DSS Chikkamagalur ನ.ರಾ.ಪುರ ತಾಲ್ಲೂಕಿನ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಪುನರ್ ರಚನೆ ಹಾಗೂ ಕಾರ್ಯಕರ್ತರ ಸಭೆಯನ್ನು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಿ.ಪಂ. ಮಾಜಿ ಸದಸ್ಯ ಸುಬ್ರಹ್ಮಣ್ಯ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ ದಸಂಸವು 70ರ ದಶಕದಲ್ಲಿ ಬಿ.ಕೃಷ್ಟ್ಣಪ್ಪ ಸ್ಥಾಪಿಸಿದ ಸಂಘಟನೆಯಾಗಿದ್ದು ಈ ಸಮಿತಿಗೆ ಸಂವಿಧಾನ ಸಿದ್ದಾಂತವಿದೆ.
ಪತ್ರಿಕಾಗೋಷ್ಠಿಗೆ ಸೀಮಿತವಾದ ಸಂಘಟನೆಯಲ್ಲ. ರಾಜ್ಯದ ನಾಯಕ ಮಾವಳ್ಳಿ ಶಂಕರ್ ನೇತೃತ್ವದಲ್ಲಿ ರಾಜ್ಯದ ಮೂಲೆ ಮೂಲೆಗಳಲ್ಲಿ ಸಂಘಟಿಸಲಾಗುತ್ತಿದೆ ಎಂದಿದ್ದಾರೆ.
DSS Chikkamagalur ಅಧ್ಯಕ್ಷತೆ ವಹಿಸಿ ಮಾತನಾಡಿದ ಸುಬ್ರಹ್ಮಣ್ಯ ತಾಲ್ಲೂಕಿನಲ್ಲಿ ಹಲವಾರು ಸಮಸ್ಯೆಗಳಿರುವ ಹಿನ್ನೆಲೆಯಲ್ಲಿ ದಸಂಸ ಹಲವಾರು ಸಂಕಷ್ಟಗಳ ನಡುವೆ ಅತ್ಯಂತ ಚುರುಕಿನಿಂದ ಜನಪರವಾದ ಕೆಲಸ ಮಾಡುತ್ತಿದ್ದು ಪ್ರತಿಯೊಬ್ಬರು ಒಗ್ಗಟ್ಟಾಗಿ ಹೋರಾಟ ರೂಪಿಸಿದರೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಮಹೇಂದ್ರ, ತರೀಕೆರೆ ತಾಲ್ಲೂಕಿನ ಸಂಚಾಲ ಕರಾದ ರಾಮಚಂದ್ರ, ಮೌಂಟ್, ಸುಂದರೇಶ್, ಭೀಮ್ ಆರ್ಮಿ ನಾಗರಾಜ್ ಭಾಗವಹಿಸಿದ್ದರು
ಬಳಿಕ ನೂತನ ಸಮಿತಿಗೆ ಸಂಚಾಲಕರಾಗಿ ವಸಂತಕುಮಾರ್, ಅಂಬೇಡ್ಕರ್ ನಗರ ಸಂಘಟನಾ ಸಂಚಾಲಕ ಉಮೇಶ್ ಕೆ.ಕಣಬೂರು, ಮಹೇಶ್ ಭೈರಾಪುರ, ಬಾಬು ಅವರನ್ನು ಆಯ್ಕೆ ಮಾಡಲಾಯಿತು.