತ್ತು ಪಕ್ಷಿಗಳ ಜೀವನ ಮತ್ತು ವಾಸಸ್ಥಾನದ ಬಗ್ಗೆ ಆಳವಾಗಿ ತಿಳಿದುಕೊಳ್ಳುವ ವಿಷಯಗಳನ್ನು ಅಧ್ಯಕ್ಷರಾದ ಡಾ .ಅರುಣ್ ಎಂ ಎಸ್ ಹಾಗು ಕಾರ್ಯದರ್ಶಿ ಡಾ .ರಕ್ಷಾ ರಾವ್ ಅವರು ಪ್ರಶ್ನೋತ್ತರ ಮುಖಾಂತರ ನಡೆಸಿಕೊಟ್ಟರು . ಭಾಗವಹಿಸಿದ ಎಲ್ಲರಿಗೂ ಇದು ತುಂಬಾ ತೃಪ್ತಿಕರವಾಗಿತ್ತು.
IMA Shivamogga ಡಾ. ಎಸ್.ಎನ್. ಹೆಗಡೆಯವರು ಇದು ಕಾಫಿ ವಿತ್ ಕರಣ್‌ಗೆ ಸಮಾನವಾಗಿ ಚಾಯ್ ವಿತ್ ಅರುಣ್ ಎಂದು ಜನಪ್ರಿಯತೆ ಗಳಿಸಲಿ ಎಂದು ಹಾರೈಸಿದರು . ಡಾ.ಶ್ರೀಕಾಂತ್ ಹೆಗ್ಡೆ ಅವರು ವರ್ಣರಂಜಿತ ಪಕ್ಷಿಗಳ ಫೋಟೋಗಳೊಂದಿಗೆ ಪಿಪಿಟಿಯನ್ನು ಸಿದ್ಧಪಡಿಸಿದರು.
ಅಧ್ಯಕ್ಷ ಡಾ. ಅರುಣ್ ಎಂ.ಎಸ್ ಮತ್ತು ಕಾರ್ಯದರ್ಶಿ ಡಾ. ರಕ್ಷಾ ರಾವ್ ಅವರು ಟೆಲಿ ಶೋನಂತೆಯೇ ಸೂಕ್ತವಾದ ಪ್ರಶ್ನೆಗಳೊಂದಿಗೆ ಮಾತುಕತೆ ನಡೆಸಿದರು.
ಸದಸ್ಯರ ಹವ್ಯಾಸಗಳನ್ನು ಪ್ರದರ್ಶಿಸಿ ಇತರರನ್ನು ಹುರಿದುಂಬಿಸುವ ಚಾಯ್ ಪೆ ಚರ್ಚಾ ಪ್ರಯೋಗವನ್ನು ಹಾಜರಿದ್ದವರೆಲ್ಲರೂ ಸ್ವಾಗತಿಸಿದರು.
ಇತರ ಪ್ರತಿಭಾವಂತ ಸದಸ್ಯರಿಂದ ಹೆಚ್ಚಿನ ಸರಣಿ ಮಾಲಿಕೆಗಳನ್ನು ಮುಂಬರುವ ದಿನಗಳಲ್ಲಿ ನಡೆಸುವ ಯೋಜನೆ ಇದೆ ಎಂದು ಡಾ . ಅರುಣ್ ನುಡಿದರು .
ಈ ಕಾರ್ಯಕ್ರಮವು ನಗರದ ಐಎಂಎ ಸಭಾಂಗಣದಲ್ಲಿ ನಡೆಯಿತು