Dalit Student Council ಪ.ಜಾತಿ ಮತ್ತು ಪ.ಪಂಗಡದ ಸಮುದಾಯಗಳಿಗೆ ಮೀಸಲಿರಿಸಿರುವ ಅನು ದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸದೇ ಜನಾಂಗದ ಅಭಿವೃದ್ದಿಗೆ ಉಪಯೋಗಿಸಬೇಕು ಎಂದು ದಲಿತ ವಿದ್ಯಾರ್ಥಿ ಪರಿಷತ್ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು.
ಈ ಸಂಬಂಧ ಅಪರ ಜಿಲ್ಲಾಧಿಕಾರಿ ನಾರಾಯಣ ಕನಕರೆಡ್ಡಿ ಮೂಲಕ ಮುಖ್ಯಮಂತ್ರಿಗಳಿಗೆ ಬುಧವಾರ ಮನವಿ ಸಲ್ಲಿಸಿದ ಮುಖಂಡರುಗಳು ರಾಜ್ಯ ಸರ್ಕಾರ ಎಸ್ಸಿ, ಎಸ್ಟಿ ಸಮುದಾಯಕ್ಕೆ 11 ಸಾವಿರ ಕೋಟಿ ಮೀಸಲಿರಿ ವುದನ್ನು ಬೇರೆಡೆ ಬಳಸದೇ ಜನಾಂಗದ ಶ್ರೇಯೋಭಿವೃದ್ದಿ ಮಾತ್ರ ಬಳಕೆ ಮಾಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ವಿದ್ಯಾರ್ಥಿ ಪರಿಷತ್‌ನ ಜಿಲ್ಲಾ ಸಂಚಾಲಕಿ ಸಂಗೀತ ಪ್ರಸಾದ್ ಪ.ಜಾತಿ, ಪ.ಪಂಗಡ ಸಮುದಾಯಗಳಿಗೆ 11 ಸಾವಿರ ಕೋಟಿ ರೂ. ಹಣವನ್ನು ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿರುವುದು ಖಂಡನೀಯ.
Dalit Student Council ಈ ನಿರ್ಧಾರವನ್ನು ಸರ್ಕಾರ ಕೂಡಲೇ ಕೈಬಿಟ್ಟು ಸಮುದಾಯದ ಏಳಿಗೆಗೆ ಉಪಯೋಗಿಸು ವಂತಾಗಬೇಕು ಎಂದು ಮನವಿ ಮಾಡಿದರು.
ಶೋಷಿತ ಸಮುದಾಯಗಳ ಹಕ್ಕು ಕಿತ್ತುಕೊಂಡು ಘೋಷಣೆಯ ಯೋಜನೆಗಳಿಗಾಗಿ ಸಮುದಾಯದ ಹಣ ಬಳಸದೇ ಜನಾಂಗದಲ್ಲಿರುವ ವಿದ್ಯಾರ್ಥಿಗಳು, ನಿರುದ್ಯೋಗಿ ಯುವಕರು, ಮಹಿಳೆಯರು, ಮಕ್ಕಳು ಹಾಗೂ ರೈತ ಕೂಲಿ ಕಾರ್ಮಿಕರ ಅಭಿವೃದ್ದಿಗೆ ಅನುದಾನ ಮೀಸಲಿಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ದಲಿತ ವಿದ್ಯಾರ್ಥಿ ಪರಿಷತ್‌ನ ಕಾರ್ಯದರ್ಶಿ ಮೋಹನೇಶ್, ಸದಸ್ಯರುಗಳಾದ ಕಾರ್ತೀಕ್, ಕುಮಾರ್, ಸಂಜಯ್, ಶರತ್, ದಸಂಸ ಮುಖಂಡರುಗಳಾದ ಕೇಶವ, ಮಧು ಹಾಜರಿದ್ದರು.