VISL Bhadravati ಭದ್ರಾವತಿ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಲ್ಲಿ ಉತ್ಪಾದನೆಯನ್ನು ಪುನರಾರಂಭಿಸಲು ಭಾರತೀಯ ಉಕ್ಕು ಪ್ರಾಧಿಕಾರವು ಒಪ್ಪಿಗೆ ಸೂಚಿಸಿದೆ.
ಕೇಂದ್ರ ಉಕ್ಕು ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಅಧ್ಯಕ್ಷತೆಯಲ್ಲಿ ನಡೆದ ಭಾರತೀಯ ಉಕ್ಕು ಪ್ರಾಧಿಕಾರದ ಸಭೆಯಲ್ಲಿ ವಿಐಎಸ್ಎಲ್ ನಲ್ಲಿ ಉತ್ಪಾದನೆ ಪುನರಾರಂಭಕ್ಕೆ ತಕ್ಷಣದಿಂದಲೇ ಪ್ರಕ್ರಿಯೆ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.
ಕಾರ್ಖಾನೆಯಲ್ಲಿ ಸದ್ಯದ ಮಟ್ಟಿಗೆ ಬಾರ್ ಮಿಲ್ ಮತ್ತು ಪ್ರೈಮರಿ ಮೇಲ್ ಘಟಕಗಳನ್ನು ಮಾತ್ರ ಆರಂಭಿಸಬಹುದಾಗಿದೆ.
ಹೀಗಾಗಿ, ಅವುಗಳನ್ನು ಮಾತ್ರ ಆರಂಭಿಸುವಂತೆ ಸೂಚಿಸಲಾಗಿದೆ. ಉತ್ಪಾದನಾ ವೆಚ್ಚ ಅಧಿಕವಾಗಿ ಕಾರ್ಖಾನೆಯು ತೀವ್ರ ಆರ್ಥಿಕ ಸಂಕಷ್ಟ ದಲ್ಲಿದ್ದ ಕಾರಣ ಕೇಂದ್ರ ಸರ್ಕಾರವು ಜನವರಿಯಲ್ಲಿ ಉತ್ಪಾದನೆಯನ್ನು ಸ್ಥಗಿತಗೊಳಿಸಿ, ಬೀಗ ಮುದ್ರೆ ಹಾಕಿತ್ತು. ಸಂಸದರಾದ ಬಿ ವೈ ರಾಘವೇಂದ್ರ ಮತ್ತು ರಾಜ್ಯ ಸರ್ಕಾರದ ತೀವ್ರ ಒತ್ತಡ ಹಿನ್ನಲೆಯಲ್ಲಿ ವಿಧಾನಸಭೆ ಚುನಾವಣೆ ಸಮಯದಲ್ಲಿ ಬೀಗ ಮುದ್ರೆ ನಿರ್ಧಾರವನ್ನು ಹಿಂತೆಗೆದುಕೊಂಡಿತ್ತು.
ಈಗ ಉತ್ಪಾದನೆಯನ್ನು ಪುನಾರಂಭಿಸುವ ನಿರ್ಧಾರ ಪ್ರಕಟಿಸಿದೆ. ಮುಚ್ಚಿ ಹೋಗಿದ್ದ ಕಾರ್ಖಾನೆಯಲ್ಲಿ ಉತ್ಪಾದನೆ ಪುನರಾರಂಭಿಸುವ ನಿರ್ಧಾರವು ಸದ್ಯದ ಮಟ್ಟಿಗೆ ಮರು ಜೀವ ನೀಡಿದಂತಾಗಿದೆ. ಕಾರ್ಖಾನೆಯ ಕಾರ್ಮಿಕರು ತಮ್ಮ ಮುಂದಿನ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದರು.
ಆದರೆ ಈಗ ಉತ್ಪಾದನೆ ಪುನರಾರಂಭಗೊಳ್ಳುತ್ತಿರುವುದರಿಂದ ಕಾರ್ಮಿಕರಲ್ಲಿ ನಿಟ್ಟುಸಿರು ಬಿಡುವಂತಾಗಿದೆ.
VISL Bhadravati ತಕ್ಷಣದಿಂದ ಯಂತ್ರೋಪಕರಣಗಳ ದುರಸ್ತಿ ಪ್ರಕ್ರಿಯೆ ಕೈಗೊಂಡರೂ ಬಾರ್ ಮಿಲ್ ನಲ್ಲಿ ಉತ್ಪಾದನೆ ಆರಂಭಿಸಲು ಕನಿಷ್ಠ 10 ದಿನ ಮತ್ತು ಪ್ರೈಮರಿ ಮಿಲ್ ನಲ್ಲಿ ಕನಿಷ್ಠ 20 ದಿನವಾದರೂ ಸಮಯ ಬೇಕು. ಪ್ರೈಮರಿ ಮಿಲ್ ಗೆ ಅಗತ್ಯವಾದ ಕಚ್ಚಾ ಸಾಮಗ್ರಿಯನ್ನು ಛತ್ತೀಸ್ಗಡದಿಂದ ಬರಬೇಕಾಗಿದೆ. ರಿಂದ ವಿಐಎಸ್ಎಲ್ ಆಡಳಿತ ಮಂಡಲ್ ಯು ಆಗಸ್ಟ್ 10 ರಿಂದ ಬಾರ್ಮಿಲ್ ಮತ್ತು ಅಗಸ್ಟ್ 20 ರಿಂದ 30ರೊಳಗೆ ಪ್ರೈಮರಿ ಮಿಲ್ ನಲ್ಲಿ ಉತ್ಪಾದನೆ ಆರಂಭಿಸಲು ನಿರ್ಧರಿಸಿದೆ.